Tuesday, December 3, 2024
Homeಬೆಂಗಳೂರುನಾಲ್ವರು ಮೊಬೈಲ್ ಸುಲಿಗೆಕೋರರ ಬಂಧನ: 70 ಮೊಬೈಲ್ ವಶ

ನಾಲ್ವರು ಮೊಬೈಲ್ ಸುಲಿಗೆಕೋರರ ಬಂಧನ: 70 ಮೊಬೈಲ್ ವಶ

ಬೆಂಗಳೂರು, ಫೆ.27- ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಗುರಿಯಾಗಿಟ್ಟುಕೊಂಡು ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ನಾಲ್ವರು ದರೋಡೆಕೋರರನ್ನು ನಗರ ಪೊಲೀಸರು ಬಂಧಿಸಿ 70 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಆರ್‍ ಪುರ: ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ದರೋಡೆಕೋರರು ಅವರ ಕೈಯಲಿದ್ದ ಮೊಬೈಲ್ ಪೋನ್ ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 20 ಲಕ್ಷ ಬೆಲೆ ಬಾಳುವ ಒಟ್ಟು 68 ವಿವಿಧ ಕಂಪನಿಯ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮಹದೇವಪುರ ಪೊಲೀಸ್ ಠಾಣೆಯ ಒಟ್ಟು 9 ಮೊಬೈಲ್ ದರೋಡೆ ಪ್ರಕರಣಗಳು ಪತ್ತೆಯಾಗಿದ್ದು ಹೆಚ್ಚಿನ ತನಿಖೆ ಕೈಕೊಳ್ಳಲಾಗಿದೆ.

ಈ ಇಬ್ಬರು ಆರೋಪಿಗಳು ನಗರದ ಜನನಿಬಿಡ ಪ್ರದೇಶಗಳಾದ ಟಿನ್‍ಪ್ಯಾಕ್ಟರಿ, ಮಾರತ್ತಹಳ್ಳಿ, ಹೆಬ್ಬಾಳ, ಸಿಲ್ಕ್ ಬೋರ್ಡ್ ಮುಂತಾದ ಸ್ಥಳಗಳಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಒಂಟಿ ವ್ಯಕಿಗಳನ್ನು ಗುರಿಯಾಗಿಟ್ಟುಕೊಂಡು ಅವರು ಗಳಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.

ನಂತರ ಅವುಗಳನ್ನು ತಮ್ಮ ಸ್ವಂತ ಊರು ಹಿರಿಯೂರಿನಲ್ಲಿ ಮಾರಾಟ ಮಾಡಿ ಬಂದ ಹಣದಿಂದ ದುಶ್ಚಟಗಳಿಗೆ ಬಳಸಿಕೊಳ್ಳುತ್ತಿದ್ದುದ್ದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಕಾರ್ಯಚರಣೆಯನ್ನು ವೈಟ್‍ಫಿಲ್ಡ್ ವಿಭಾಗದ, ಉಪ ಪೊಲೀಸ್ ಆಯುಕ್ತರಾದ ಡಾ. ಶಿವಕುಮಾರ್, ಸಹಾಯಕ ಪೊಲೀಸ್ ಆಯುಕ್ತರಾದ ರೀನಾ ಸುವರ್ಣ ನೇತೃತ್ವದಲ್ಲಿ, ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿಯವರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಗೊಳಿಸಿರುತ್ತಾರೆ.

ಇಬ್ಬರ ಬಂಧನ: ಇಂದಿರಾನಗರ ಠಾಣೆ ಪೊಲೀಸರು ಇಬ್ಬರು ಮೊಬೈಲ್ ಸುಲಿಗೆಕೋರರನ್ನು ಬಂಧಿಸಿ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ವಿನೋದ್ ಮತ್ತು ಸ್ಟೀಫನ್ ರಾಜು ಬಂತ ಮೊಬೈಲ್ ದರೋಡೆಕೋರರು. ಜನವರಿ 31ರಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ವ್ಯಕ್ತಿಯೊಬ್ಬರಿಗೆ ಕೈಯಿಂದ ಹಲ್ಲೆ ಮಾಡಿ, ಹೆದರಿಸಿ ಅವರ ಜೇಬಿನಲ್ಲಿದ್ದ ಒಂದು ಒಪೋ ಮೊಬೈಲ್ ಮತ್ತು 2,300 ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

4 ಡ್ರಗ್ ಪೆಡ್ಲರ್‌ಗಳ ಬಂಧನ : 2.35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ನಂತರ ಅವರು 112ಗೆ ಕರೆಮಾಡಿ ಮೊಬೈಲ್ ಹಾಗೂ ನಗದು ಹಣವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ದೂರು ನೀಡಿದ್ದರು. 112ನಿಂದ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ಹೊಯ್ಸಳ-30 ರ ವಾಹನದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಈ ದೂರನ್ನು ಪರಿಶೀಲಿಸುವಂತೆ ಸೂಚಿಸಿದ್ದರು.
ಅದರಂತೆ ಹೊಯ್ಸಳ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಲೆ ಕಾರ್ಯೋನ್ಮುಖರಾಗಿ ಸುಲಿಗೆ ಮಾಡಿ ಮೋಟಾರ್ ಸೈಕಲ್‍ನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಗಳು ಇಂದಿರಾನಗರದ ಪೊಲೀಸ್‍ಠಾಣೆಯ-1 ಸುಲಿಗೆ ಪ್ರಕರಣ, ಹಲಸೂರು ಪೊಲೀಸ್ ಠಾಣೆಯ-1 ಸುಲಿಗೆ ಪ್ರಕರಣ, ಹೆಣ್ಣೂರು ಪೊಲೀಸ್ ಠಾಣೆಯ-3 ದರೋಡೆಗೆ ಯತ್ನದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ಯಿಂದ ತಿಳಿದು ಬಂದಿರುತ್ತದೆ. ಇಂದಿರಾನಗರ ಪೊಲೀಸ್‍ಠಾಣೆಯ ಇನ್ಸ್‍ಪೆಕ್ಟರ್ ಸುದರ್ಶನ್ ಮತ್ತು ಸಿಬ್ಬಂದಿ ಈ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News