Thursday, May 2, 2024
Homeರಾಷ್ಟ್ರೀಯಮಹಾರಾಷ್ಟ್ರ ಕಾಂಗ್ರೆಸ್‍ಗೆ ಮತ್ತೊಂದು ಶಾಕ್ : ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್ ರಾಜೀನಾಮೆ

ಮಹಾರಾಷ್ಟ್ರ ಕಾಂಗ್ರೆಸ್‍ಗೆ ಮತ್ತೊಂದು ಶಾಕ್ : ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್ ರಾಜೀನಾಮೆ

ಮುಂಬೈ,ಫೆ.27- ಲೋಕಸಭಾ ಚುನಾವಣೆ ಘೋಷಣೆಯಾಗುವ ಮುನ್ನವೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ಗೆ ಮತ್ತೊಂದು ಹಿನ್ನಡೆಯಾಗಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್ ಮುರುಮಕರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಪಕ್ಷವನ್ನು ತೊರೆದಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಪಾಟೀಲ್ ಅವರು ಬಿಜೆಪಿ ಸೇರುವ ಸಾಧ್ಯತೆಯಿದೆ. ಇವರು ಮರಾಠವಾಡ ಪ್ರದೇಶದಲ್ಲಿ ದೊಡ್ಡ ನಾಯಕರಾಗಿದ್ದಾರೆ. 2019 ರಲ್ಲಿ ಔಸಾ ವಿಧಾನಸಭಾ ಕ್ಷೇತ್ರದಿಂದ ಸೋತ ನಂತರ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರದ ಕಾರಣ ಮಾಜಿ ಸಚಿವರು ಪಕ್ಷ ತೊರೆದರೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯದರ್ಶಿ ಅಭಯ ಸಾಳುಂಕೆ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಅಶೋಕ್ ಚವಾಣ್, ಮಿಲಿಂದ್ ದಿಯೋರಾ ಮತ್ತು ಬಾಬಾ ಸಿದ್ದೀಖಿ ಸೇರಿದಂತೆ ಅನೇಕ ಹಿರಿಯ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಚವಾಣ್ ಬಿಜೆಪಿಗೆ ಸೇರ್ಪಡೆಗೊಂಡಿದ್ದರೆ, ದಿಯೋರಾ ಈಗ ಏಕನಾಥ್ ಶಿಂಧೆ ಅವರ ಶಿವಸೇನೆಯಲ್ಲಿದ್ದಾರೆ. ಈ ಇಬ್ಬರೂ ನಾಯಕರು ರಾಜ್ಯಸಭಾ ಚುನಾವಣೆಗೆ ನಾಮ ನಿರ್ದೇಶನಗೊಂಡಿದ್ದಾರೆ. ಮತ್ತೊಂದೆಡೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‍ಸಿಪಿಗೆ ಬಾಬಾ ಸಿದ್ದೀಖಿ ಸೇರಿದ್ದಾರೆ.

ಜೆಡಿಎಸ್-ಬಿಜೆಪಿ ನಾಯಕರ ನಡುವೆ ಲೋಕಸಭಾ ಚುನಾವಣೆ ಕುರಿತು ಸ್ವಾರಸ್ಯಕರ ಚರ್ಚೆ

ಬಸವರಾಜ್ ಪಾಟೀಲ್ ಮುರುಮಕರ ಯಾರು?
ಧಾರಾಶಿವ ಜಿಲ್ಲೆಯ ಉಮರ್ಗಾ ತಾಲೂಕಿನ ಮುರುಮ್ ನಿವಾಸಿ ಬಸವರಾಜ್ ಪಾಟೀಲ್ ಅವರು 1999 ರ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಆಯ್ಕೆಯಾದರು. ಅನಂತರ ಅವರು ಮಹಾರಾಷ್ಟ್ರ ಸಂಪುಟದಲ್ಲಿ ಸಚಿವರಾಗಿದ್ದರು. ಬಸವರಾಜ್ ಪಾಟೀಲ್ ಅವರು 1999 ರಿಂದ 2004 ರವರೆಗೆ ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಪಾಟೀಲ್ 2004 ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಅನಂತರ, ಅವರು ಮೊದಲ ಬಾರಿಗೆ ಉಮರ್ಗಾ ವಿಧಾನಸಭೆಯಿಂದ ಗೆದ್ದರು. ಆದರೆ ನಂತರ ಅದನ್ನು ಮೀಸಲು ಕ್ಷೇತ್ರವೆಂದು ಘೋಷಿಸಲಾಯಿತು. ಆದ್ದರಿಂದ, ಪಕ್ಷವು ಅವರನ್ನು 2009 ರ ಚುನಾವಣೆಯಲ್ಲಿ ಔಸಾ ಕ್ಷೇತ್ರದಿಂದ ನಾಮನಿರ್ದೇಶನ ಮಾಡಿತ್ತು.

RELATED ARTICLES

Latest News