ಇಟಾವಾ (ಯುಪಿ), ಅ 4-ಉತ್ತರ ಪ್ರದೇಶದ ಲಕ್ನೋ-ಆಗ್ರಾ ಎಕ್ಸ್ ಪ್ರೆಸ್‌ವೇನ ಉಸ್ರಾಹರ್ ಪ್ರದೇಶದಲ್ಲಿ ಇಂದು ಮುಂಜಾನೆ ಚಾಲಕನ ನಿಯಂತ್ರಣ ತಪ್ಪದ ಬಸ್ ಪಲ್ಟಿಯಾಗಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ.
ನಾಗಾಲ್ಯಾಂಡ್ ನೊಂದಣಿ ಸಂಖ್ಯೆ ಹೊಂದಿರುವ ಬಸ್ ರಾಯ್ ಬರೇಲಿಯಿಂದ ದೆಹಲಿಗೆ ತೆರಳುತ್ತಿದ್ದಾಗ ಮಧ್ಯರಾತ್ರಿ 12.45 ರ ಸುಮಾರಿಗೆ ರಾಂಗ್ ಲೇನ್ ನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲಕ್ನೋದಿಂದ ಬಂದು ಆಗ್ರಾಕ್ಕೆ ಹೋಗುತ್ತಿದ್ದ ಕಾರಿನ ಚಾಲಕ, ನಿದ್ರೆಗೆ ಜಾರಿದ್ದು ತಪ್ಪಾದ ಲೇನ್‌ಗೆ ಪ್ರವೇಶಿಸಿದ್ದು ಈ ವೆಳೆ ವೇಗವಾಗಿ ಬಂದ ಬಸ್‌ಡಿಕ್ಕಿ ಹೊಡೆದಿದೆ ಈ ರಭಸಕ್ಕೆ ಬಸ್ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ.
ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಇದರಲ್ಲಿ ಒಬ್ಬರು ಚಿಂತಾಜನಕವಾಗಿದೆ. ಮೃತರಲ್ಲಿ ಹೆಚ್ಚಿನವರು ಕಾರಿನಲ್ಲಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು,ಬಸ್ಸಿನಲ್ಲಿ ಸುಮಾರು 60 ಮಂದಿ ಇದ್ದರು ಎಂದು ಎಸ್ಪಿ ತಿಳಿಸಿದ್ದಾರೆ.