Homeಬೆಂಗಳೂರುಆನ್‌ಲೈನ್‌ ಬೆಟ್ಟಿಂಗ್‌ಗೆ ಬಲಿಯಾದ ಯುವಕ

ಆನ್‌ಲೈನ್‌ ಬೆಟ್ಟಿಂಗ್‌ಗೆ ಬಲಿಯಾದ ಯುವಕ

Youth commits suicide after falling into online betting trap

ಕನಕಪುರ,ಮೇ 21- ಆನ್‌ಲೈನ್‌ ಬೆಟ್ಟಿಂಗ್‌ಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಬಸವೇಶ್ವರ ನಗರದ ನಿವಾಸಿ ವಿನಯ್‌ (25)ಆತಹತ್ಯೆಗೆ ಶರಣಾದವರು.ದಿನಬಳಕೆ ವಸ್ತುಗಳನ್ನು ಮಾರುವ ಏಜೆನ್ಸಿ ನಡೆಸುತ್ತಿದ್ದ ವಿನಯ್‌ ಆನ್‌ಲೈನ್‌ ಬೆಟ್ಟಿಂಗ್‌ ಗೀಳಿಗೆ ಒಳಗಾಗಿ ಸಾಲ ಮಾಡಿಕೊಂಡಿದ್ದನು.

ಸಾಲದ ಬಡ್ಡಿ ಏರತೊಡಗಿದ್ದು, ಸಾಲ ತೀರಿಸಲು ಪರದಾಡುತ್ತಿದ್ದ ವಿನಯ್‌ ಹಣ ಹೊಂದಿಸಲಾಗದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನಕಪುರದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ಗೆ ಒಳಗಾಗಿ ಹಲವು ಯುವಕರು ಬಲಿಯಾಗುತ್ತಿದ್ದಾರೆ. ಇನ್ನೂ ಕೆಲವರು ಮನೆ, ಮಠ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು ಇನ್ನಾದರೂ ಈ ಜಾಲವನ್ನು ಪತ್ತೆಹಚ್ಚಿ ಕಡಿವಾಣ ಹಾಕಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

RELATED ARTICLES

Latest News