Thursday, January 16, 2025
Homeರಾಷ್ಟ್ರೀಯ | Nationalನಿಂತಿದ್ದ ಕಂಟೈನರ್‌ಗೆ ಕಾರು ಡಿಕ್ಕಿ : ಒಂದೇ ಕುಟುಂಬದ ಐವರ ದುರ್ಮರಣ

ನಿಂತಿದ್ದ ಕಂಟೈನರ್‌ಗೆ ಕಾರು ಡಿಕ್ಕಿ : ಒಂದೇ ಕುಟುಂಬದ ಐವರ ದುರ್ಮರಣ

ವಡೋದರಾ, ಮಾ 4 (ಪಿಟಿಐ) ಗುಜರಾತ್‍ನ ವಡೋದರಾ ನಗರದ ಸಮೀಪ ಹೆದ್ದಾರಿಯಲ್ಲಿ ನಿಂತಿದ್ದ ಕಂಟೈನರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಪುರುಷರು, ಅವರ ಪತ್ನಿಯರು ಮತ್ತು ಒಂದು ಹಸುಗೂಸು ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ.

ದಂಪತಿಗಳು ಹಾಗೂ ಇಬ್ಬರು ಮಕ್ಕಳು ವಡೋದರಾ ಜಿಲ್ಲೆಯ ಕರ್ಜನ್ ತಾಲೂಕಿನಿಂದ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಕಪುರೈ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಸ್ತೆ ಬದಿ ನಿಂತಿದ್ದ ಕಂಟೈನರ್‌ಗೆ ಕಾರು ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಇಬ್ಬರು ದಂಪತಿಗಳು ಮತ್ತು ಒಂದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ 4 ವರ್ಷದ ಮಗುವಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಹಾನಿಗೊಳಗಾದವರನ್ನು ಕಾರಿನಿಂದ ಹೊರತೆಗೆದರು ಎಂದು ಅವರು ಹೇಳಿದರು.

RELATED ARTICLES

Latest News