Monday, December 2, 2024
Homeಅಂತಾರಾಷ್ಟ್ರೀಯ | Internationalಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭೂಕಂಪ

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭೂಕಂಪ

ಕರಾಚಿ, ಮಾ.19 – ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇಂದು ಬೆಳಿಗ್ಗೆ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರಬಿಂದು ಕ್ವೆಟ್ಟಾದಿಂದ ವಾಯುವ್ಯಕ್ಕೆ 150 ಕಿಲೋಮೀಟರ್ ದೂರದಲ್ಲಿ 35 ಕಿಮೀ ಆಳದಲ್ಲಿದೆ ಎಂದು ಹೇಳಿದಾರೆ.

ವಿವರಗಳ ಪ್ರಕಾರ, ರಾಜಧಾನಿ ಕ್ವೆಟ್ಟಾ, ನೋಶ್ಕಿ, ಚಾಗಿ, ಚಮನ್, ಕಿಲ್ಲಾ ಅಬ್ದುಲ್ಲಾ, ದಲ್ಬಾದಿನ್, ಪಿಶಿನ್ ಮತ್ತು ಪ್ರಾಂತ್ಯದ ಇತರ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಪಾಕಿಸ್ತಾನ-ಇರಾನ್ ಗಡಿ ಪ್ರದೇಶಗಳಲ್ಲಿ ಭೂಕಂಪನದ ಅನುಭವ ಮತ್ತು ದಾಖಲಾಗಿದೆ ಎಂದು ಪಾಕಿಸ್ತಾನ ಹವಾಮಾನ ಕಚೇರಿ ತಿಳಿಸಿದೆ.

ಆದಾಗ್ಯೂ, ಅಧಿಕಾರಿಗಳು ಭೂಕಂಪದ ಆಘಾತಗಳನ್ನು ಅನುಭವಿಸಿದ ಯಾವುದೇ ಪ್ರದೇಶದಿಂದ ಯಾವುದೇ ಸಾವುನೋವುಗಳನ್ನು ವರದಿ ಮಾಡಿಲ್ಲ ಆದರೆ ಬಲೂಚಿಸ್ತಾನ್ ಪ್ರಾಂತ್ಯವು ಈ ಹಿಂದೆ ಹಲವಾರು ಪ್ರಬಲ ಭೂಕಂಪಗಳಿಂದ ಹಾನಿಗೊಳಗಾಗಿದೆ, ಇದರ ಪರಿಣಾಮವಾಗಿ ಜೀವಹಾನಿ, ಗಾಯಗಳು ಮತ್ತು ಕಟ್ಟಡಗಳು ಮತ್ತು ಮನೆಗಳಿಗೆ ಭಾರಿ ಹಾನಿಯಾಗಿದೆ ಎಂದು ತಿಳಿಸಿದೆ.

ಕಳೆದ 2 ವರ್ಷದ ಹಿಂದೆ ಬಲೂಚಿಸ್ತಾನದ ಹರ್ನೈ ಪ್ರದೇಶದಲ್ಲಿ ಅಕ್ಟೋಬರ್ 2021 ರಲ್ಲಿ ಸಂಭವಿಸಿದ ಭೂಕಂಪದಲ್ಲಿ 40 ಜನರು ಸಾವನ್ನಪ್ಪಿದರು, 300 ಜನರು ಗಾಯಗೊಂಡರು ಮತ್ತು ದೂರದ ಪ್ರದೇಶದಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿತು.

RELATED ARTICLES

Latest News