Saturday, July 27, 2024
Homeರಾಷ್ಟ್ರೀಯಬರೋಬ್ಬರಿ 1200 ಜನರಿರುವ ಬಹುದೊಡ್ಡ ಕುಟುಂಬದಲ್ಲಿ 350 ಮತದಾರರು

ಬರೋಬ್ಬರಿ 1200 ಜನರಿರುವ ಬಹುದೊಡ್ಡ ಕುಟುಂಬದಲ್ಲಿ 350 ಮತದಾರರು

ಸೋನಿತ್ಪುರ್(ಅಸ್ಸಾಂ), ಏ.15- ಬರೋಬ್ಬರಿ 1200 ಜನ ಇರುವ ಬಹು ದೊಡ್ಡ ಕುಟುಂಬ. ಇಲ್ಲಿ ಅರ್ಹ ಮತದಾರರೇ 350. ಇದೇ ಏ.19ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಲು ಸಜ್ಜಾಗಿದ್ದಾರೆ, ಅಸ್ಸಾಂನ ಸೋನಿತ್ಪುರ್ ಜಿಲ್ಲೆಯ ಪುಲೋಗುರಿಯಲ್ಲಿರುವ ನೇಪಾಳಿ ಕುಟುಂಬವೊಂದರಲ್ಲೇ ಬರೋಬ್ಬರಿ 350 ಮತದಾರರಿದ್ದಾರೆ. ಈ ಮೂಲಕ ಹೆಚ್ಚು ಮತದಾರರಿರುವ ಅತಿದೊಡ್ಡ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮೂಲಕ ಅಸ್ಸಾಂ ನ ಈ ಥಾಪಾ ಕುಟುಂಬ ದೇಶದ ಗಮನ ಸೆಳೆದಿದೆ. ದಿವಂಗತ ರಾನ್ಬಹದ್ದೂರ್ ಥಾಪಾ ಅವರ ಕುಟುಂಬ ಸೋನಿತ್ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಂಗಪಾರ ವಿಧಾನಸಭಾ ಕ್ಷೇತ್ರದಲ್ಲಿದೆ.ರಾನ್ ಬಹದ್ದೂರ್ ಥಾಪಾ ಅವರಿಗೆ 5 ಹೆಂಡತಿಯರಿದ್ದರು. 12 ಪುತ್ರರು ಮತ್ತು 9 ಪುತ್ರಿಯರು ಅಗಲಿದ್ದಾರೆ. ಒಟ್ಟು 1200 ಸದಸ್ಯರಿರುವ ಈ ಕುಟುಂಬದಲ್ಲಿ 350 ಸದಸ್ಯರು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಲಿದ್ದಾರೆ.

ಸೋನಿತ್ಪುರ ಲೋಕಸಭಾ ಕ್ಷೇತ್ರದ ಪುಲೋಗುರಿ ನೇಪಾಳಿ ಪಾಮ್ ಪ್ರದೇಶದಲ್ಲಿ ಒಂದೇ ಪೂರ್ವಜರ 300 ಕುಟುಂಬಗಳು ವಾಸಿಸುತ್ತಿವೆ ಎಂದು ಪಾಮ್ ಗ್ರಾಮದ ಮುಖ್ಯಸ್ಥ ರಾನ್ ಬಹದ್ದೂರ್ ಅವರ ಪುತ್ರ ಟಿಲ್ ಬಹದ್ದೂರ್ ತಿಳಿಸಿದ್ದಾರೆ. ನನ್ನ ತಂದೆ 1964ರಲ್ಲಿ ನನ್ನ ಅಜ್ಜನ ಜೊತೆ ಅಸ್ಸಾಂಗೆ ಬಂದು ನೆಲೆಸಿದ್ದರು. ನನ್ನ ತಂದೆಗೆ ಐವರು ಹೆಂಡತಿಯರು ಮತ್ತು ನನಗೆ 12 ಸೋದರರು ಮತ್ತು 9 ಸೋದರಿಯರು. ರಾನ್ ಬಹದ್ದೂರ್ ಅವರು 54 ಮೊಮ್ಮಕ್ಕಳನ್ನು ಹೊಂದಿದ್ದರು.

ಒಟ್ಟಾರೆ ನಮ್ಮ ಕುಟುಂಬದಲ್ಲಿ 1200 ಸದಸ್ಯರಿದ್ದು 350 ಸದಸ್ಯರು ಮತದಾನ ಹಕ್ಕು ಪಡೆದಿದ್ದೇವೆ. ಇಷ್ಟಾದರೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ನಮಗೆ ಸಾಧ್ಯವಾಗಿಲ್ಲ. ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದಿದ್ದಾರೆ. ಆದರೂ ಸರ್ಕಾರಿ ಕೆಲಸ ಸಿಕ್ಕಿಲ್ಲ. ಕೆಲವರು ಬೆಂಗಳೂರು ಹಾಗೂ ಬೇರೆ ನಗರಗಳಿಗೆ ಹೋಗಿ ಖಾಸಗಿ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಕೆಲವರು ದಿನಗೂಲಿ ಕೆಲಸ ಮಾಡುತ್ತಿದ್ದಾರೆ.

1989ರಿಂದ ನಾನು ಪ್ರಧಾನನಾಗಿ ಕೆಲಸ ಮಾಡುತ್ತಿದ್ದೇನೆ. ನನಗೂ 8 ಮಕ್ಕಳಿದ್ದಾರೆ ಎಂದು ಟಿಲ್ ಬಹದ್ದೂರ್ ತಿಳಿಸಿದರು.ನಮ್ಮ ತಂದೆ ಸರ್ಕಾರದ ಯಾವುದೇ ಸಹಾಯವಿಲ್ಲದೇ 21 ಮಕ್ಕಳನ್ನು ಬೆಳೆಸಿದರು. ಅವರು 1997ರಲ್ಲಿ ನಿಧನರಾದರು. 9 ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡ ಸೋನಿತ್ಪುರ್ ಲೋಕಸಭಾ ಕ್ಷೇತ್ರಗಳಲ್ಲಿ 16.25 ಲಕ್ಷಕ್ಕೂ ಅ„ಕ ಮತದಾರರಿದ್ದಾರೆ. ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಿಗೆ 3 ಹಂತಗಳಲ್ಲಿ ಅಂದರೆ ಏ.19, ಏ.26 ಹಾಗೂ ಮೇ.7ರಂದು ಮತದಾನ ನಡೆಯಲಿದೆ.

RELATED ARTICLES

Latest News