Saturday, December 14, 2024
Homeರಾಷ್ಟ್ರೀಯ | Nationalಕೇರಳದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಕೇರಳದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಇಡುಕ್ಕಿ (ಕೇರಳ), ಫೆ.27: ಕೇರಳದಲ್ಲಿ ಮಾನವ-ಪ್ರಾಣಿ ಸಂಘರ್ಷ ಮುಂದುವರಿದಿದ್ದು, ಗುಡ್ಡಗಾಡು ಜಿಲ್ಲೆಯ ಮುನ್ನಾರ್‍ನ ಪ್ರವಾಸಿ ಪಟ್ಟಣ ಸಮೀಪದ ಕನ್ನಿಮಲಾ ಎಸ್ಟೇಟ್‍ನಲ್ಲಿ ಕಾಡು ಆನೆಯ ದಾಳಿಗೆ ಆಟೋರಿಕ್ಷಾ ಚಾಲಕ ಸಾವನ್ನಪ್ಪಿದ್ದಾನೆ. ಕಳೆದ ರಾತ್ರಿ ಆಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕುರಿಸಿಕೊಂಡು ತೆರಳುತ್ತಿದ್ದ ಮೇಳೆ ಆನೆ ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಇಲ್ಲಿ ಆತ ಆಟೋರಿಕ್ಷಾ ಚಾಲಕ ಕೆಲಸ ಮಾಡುತ್ತಿದ್ದ ಆನೆ ದಾಳಿ ವೇಳೆ ಆಟೋದಲ್ಲಿದ್ದ ಪ್ರಯಾಣಿಕರು ಆನೆ ಕಂಡ ತಕ್ಷಣ ವಾಹನದಿಂದ ಇಳಿದು ತಪ್ಪಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬೆಳಿಗ್ಗೆ ಮುನ್ನಾರ್ ಠಾಣೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಜೆಡಿಎಸ್-ಬಿಜೆಪಿ ನಾಯಕರ ನಡುವೆ ಲೋಕಸಭಾ ಚುನಾವಣೆ ಕುರಿತು ಸ್ವಾರಸ್ಯಕರ ಚರ್ಚೆ

ವಯನಾಡ್‍ನಲ್ಲಿ ಇತ್ತೀಚೆಗೆ ಕಾಡಾನೆಗಳ ದಾಳಿಗೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರಿಂದ ಸ್ಥಳೀಯ ಜನರು ಭಾರಿ ಪ್ರತಿಭಟನೆಗೆ ನಡೆಸಿದ್ದರು ಈಗ ರಾಜ್ಯದಲ್ಲಿ ಇಂತದ್ದೇ ಮತ್ತೊಂದು ಘಟನೆ ನಡೆದಿದೆ. ಇಂದು ವಿವಿಧ ಸಂಘಟನೆಗಳು ಮುನ್ನಾರ್‍ನಲ್ಲಿ ರಸ್ತೆ ತಡೆ ಹಾಗು ಪ್ರತಿಭಟನೆಗಳನ್ನು ನಡೆಸಿದ್ದಾರೆ.

RELATED ARTICLES

Latest News