Homeರಾಜಕೀಯಸಾಧನಾ ಸಮಾವೇಶದ ಬಳಿಕವಾದರೂ ಬಗೆಹರಿಯಲಿದೆಯೇ ಅಧಿಕಾರ ಹಂಚಿಕೆ ವಿವಾದ ..?

ಸಾಧನಾ ಸಮಾವೇಶದ ಬಳಿಕವಾದರೂ ಬಗೆಹರಿಯಲಿದೆಯೇ ಅಧಿಕಾರ ಹಂಚಿಕೆ ವಿವಾದ ..?

Will the power-sharing dispute be resolved even after the Sadhana conference?

ಬೆಂಗಳೂರು, ಮೇ 17- ಸಾಧನಾ ಸಮಾವೇಶದ ಬಳಿಕವಾದರೂ ಅಧಿಕಾರ ಹಂಚಿಕೆ ವಿವಾದ ಬಗೆ ಹರಿಯಲಿದೆಯೇ ಎಂದು ಕಾಂಗ್ರೆಸ್‌‍ ನಲ್ಲಿ ಗಂಭೀರ ಪ್ರಶ್ನೆಗಳು ಕೇಳಿ ಬರಲಾರಂಭಿಸಿವೆ.ಸದ್ಯಕ್ಕೆ ಯಾವುದೇ ಚರ್ಚೆ ನಡೆಯದೇ ರಾಜಕೀಯವಾಗಿ ತಣ್ಣಗಿದ್ದರೂ, ಆಂತರಿಕವಾಗಿ ಜ್ವಾಲಾಮುಖಿಯಂತೆ ಕುದಿಯುತ್ತಿದೆ. ಮೂರು ವರ್ಷ ಕಳೆದ ಮೇಲಾದರೂ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗ ಮಾಡಲೇಬೇಕು ಎಂದು ಡಿ.ಕೆ.ಶಿವಕುಮಾರ್‌ ಬಣ ಒತ್ತಾಯಿಸುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸಿದ್ದಾರೆ. ಬಾಕಿ ಇರುವ ಎರಡು ವರ್ಷಗಳಿಗಾದರೂ ಬೇರೆಯವರಿಗೆ ಅವಕಾಶ ಸಿಗಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ.

ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ, ಅದರಲ್ಲೂ ರಾಹುಲ್‌ ಗಾಂಧಿ ಹೇಳಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಈವರೆಗೂ ಒಂದಲ್ಲಾ ಒಂದು ಕಾರಣಕ್ಕೆ ಅಧಿಕಾರ ಹಂಚಿಕೆಯ ಚರ್ಚೆಗಳು ಮುಂದೂಡಿಕೆಯಾಗುತ್ತಲೇ ಇದ್ದವು.

ಈಗ ಪಂಚರಾಜ್ಯಗಳ ಚುನಾವಣೆ ಮುಗಿದಿದೆ. ಎಲ್ಲ ಕಡೆ ಸೋತು, ಕೇರಳದಲ್ಲಿ ಮಾತ್ರ ಮೈತ್ರಿ ಸರ್ಕಾರ ರಚಿಸಲು ಕಾಂಗ್ರೆಸ್‌‍ ಗೆ ಸಾಧ್ಯವಾಗಿದೆ. ಸುಮಾರು 11 ದಿನಗಳ ಬಳಿಕ ಕೇರಳ ರಾಜ್ಯದ ಮುಖ್ಯಮಂತ್ರಿ ಆಯ್ಕೆಯ ಕುರಿತು ನಿರ್ಧಾರಗಳಾಗಿವೆ.

ಇತ್ತ ಕರ್ನಾಟಕದಲ್ಲೂ ಮೇ 20ರ ಬದಲಾಗಿ ಸಾರಿಗೆ ನೌಕರರ ಮುಷ್ಕರದ ಕಾರಣಕ್ಕೆ ಒಂದು ದಿನ ಮುಂಚಿತವಾಗಿ ಮೇ 19ರಂದು ತುಮಕೂರಿನಲ್ಲಿ ಸಾಧನಾ ಸಮಾವೇಶ ನಡೆಯುತ್ತಿದೆ.ನಿರೀಕ್ಷೆಯಂತೆ ಕಾಲ ಪಕ್ವವಾಗಿದ್ದು ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್‌ ಈಗ ನಿರ್ಣಯ ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಲಿದೆ. 2023ರ ಚುನಾವಣೆ ಫಲಿತಾಂಶದ ಬಳಿಕ ನಡೆದ ಮಾತುಕತೆಯಲ್ಲಿ ಎರಡುವರೆ ವರ್ಷಗಳ ಮಟ್ಟಿಗೆ ಅಧಿಕಾರ ಹಂಚಿಕೆಯ ನಿರ್ಣಯವಾಗಿತ್ತೆ ? ಇಲ್ಲವೇ ಎಂಬ ಕುರಿತು ಸ್ಪಷ್ಟನೆ ನೀಡಬೇಕಿದೆ.

ಮುಂದಿನ ಎರಡು ವರ್ಷಗಳ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೋ ಅಥವಾ ಬೇರೆಯವರಿಗೆ ಬಿಟ್ಟುಕೊಡಬೇಕೋ ಎಂಬ ವಿಚಾರಗಳನ್ನು ಇತ್ಯರ್ಥ ಪಡಿಸಬೇಕಿದೆ. ನಾಯಕತ್ವದ ಗೊಂದಲವನ್ನು ಬಗೆ ಹರಿಸಿ ಎಂದು ಸಿದ್ದರಾಮಯ್ಯ ಬಣದ ನಾಯಕರು ಪದೇ ಪದೇ ಆಗ್ರಹಿಸುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಎಂದಾದರೆ ಆಡಳಿತ ವ್ಯವಸ್ಥೆ ಹದಗೆಡಲಿದೆ.

ಅದಕ್ಕಾಗಿ ಯಾವುದಾದರೂ ನಿರ್ಣಯ ತೆಗೆದುಕೊಳ್ಳಿ ಅದನ್ನು ಸ್ಪಷ್ಟವಾಗಿ ಜನರ ಮುಂದೆ ಹೇಳಿ ಗೊಂದಲ ಬಗೆ ಹರಿಸಿ ಎಂದು ಸಿದ್ದರಾಮಯ್ಯ ಅವರ ಬಣದ ಒತ್ತಾಯವಾಗಿದೆ.
ಮೂಲಗಳ ಪ್ರಕಾರ ಸಾಧನಾ ಸಮಾವೇಶದಲ್ಲಿ ಭಾಗವಹಿಸುವ ಹೈಕಮಾಂಡ್‌ ನಾಯಕರು, ವೇದಿಕೆಯಲ್ಲೇ ತಮ ಭಾಷಣದಲ್ಲಿ ನಾಯಕತ್ವದ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News