Monday, November 25, 2024
Homeರಾಜ್ಯಪರ್ಯಾಯ ಪೀಠಾರೋಹಣ ಮಾಡಿದ ಸುಗುಣೇಂದ್ರ ತೀರ್ಥರು

ಪರ್ಯಾಯ ಪೀಠಾರೋಹಣ ಮಾಡಿದ ಸುಗುಣೇಂದ್ರ ತೀರ್ಥರು

ಮಂಗಳೂರು, ಜ.18 (ಪಿಟಿಐ) – ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಇಂದು ಪರ್ಯಾಯ ಪೀಠಾರೋಹಣ ಮಾಡಿದರು. ಮುಂದಿನ ಎರಡು ವರ್ಷಗಳ ಕಾಲ, ಉಡುಪಿಯ ಎಂಟು ಮಠಗಳ ನಡುವೆ ಆಡಳಿತದ ಸಾಂಪ್ರದಾಯಿಕ ಸರದಿಯಂತೆ, ಸುಗುಣೇಂದ್ರ ತೀರ್ಥರು ಪರ್ಯಾಯವಾಗಿ ಕೃಷ್ಣ ದೇವಸ್ಥಾನದಲ್ಲಿ ಆಡಳಿತ ಮತ್ತು ಪೂಜೆಗಳನ್ನು ನೋಡಿಕೊಳ್ಳುತ್ತಾರೆ.

ಸುಗುಣೇಂದ್ರ ತೀರ್ಥ ಸ್ವಾಮಿಗಳು ಮಧ್ಯರಾತ್ರಿ 1.30 ಗಂಟೆಗೆ ಕಾಪುವಿನ ದಂಡತೀರ್ಥ ಸರೋವರದಲ್ಲಿ ಪುಣ್ಯಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿ ಧಾರ್ಮಿಕ ವಿಧಿ ವಿಧಾನಗಳು ಮತ್ತು ಭವ್ಯ ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸಿದರು. ಅವರ ಜೊತೆಯಲ್ಲಿ ಅವರ ಕಿರಿಯ ಮಠಾೀಧಿಶರಾದ ಸುಶೀಂದ್ರ ತೀರ್ಥರು ಇದ್ದರು.

ಅಪ್ಪ-ಅಮ್ಮನ ಹೆಸರು ಗೊತ್ತಿಲ್ಲದವರು ಜಾತ್ಯಾತೀತ ಹೆಸರು ಹೇಳುತ್ತಾರೆ ; ಹೆಗಡೆ

ಶ್ರೀ ಕೃಷ್ಣನ ದರ್ಶನದ ನಂತರ ಪುತ್ತಿಗೆ ಶ್ರೀಗಳಿಗೆ ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಉಸ್ತುವಾರಿಯನ್ನು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಸರ್ವಜ್ಞ ಪೀಠಕ್ಕೆ ಕರೆದೊಯ್ಯುವ ಮೂಲಕ ಹಸ್ತಾಂತರಿಸಿದರು.
ಇದಕ್ಕೂ ಮುನ್ನ ವಿವಿಧ ಟ್ಯಾಬ್‍ಲೋಗಳು, ಪಿಲಿ ವೇಷ ತಂಡಗಳು ಮತ್ತು ಸಂಗೀತ ತಂಡಗಳು ವರ್ಣರಂಜಿತ ಪರ್ಯಾಯ ಮೆರವಣಿಗೆಯಲ್ಲಿ ಸೇರಿಕೊಂಡವು. ತೆರೆದ ವಾಹನಗಳ ಮೇಲೆ ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪುತ್ತಿಗೆ ಶ್ರೀಗಳನ್ನು ಕರೆದೊಯ್ಯಲಾಯಿತು.

ಉಡುಪಿ ಜಿಲ್ಲಾಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ-ಚಿಕ್ಕಮಗಳೂರು ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ, ಶಾಸಕರಾದ ಯಶಪಾಲ್ ಸುವರ್ಣ, ವಿ ಸುನೀಲ್ ಕುಮಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News