Thursday, December 12, 2024
Homeರಾಷ್ಟ್ರೀಯ | Nationalದ್ವಿಚಕ್ರ ವಾಹನಗಳ ಅಪಘಾತದಲ್ಲಿ 20 ರಿಂದ 40 ವರ್ಷ ವಯಸ್ಸಿನವರೇ ಹೆಚ್ಚು ಬಲಿಯಾಗಿದ್ದಾರೆ : ಏಮ್ಸ್

ದ್ವಿಚಕ್ರ ವಾಹನಗಳ ಅಪಘಾತದಲ್ಲಿ 20 ರಿಂದ 40 ವರ್ಷ ವಯಸ್ಸಿನವರೇ ಹೆಚ್ಚು ಬಲಿಯಾಗಿದ್ದಾರೆ : ಏಮ್ಸ್

ನವದೆಹಲಿ,ಫೆ 29 : ಇಲ್ಲಿನ ಏಮ್ಸ್ ಟ್ರಾಮಾ ಸೆಂಟರ್‍ನಲ್ಲಿ ಕಳೆದ 2022ರಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ ದಿಲ್ಲಿಯಲ್ಲಿ ನಡೆದ ದ್ವಿಚಕ್ರ ವಾಹನಗಳ ಅಪಘಾತ ಪ್ರಕರಣದಲ್ಲಿ ಶೇ. 40 ರಷ್ಟು ಹಿಂಬದಿ ಸವಾರರು ಹೆಲ್ಮೆಟ್ ಬಳಸದೇ ತಲೆಗೆ ಗಾಯ ಮಾಡಿಕೊಂಡಿದ್ದಾರೆ.
ಆದಾಗ್ಯೂ, ಸುಮಾರು ಶೇ.85 ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‍ಗಳನ್ನು ಬಳಸಿದರೆ, ಜೀವ ಉಳಿಯುತ್ತಿತ್ತು ಎಂದು ಟ್ರಾಮಾ ಸೆಂಟರ್ ಮುಖ್ಯಸ್ಥ ಡಾ ಕಮ್ರಾನ್ ಫಾರೂಕ್ ಹೇಳಿದ್ದಾರೆ.

ಜನವರಿ 21 ರಿಂದ ಡಿಸೆಂಬರ್ 22 ರ ನಡುವೆ ಕೇಂದ್ರದಲ್ಲಿ ಸಂಗ್ರಹಿಸಿದ ಡೇಟಾವನ್ನು ಅವರು ಉಲ್ಲೇಖಿಸಿ,ಅಂಕಿಅಂಶಗಳ ಪ್ರಕಾರ, 2022 ರಲ್ಲಿ ಆಸ್ಪತ್ರೆಗೆ ಕರೆತರಲಾದ ಸುಮಾರು 82 ಪ್ರತಿಶತದಷ್ಟು ರೋಗಿಗಳು ರಸ್ತೆ ಅಪಘಾತಗಳಿಗೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದರು. 2022 ರಲ್ಲಿ ಆಸ್ಪತ್ರೆಯು 53,541 ಆಘಾತಕಾರಿ ರೋಗಿಗಳು ಬಂದಿದ್ದರು ಎಂದು ಅದರಲ್ಲಿ ಸುಮಾರು 25 ಪ್ರತಿಶತದಷ್ಟು ಜನರು ರಸ್ತೆ ಅಪಘಾತದಲ್ಲಿ ಬಲಿಯಾದವರು.

ವಿಪರ್ಯಾಸವೆಂದರೆ ರಸ್ತೆ ಅಪಘಾತದಲ್ಲಿ ಬಲಿಯಾದವರಲ್ಲಿ ಹೆಚ್ಚಿನವರು 20 ರಿಂದ 40 ವರ್ಷ ವಯಸ್ಸಿನವರು ಎಂದು ಡಾ ಫಾರೂಕ್ ಹೇಳಿದರು. ಈ ವಯೋಮಾನವು ಅತ್ಯಂತ ಸಕ್ರಿಯ ಮತ್ತು ಉತ್ಪಾದಕವಾಗಿರುವುದರಿಂದ, ಅಪಘಾತಗಳಿಗೆ ಬಲಿಯಾಗುವುದು ಅವರ ಕುಟುಂಬಗಳ ಮೇಲೆ ಮಾತ್ರವಲ್ಲದೆ ದೇಶದ ಆರ್ಥಿಕತೆಯ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತದೆ.ಹಾಗಾಗಿ ರಸ್ತೆ ಅಪಘಾತಕ್ಕೀಡಾದವರಿಗೆ ತಕ್ಷಣದ ನೆರವು ಮತ್ತು ಚಿಕಿತ್ಸೆ ಸಿಗುವಂತೆ ವ್ಯವಸ್ಥಿತ ವ್ಯವಸ್ಥೆ ಕಲ್ಪಿಸಬೇಕು ಎಂದರು.

RELATED ARTICLES

Latest News