Homeರಾಷ್ಟ್ರೀಯಎಬೋಲಾ ಸೋಂಕು : ಅಂತರರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

ಎಬೋಲಾ ಸೋಂಕು : ಅಂತರರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

WHO declares Ebola outbreak in DR Congo global health emergency

ಅಬುಜಾ (ನೈಜೀರಿಯಾ), ಮೇ 17: ಕಾಂಗೋ ಮತ್ತು ಉಗಾಂಡಾದಲ್ಲಿ ಹರಡುತ್ತಿರುವ ಎಬೋಲಾ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್‌‍ ಅಧಾನೊಮ್‌ ಘೆಬ್ರೆಯೆಸಸ್‌‍ ಅವರು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಮಾಹಿತಿಯ ಪ್ರಕಾರ, ಈವರೆಗೆ 300ಕ್ಕೂ ಹೆಚ್ಚು ಶಂಕಿತ ಸೋಂಕು ಪ್ರಕರಣಗಳು ಪತ್ತೆಯಾಗಿ 88 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಡಬ್ಲ್ಯುಎಚ್‌ಒ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಕಟಣೆ ನೀಡಿ, ಈ ಎಬೋಲಾ ಸೋಂಕು ಹರಡುವಿಕೆ ವೈರಸ್‌‍ನ ಬಂಡಿಬುಗ್ಯೋ ರೂಪಾಂತರದಿಂದ ಉಂಟಾಗಿದೆ ಎಂದು ತಿಳಿಸಿದೆ.

ಆದರೆ ಈ ಪರಿಸ್ಥಿತಿ ಕೋವಿಡ್‌ -19 ರೀತಿಯ ಜಾಗತಿಕ ಸಾಂಕ್ರಾಮಿಕ ತುರ್ತು ಪರಿಸ್ಥಿತಿಗೆ ಅನ್ವಯಿಸುವ ಮಾನದಂಡಗಳೂ ಸದ್ಯಕಿಲ್ಲ ಎಂದು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ.
ಜೊತೆಗೆ ಸೋಂಕಿನ ಕಾರಣದಿಂದ ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚುವ ಅಗತ್ಯವಿಲ್ಲ ಎಂದು ಸಂಸ್ಥೆ ಸಲಹೆ ನೀಡಿದೆ.

RELATED ARTICLES

Latest News