Thursday, December 12, 2024
Homeರಾಷ್ಟ್ರೀಯ | Nationalನಿಂತಿದ್ದ ಟ್ರಕ್‌ಗೆ ಅಪ್ಪಳಿಸಿದ ವ್ಯಾನ್, ಐವರ ಸಾವು

ನಿಂತಿದ್ದ ಟ್ರಕ್‌ಗೆ ಅಪ್ಪಳಿಸಿದ ವ್ಯಾನ್, ಐವರ ಸಾವು

5 killed, 2 injured in Assam road mishap

ಗುವಾಹಟಿ, ನ.23 (ಪಿಟಿಐ)– ಅಸ್ಸಾಂನ ಬಜಾಲಿ ಜಿಲ್ಲೆಯಲ್ಲಿ ಇಂದು ಮುಂಜಾನೆ ನಿಂತಿದ್ದ ಟ್ರಕ್ಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಸ್ ಉತ್ಸವವನ್ನು ವೀಕ್ಷಿಸಿದ ನಂತರ ನಲ್ಬಾರಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಭಬಾನಿಪುರದಲ್ಲಿ ಅವರ ವ್ಯಾನ್ ಟ್ರಕ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ.

ಗಾಯಗೊಂಡ ಇಬ್ಬರನ್ನು ಫಕ್ರುದ್ದೀನ್ ಅಲಿ ಅಹದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತರನ್ನು ಆಶಿಶ್ ಹಬೀಬ್ ಖಾನ್, ಮಿಜಾನೂರ್ ರೆಹಮಾನ್, ರಾಯಲ್ ಖಾನ್, ಮಿಜಾನೂರ್ ಖಾನ್ ಮತ್ತು ಮೊಯಿನುಲ್ ಹಕ್ ಎಂದು ಗುರುತಿಸಲಾಗಿದೆ. ಗಾಯಗೊಂಡವರು ಅಮೀರ್ ಖಾನ್ ಮತ್ತು ಕಾಜಿ ಚಕ್ರ ಅಹದ್ ಎಂದು ಪೊಲೀಸರು ತಿಳಿಸಿದ್ದಾರೆ

RELATED ARTICLES

Latest News