Friday, November 22, 2024
Homeರಾಜಕೀಯ | Politicsಸಂಸದೆ ಸುಮಲತಾರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ..? : ಹೆಚ್‌ಡಿಕೆ

ಸಂಸದೆ ಸುಮಲತಾರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ..? : ಹೆಚ್‌ಡಿಕೆ

ಬೆಂಗಳೂರು,ಜ.8- ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರಶ್ನಿಸಿದರು. ಲೋಕಸಭೆ ಚುನಾವಣೆ ಸಿದ್ಧತೆ ಕುರಿತಂತೆ ಜೆ.ಪಿ.ಭವನದಲ್ಲಿ ನಡೆದ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಜೊತೆ ಸುಮಲತಾ ಅವರು ಕೆಲಸ ಮಾಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಸೇರಿರುವುದರಿಂದ ಸುಮಲತಾ ಅವರೊಂದಿಗೆ ಮಾತನಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮರ ಕಡಿಯುವವರಿಗೆ, ಅಕ್ರಮ ಮಾಡುವವರಿಗೆ ನಾನು ಬೆಂಬಲ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಹೇಳಿಕೆಗೆ ಇದೇ ವೇಳೆ ತಿರುಗೇಟು ನೀಡಿದರು. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1, ಎ2 ಆರೋಪಿಗಳನ್ನು ಬಂಧಿಸಿಲ್ಲ. ಆದರೆ ಎಫ್‍ಐಆರ್‍ನಲ್ಲಿ ಹೆಸರಿಲ್ಲದ ವಿಕ್ರಮ್ ಸಿಂಹ ಅವರನ್ನು ಬಂಧಿಸಿದ್ದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಯಾವ ವಿಚಾರ ಚರ್ಚೆಯಾಯಿತು ಎಂದು ಪ್ರಶ್ನಿಸಿದ ಅವರು, ಹಲವು ಗಂಭೀರ ಪ್ರಕರಣಗಳನ್ನು ಕೊಡಲು ಸಿದ್ಧ. ಅವುಗಳ ಬಗ್ಗೆ ಕ್ರಮ ಕೈಗೊಳ್ಳುತ್ತೀರಾ ಎಂದು ಅರಣ್ಯ ಸಚಿವರನ್ನು ಪ್ರಶ್ನಿಸಿದರು.

ತರೀಕೆರೆಯಲ್ಲಿ ಅಕ್ರಮವಾಗಿ ಮರ ಕಡಿಯಲಾಗಿದೆ. ಕಡಿದಂತಹ ಮರಗಳು ಯಾವ ಶಾಸಕರ ಮನೆಗೆ ಹೋಗಿವೆ ಎಂದು ಮತ್ತೆ ಪ್ರಶ್ನಿಸಿದರು. ವಿರಾಜಪೇಟೆಯಲ್ಲಿ ರೋಸ್ ವುಡ್, ಟೀಕ್ ವುಡ್ ಮರಗಳನ್ನು ಕಡಿದಿರುವ ಬಗ್ಗೆ ಆಗಸ್ಟ್‍ನಲ್ಲೇ ಕಡತ ನಿಮ್ಮ ಮುಂದೆ ಬಂದಿವೆ. ಆದರೂ ಏಕೆ ಕ್ರಮ ಕೈಗೊಂಡಿಲ್ಲ. ಕೋಟ್ಯಂತರ ರೂ. ಬೆಲೆ ಬಾಳುವ ಮರಗಳವು. ನಾನು ದಾಖಲೆಗಳಿಲ್ಲದೆ ಯಾವ ವಿಚಾರನ್ನು ಪ್ರಸ್ತಾಪಿಸುವುದಿಲ್ಲ ಎಂದು ಹೇಳಿದರು.

ಯಶ್ ಕಟೌಟ್ ಕಟ್ಟುವಾಗ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳ ಸಾವು

ಬೆಳಗಾವಿ ಬಾಂಬೆ ಪ್ರಾಂತ್ಯದಲ್ಲಿತ್ತು ಎಂಬ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮುಗಿದು ಹೋಗಿರುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅವರು ವ್ಯಾಮೋಹದಿಂದ ಇನ್ನೂ ಹೊರಬರದಂತೆ ಕಾಣುತ್ತಿಲ್ಲ. ಮಂತ್ರಿಯಾಗಿ ಆ ರೀತಿ ಮಾತನಾಡುವುದು ಸರಿಯಲ್ಲ. ಮುಖ್ಯಮಂತ್ರಿಯವರಿಗೆ ಸಚಿವರ ಮೇಲೆ ಹಿಡಿತವಿದ್ದರೆ ಬುದ್ದಿ ಹೇಳಿ ಅಂಥ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಬಂದು ಏಳು ತಿಂಗಳು ಕಳೆದಿದೆ. ರೈತರಿಗೆ ಬರ ಪರಿಹಾರ ನೀಡಿಲ್ಲ . 2000 ರೂ. ತಾತ್ಕಾಲಿಕ ಪರಿಹಾರ ಎಷ್ಟು ಮಂದಿಗೆ ತಲುಪಿದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು 6 ತಿಂಗಳಿನಿಂದ ಅಭಿವೃದ್ದಿ ಕೆಲಸವೇ ಆಗಿಲ್ಲ ಎಂದು ಹೇಳಿಕೆ ನೀಡುತ್ತಿದ್ದರು. ರಾಜ್ಯದಲ್ಲಿ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು.

ವೈದ್ಯರು ನೀಡುವ ಸಲಹೆ ಆಧಾರದ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶ್ರೀರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅವಲಂಬಿಸಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಲಾಗಿದೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರಕ್ಕೆ ಕರೆಯಬೇಕಾ? ನೀವಾಗೇ ಹೋಗಬೇಕು. ಸಾವಿರಾರು ಜನ ಬರುತ್ತಾರೆ.

ಬೆಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲುಗಳ ವ್ಯವಸ್ಥೆ

ಪ್ರಧಾನಿಯವರೇ ಹೇಳಿದ್ದಾರೆ ಯಾರುಬೇಕಾದರೂ ಬಂದು ಶ್ರೀರಾಮನ ದರ್ಶನ ಮಾಡಿ ಎಂದು ಅದಕ್ಕೆ ಅನುಮತಿ ಬೇಕಾ? ರಾಮನ ಮೇಲೆ ಭಕ್ತಿ ಇರುವವರು ಯಾರು ಬೇಕಾದರೂ ಹೋಗಬಹುದು. ಅವರ ಮನೆಯಲ್ಲೂ ದೇವರ ಫೆÇೀಟೋಗಳು ಇವೆ. ದೇವರ ರಕ್ಷಣೆ ಇಲ್ಲದಿದ್ದರೆ ಉಳಿಯಬೇಕಲ್ಲವೇ? ಯಾವಾಗಲೂ ಆ ಕಾರಣಕ್ಕಾಗಿ ದೇವರನ್ನು ನೆನಪಿಸಿಕೊಳ್ಳುತ್ತಾರೆ. ಮಂತ್ರಾಕ್ಷತೆಯ ಅಕ್ಕಿಯನ್ನು ಅವರು ದೊಡ್ಡ ಹಾಲಳ್ಳಿಯಲ್ಲಿ ಬೆಳೆಸಿದ್ದರೇ ಎಂದು ಪ್ರಶ್ನಿಸಿದರು.

RELATED ARTICLES

Latest News