Saturday, May 4, 2024
Homeಇದೀಗ ಬಂದ ಸುದ್ದಿಅಡ್ಡಮತದಾನ: ಅನರ್ಹತೆ ಪರ- ವಿರೋಧ ಚರ್ಚೆ

ಅಡ್ಡಮತದಾನ: ಅನರ್ಹತೆ ಪರ- ವಿರೋಧ ಚರ್ಚೆ

ಬೆಂಗಳೂರು,ಫೆ.27- ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿರುವವರ ಶಾಸಕ ಸ್ಥಾನದ ಅನರ್ಹತೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ರಾಜಕೀಯವಾಗಿ ಮತ್ತೊಂದು ವಿಚಾರಮಂಥನಕ್ಕೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯಸಭಾ ಚುನಾವಣೆಯಲ್ಲಿ ಮುಕ್ತ ಮತದಾನವಾಗಿರುವುದರಿಂದ ಅಡ್ಡಮತದಾನ ಮಾಡಿದವರನ್ನು ಅನರ್ಹಗೊಳಿಸಲು ಅವಕಾಶ ಇಲ್ಲ ಎಂದು ಹಿರಿಯ ವಕೀಲರು ಆದ ಕಾಂಗ್ರೆಸ್ ಪಕ್ಷದ ಶಾಸಕ ಎ.ಎಸ್.ಪೊನ್ನಣ್ಣ ಪ್ರತಿಪಾದಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದಾರೆ ಎಂದು ಹೇಳಲಾದ ಎಸ್.ಟಿ.ಸೋಮಶೇಖರ್ ಸೇರಿದಂತೆ ಯಾವುದೇ ಶಾಸಕರನ್ನು ಅನರ್ಹಗೊಳಿಸಲು ಅವಕಾಶ ಇಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ನೀಡಿದ ವ್ಹಿಪ್‍ಗಳು ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯಪ್ರಧಾನಕಾರ್ಯದರ್ಶಿ ಹಾಗೂ ಶಾಸಕರಾಗಿರುವ ವಿ.ಸುನಿಲ್‍ಕುಮಾರ್‍ರವರು ಅಡ್ಡಮತದಾನ ಶಾಸಕರ ಅನರ್ಹತೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಪಕ್ಷ ರಾಜ್ಯಸಭೆಯಲ್ಲಿ ಯಾರಿಗೆ ಮತ ಹಾಕಬೇಕೆಂದು ವ್ಹಿಪ್ ನೀಡಿದೆ. ಅದನ್ನು ಉಲ್ಲಂಘಿಸುವುದು ಪಕ್ಷಾಂತರ ನಿಷೇಧ ಕಾಯ್ದೆಗೆ ಒಳಪಡುತ್ತದೆ. ನಮ್ಮ ಪಕ್ಷದಿಂದ ಬೂತ್ ಏಜೆಂಟ್ ಆಗಿರುವವರು ಯಾರು, ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಗುರುತು ಮಾಡಿಕೊಂಡಿದ್ದಾರೆ. ಒಂದು ವೇಳೆ ಅಡ್ಡಮತದಾನವಾಗಿದ್ದರೆ ಅದನ್ನು ಪರಿಶೀಲಿಸಿ ಪಕ್ಷವು ಕ್ರಮ ಕೈಗೊಳ್ಳುತ್ತದೆ ಮತ್ತು ಶಾಸಕರನ್ನು ಅನರ್ಹಗೊಳಿಸಲು ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳುವುದಾಗಿ ಹೇಳಿದರು.

4 ಡ್ರಗ್ ಪೆಡ್ಲರ್‌ಗಳ ಬಂಧನ : 2.35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ವಿಚಾರ ಮಂಥನ :
ಇಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪರವಾಗಿ ಹಲವಾರು ಮಂದಿ ಅಡ್ಡಮತದಾನ ಮಾಡಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿದ್ದವು. ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಅಡ್ಡಮತದಾನ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಶಿವರಾಂ ಹೆಬ್ಬಾರ್ ಮಧ್ಯಾಹ್ನದವರೆಗೂ ಮತಗಟ್ಟೆಗೆ ಬಂದಿರಲಿಲ್ಲ. ಇನ್ನು ಜೆಡಿಎಸ್‍ನ ಶಾಸಕರಾದ ಕರೆಮ್ಮ, ತಾವು ತಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿಯವರಿಗೇ ಮತ ಹಾಕಿರುವುದಾಗಿ ಸ್ಪಷ್ಪಡಿಸಿದರು.

ಮತ್ತೊಬ್ಬ ಶಾಸಕ ಶರಣಗೌಡ ಕಂದಕೂರ್, ನಾವು ಆತ್ಮಸಾಕ್ಷಿಗನುಗುಣವಾಗಿ ಮತ ಹಾಕಿದ್ದೇನೆ. ಪಕ್ಷ ವ್ಹಿಪ್ ನೀಡಿದೆ. ಅದನ್ನು ಉಲ್ಲಂಘನೆ ಮಾಡಿಲ್ಲ. ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಶಾಸಕ ಜನಾರ್ದನ ರೆಡ್ಡಿ, ತಾವು ಆತ್ಮಸಾಕ್ಷಿ ಮತ ಚಲಾಯಿಸಿರುವುದಾಗಿ ಹೇಳಿದರು. ಪದೇ ಪದೇ ಪ್ರಶ್ನೆಗಳು ಎದುರಾದಾಗ ನಾನು ಯಾರಿಗೆ ಮತ ಹಾಕಿದ್ದೇನೆ ಎಂದು ನಿಮಗೆ ಏಕೆ ಹೇಳಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಪಕ್ಷೇತರರಾದ ಲತಾ ಮಲ್ಲಿಕಾರ್ಜುನ್, ದರ್ಶನ್ ಪುಟ್ಟಣ್ಣಯ್ಯ, ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಪಕ್ಷೇತರರಾಗಿರುವುದರಿಂದ ಇವರಿಗೆ ಯಾವುದೇ ವ್ಹಿಪ್‍ಗಳು ಅನ್ವಯಾಗುವುದಿಲ್ಲ. ಕಾನೂನಿನ ಗೋಜಲೂ ಇರುವುದಿಲ್ಲ. ಆದರೆ ಪಕ್ಷದ ಚಿನ್ಹೆ ಹೇಳಿ ಚುನಾಯಿತರಾಗಿರುವ ಶಾಸಕರು ಅಡ್ಡಮತದಾನ ಮಾಡಿದ ವೇಳೆ ಅನರ್ಹತೆಗೆ ಒಳಗಾಗುತ್ತಾರೆ ಎಂಬ ಚರ್ಚೆಗಳಿವೆ.

ಮೂಲಭೂತ ಪ್ರಶ್ನೆಯೆಂದರೆ, ಈ ಚುನಾವಣೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷದ ಪರವಾಗಿ ಮತಗಟ್ಟೆಯಲ್ಲಿ ಒಬ್ಬ ಏಜೆಂಟ್ ಹಾಜರಿರುತ್ತಾರೆ. ಶಾಸಕರು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಕ್ರಮಸಂಖ್ಯೆಯನ್ನು ನಮೂದಿಸಿ ಮತ ಹಾಕಬೇಕು. ಮತ ಹಾಕುವ ಮೊದಲು ನೋಂದಣಿ ಪುಸ್ತಕದಲ್ಲಿ ಹೆಸರು ಹಾಗೂ ಇತರ ವಿವರಗಳನ್ನು ದಾಖಲಿಸಲಾಗುತ್ತದೆ.

ಆದರೆ ಮತಪತ್ರದಲ್ಲಿ ಮತ ಹಾಕಿದವರ ಹೆಸರಿನ ಉಲ್ಲೇಖ ಇರುವುದಿಲ್ಲ. ಮತ ಚಲಾಯಿಸಿದ ಕ್ರಮ ಸಂಖ್ಯೆ ಮಾತ್ರ ಗೋಚರವಾಗುತ್ತದೆ. ಮತ ಹೇಳಿಕೆಯಲ್ಲಿ ಯಾರು, ಯಾರಿಗೆ ಮತ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯಲು ಸಾಧ್ಯವಿಲ್ಲ ಮತ್ತು ಅದನ್ನು ಸಾಬೀತುಪಡಿಸುವುದೂ ಕೂಡ ಕಷ್ಟಸಾಧ್ಯ. ಚುನಾವಣಾ ಏಜೆಂಟ್‍ಗೆ ಶಾಸಕರು ಮತಪತ್ರವನ್ನು ತೋರಿಸಿದಾಗ ಅಡ್ಡಮತದಾನವಾಗಿರುವುದು ಸ್ಪಷ್ಟವಾಗಿ ಕಂಡುಬಂದರೂ ಕೂಡ ಅದನ್ನು ಸಾಬೀತುಪಡಿಸುವುದು ಸದ್ಯದ ನಿಯಮಾವಳಿಗಳಲ್ಲಿ ಗೊಂದಲಕಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಕಾಂಗ್ರೆಸ್ ಪಕ್ಷದ ಧುರೀಣರು, ಜೆಡಿಎಸ್-ಬಿಜೆಪಿ ಶಾಸಕರಿಗೆ ಭಯ ಬೀಳಬೇಡಿ, ಆತ್ಮಸಾಕ್ಷಿಯ ಮತ ಹಾಕಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾಗಿ ತಿಳಿದುಬಂದಿದೆ. ಅದರನ್ವಯ ಒಬ್ಬರು ಅಡ್ಡಮತದಾನ ಮಾಡಿರುವುದು ಖಚಿತವಾಗಿದ್ದು, ಮತ್ತೊಬ್ಬರು ಅಡ್ಡಮತದಾನ ಮಾಡಿದ್ದಾರೆಯೇ? ಇಲ್ಲವೇ? ಎಂಬ ಗೊಂದಲ ಮುಂದುವರೆದಿದೆ.

ಕೇರಳದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಇವರ ಅನರ್ಹತೆ ಬಗ್ಗೆ ಬಿಜೆಪಿ ತಕ್ಷಣವೇ ಕಾನೂನು ಪ್ರಕ್ರಿಯೆ ಆರಂಭಿಸಲಿದೆ ಎಂದು ಹೇಳಲಾಗಿದೆ. ಆದರೆ ಅದು ಅರೆ ನ್ಯಾಯಾಲಯವಾಗಿರುವ ಸಭಾಧ್ಯಕ್ಷರ ಕಚೇರಿಯಲ್ಲಿ ಇತ್ಯರ್ಥವಾಗಲು ಕಾಲಾವಕಾಶದ ಅಗತ್ಯವಿದೆ ಎಂದು ಹೇಳಲಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಪಕ್ಷದ ಚಿನ್ಹೆ ಬಳಕೆ ಮಾಡುವುದಿಲ್ಲ. ಹೀಗಾಗಿ ಇದು ಮುಕ್ತ ಮತದಾನದ ಚುನಾವಣೆಯಾಗಿದೆ. ವ್ಹಿಪ್ ನೀಡಲು ಅವಕಾಶ ಇಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಕೂಡ ಅನ್ವಯವಾಗುವುದಿಲ್ಲ. ಈ ಕುರಿತು ಸುಪ್ರೀಂಕೋರ್ಟಿನ ಹಲವು ತೀರ್ಪುಗಳು ಸ್ಪಷ್ಟವಾದ ನಿರ್ದೇಶನ ನೀಡಿವೆ ಎಂದು ಹೇಳಿದರು.

RELATED ARTICLES

Latest News