Homeರಾಜ್ಯಸಿದ್ದರಾಮಯ್ಯ ತೇಜೋವಧೆ ಪ್ರಕರಣದಲ್ಲಿ ಬುಡ ಬಿಟ್ಟು ಕೊಂಬೆ ಅಲ್ಲಾಡಿಸುತ್ತಿರುವ ಪೊಲೀಸರು

ಸಿದ್ದರಾಮಯ್ಯ ತೇಜೋವಧೆ ಪ್ರಕರಣದಲ್ಲಿ ಬುಡ ಬಿಟ್ಟು ಕೊಂಬೆ ಅಲ್ಲಾಡಿಸುತ್ತಿರುವ ಪೊಲೀಸರು

Police on e Siddaramaiah defamation case

ಬೆಂಗಳೂರು,ಅ.30- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಪ್ರಕರಣ ಕಟ್ಟುಕಥೆ ಎನ್ನುವ ಪೊಲೀಸರ ತನಿಖಾ ವರದಿ ಬುಡ ಬಿಟ್ಟು ಕೊಂಬೆ ಅಲ್ಲಾಡಿಸಿದಂತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಕರಣದ ತನಿಖೆ ನಡೆಸಿದ ಸಿಸಿಬಿಯ ಸೈಬರ್‌ ಕ್ರೈಂ ಠಾಣೆ ಪೊಲೀಸರು ಯಾವುದೋ ಒತ್ತಡಕ್ಕೆ ಮಣಿದು, ಮತ್ತಿನ್ಯಾರನ್ನೋ ಮೆಚ್ಚಿಸಲು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುವಂತಿದೆ ಅವರ ತನಿಖೆ.

ಪೊಲೀಸರ ತನಿಖಾ ವರದಿಯನ್ನು ಗಮನಿಸಿದರೆ ಆತುರಆತುರದಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಂದು ವೇಳೆ ಅದು ಕಟ್ಟುಕಥೆಯೇ ಆಗಿದ್ದರೆ, ಸಿದ್ದರಾಮಯ್ಯನವರ ವಿರುದ್ಧ ಕಥೆ ಕಟ್ಟಿ ವಿಡಿಯೋದಲ್ಲಿ ಮಾತನಾಡಿದ ಮತ್ತು ವಿಡಿಯೋ ಮಾಡಿದ ವ್ಯಕ್ತಿಗಳ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಂಡಿಲ್ಲ ಎನ್ನುವ ಪ್ರಶ್ನೆ ಎದುರಾಗುವುದು ಸಾಮಾನ್ಯ.

ಆ ವಿಡಿಯೋದಲ್ಲಿರುವ ಬಹುತೇಕ ವ್ಯಕ್ತಿಗಳು ರಾಜರೋಷವಾಗಿ ಓಡಾಡುತ್ತಿದ್ದಾರೆ.
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸಂತ್ರಸ್ತ ಮಹಿಳೆಯನ್ನೂ ಸಹ ಪತ್ತೆ ಮಾಡಿ ಆಕೆಯ ಹೇಳಿಕೆಯನ್ನು ಪಡೆದುಕೊಂಡಿರುವಾಗ ಆಕೆ ಸುಳ್ಳು ಹೇಳಿದ್ದಾರೆ ಎನ್ನುವುದಾದರೆ ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎನ್ನುವ ಅನುಮಾನ ಕಾಡುವುದು ಸಹಜ.

ಸಿದ್ದರಾಮಯ್ಯ ಕುರಿತ ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಬಂಧಿಸಿದರೇ ಪರಿಸ್ಥಿತಿಯೇ ಬೇರೆಯೇ ಆಗುತ್ತದೆ ಎಂಬ ಕಾರಣಕ್ಕೆ ಪೊಲೀಸರು ಕಟ್ಟುಕಥೆ ಎಂಬ ಕಥೆ ಹೇಳಿ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ವಿಡಿಯೋಗಳನ್ನು ಯುಟ್ಯೂಬ್‌ಗಳಲ್ಲಿ ಅಪ್‌ಲೋಡ್‌ ಮಾಡಿದ ವ್ಯಕ್ತಿಗಳ ವಿರುದ್ಧ ಮಾತ್ರ ತೀವ್ರ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಬುಡ ಬಿಟ್ಟು ಕೊಂಬೆ ಅಲ್ಲಾಡಿಸುವುದನ್ನು ಬಿಟ್ಟು ಮೊದಲು ವಿಡಿಯೋದಲ್ಲಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು ವಿಡಿಯೋ ಹರಿಬಿಟ್ಟ ವ್ಯಕ್ತಿಗಳ ವಿರುದ್ಧವೂ ಸಹ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 2011 ರಲ್ಲಿ ಸ್ಟಿಂಗ್‌ ಆಪರೇಷನ್‌ ಆಗಿದೆಯೇ ಅಥವಾ ಇಲ್ಲವೇ ಎಂಬುವುದನ್ನು ಮೊದಲು ತಿಳಿದುಕೊಳ್ಳಿ. ಈಗ ಪ್ರಸಾರವಾಗಿರುವ ವಿಡಿಯೋ 2023 ರಲ್ಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಹಾಗಾದರೇ ಈ ವಿಡಿಯೋವನ್ನು ಏಕೆ ಮಾಡಲಾಯಿತು. ಅದರ ಉದ್ದೇಶವೇನು. ಆಗಿನ ವಿಡಿಯೋ ಈಗ ಪ್ರಸಾರವಾಗಲು ಕಾರಣವೇನು. ಇದರ ಹಿಂದಿನ ಮರ್ಮವೇನು. ಇದರ ಹಿಂದೆ ಯಾರಿದ್ದಾರೆಂಬುವುದನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಸಂಪೂರ್ಣವಾಗಿ ತನಿಖೆ ನಡೆಸಿ ಬೆಳಕಿಗೆ ತರಬೇಕಾಗಿದೆ. ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಸಂಪೂರ್ಣ ನಿರಪರಾಧಿ ಇರಬಹುದು. ಅದು ಬೇರೆಯೇ ಪ್ರಶ್ನೆ. ಆದರೆ ಬೆಂಗಳೂರು ನಗರ ಪೊಲೀಸರು ಈ ಪ್ರಕರಣದಲ್ಲಿ ನಡೆದುಕೊಂಡ ರೀತಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಿಸಿಬಿಯ ಸೈಬರ್‌ ಕ್ರೈಂ ಠಾಣೆ ಮೊಕದ್ದಮೆ ಸಂಖ್ಯೆ 56/2026 ರ ತನಿಖೆಯಲ್ಲಿ ಈವರೆಗೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಮತ್ತು ದಾಖಲಿಸಲಾದ ಹೇಳಿಕೆಗಳ ಆಧಾರದಲ್ಲಿ ವಿಡಿಯೋದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಕಟ್ಟು ಕಥೆಯ ಭಾಗವಾಗಿದೆ ಎಂದು ತಿಳಿದು ಬಂದಿದೆ.

ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ವಿಡಿಯೋದಲ್ಲಿ ಚಿತ್ರಿಸಿರುವ ರೀತಿಯಲ್ಲಿ ಯಾವುದೇ ಘಟನೆ ನಡೆದಿರುವ ಬಗ್ಗೆ ಈವರೆಗಿನ ತನಿಖೆಯಲ್ಲಿ ದಾಖಲಿಸಲಾದ ಹೇಳಿಕೆಗಳು ಹಾಗೂ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ದೃಢಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರ ವಿಚಾರಣೆಯನ್ನು ಸಮಗ್ರವಾಗಿ ನಡೆಸಲಾಗಿದ್ದು, ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಅವರ ಹೇಳಿಕೆಗಳು ಹಾಗೂ ಈವರೆಗೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳ ಆಧಾರದ ಮೇರೆಗೆ, ವಿಡಿಯೋದಲ್ಲಿ ಉಲ್ಲೇಖಿಸಲಾದ ಅಥವಾ ಸೂಚ್ಯವಾಗಿ ಆರೋಪಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು ಸುಳ್ಳು ಹಾಗೂ ಕಟ್ಟುಕಥೆಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

RELATED ARTICLES

Latest News