Thursday, May 2, 2024
Homeರಾಷ್ಟ್ರೀಯಸಿಯೆರಾ ಲಿಯೋನ್ ಪ್ರಜೆ ಹೊಟ್ಟೆಯಲ್ಲಿತ್ತು 11 ಕೋಟಿ ಮೌಲ್ಯದ ಕೊಕೇನ್

ಸಿಯೆರಾ ಲಿಯೋನ್ ಪ್ರಜೆ ಹೊಟ್ಟೆಯಲ್ಲಿತ್ತು 11 ಕೋಟಿ ಮೌಲ್ಯದ ಕೊಕೇನ್

ಮುಂಬೈ, ಎ.1 (ಪಿಟಿಐ) – ಸುಮಾರು 11 ಕೋಟಿ ರೂ.ಮೌಲ್ಯದ 74 ಕೊಕೇನ್ ಕ್ಯಾಪ್ಸುಲ್‍ಗಳನ್ನು ತನ್ನ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಸಿಯೆರಾ ಲಿಯೋನ್ ಪ್ರಜೆಯೊಬ್ಬನನ್ನು ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

1,108 ಗ್ರಾಂ ತೂಕದ ಡ್ರಗ್ ಕ್ಯಾಪ್ಸುಲ್‍ಗಳನ್ನು ಇಲ್ಲಿನ ಸರ್ಕಾರಿ ಜೆಜೆ ಆಸ್ಪತ್ರೆಯ ವೈದ್ಯರು ವ್ಯಕ್ತಿಯ ದೇಹದಿಂದ ಹೊರ ತೆಗೆದು ಪೊಲೀಸರಿ ನೀಡಿದ್ದಾರೆ ಎಂದು ಡಿಆರ್‍ಐ ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಮಾರ್ಚ್ 28 ರಂದು ನಗರಕ್ಕೆ ಆಗಮಿಸಿದ ನಂತರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ DRI ತಂಡವು ವ್ಯಕ್ತಿಯನ್ನು ಬಂಧಿಸಿದೆ ಎಂದು ಕಳ್ಳಸಾಗಣೆ ವಿರೋಧಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ವಿಚಾರಣೆಯ ಸಮಯದಲ್ಲಿ, ನಿಷೇಧಿತ ಮಾದಕವಸ್ತುವನ್ನು ಭಾರತಕ್ಕೆ ನುಸುಳುವ ಪ್ರಯತ್ನದಲ್ಲಿ ತಾನು ಕೊಕೇನ್ ಕ್ಯಾಪ್ಸುಲ್‍ಗಳನ್ನು ಸೇವಿಸಿದ್ದೇನೆ ಎಂದು ವ್ಯಕ್ತಿ ಡಿಆರ್‍ಐ ಅಧಿಕಾರಿಗಳಿಗೆ ತಿಳಿಸಿದ್ದಾನೆ.

ನಂತರ ನ್ಯಾಯಾಲಯದ ಆದೇಶ ಪಡೆದು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ತಂಡವು ಅವರ ಹೊಟ್ಟೆಯಿಂದ 74 ಕೊಕೇನ್ ಕ್ಯಾಪ್ಸುಲ್‍ಗಳನ್ನು ಹೊರತೆಗೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಂತರ ವ್ಯಕ್ತಿಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ (NDPS ) ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಆರ್‍ಐ ಹೇಳಿಕೆ ತಿಳಿಸಿದೆ.

ಕಳೆದ ಮಾರ್ಚ್ 24 ರಂದು 19.79 ಕೋಟಿ ಮೌಲ್ಯದ 1,979 ಗ್ರಾಂ ಕೊಕೇನ್‍ನೊಂದಿಗೆ ಆಫ್ರಿಕನ್ ರಾಷ್ಟ್ರದ ಮಹಿಳೆಯನ್ನು ಬಂಧಿಸಲಾಗಿತ್ತು. ಶೂಗಳು, ಮಾಯಿಶ್ಚರೈಸರ್ ಮತ್ತು ಶಾಂಪೂ ಬಾಟಲಿಗಳು ಮತ್ತು ಆಂಟಿಪೆಸ್ರ್ಪಿರಂಟ್‍ಗಳಲ್ಲಿ ಮಾದಕವಸ್ತುವನ್ನು ಸಾಗಿಸಲಾಗುತ್ತಿತ್ತು.

RELATED ARTICLES

Latest News