Saturday, April 27, 2024
Homeರಾಜ್ಯವಿಶ್ವನಾಥ್ ಆನಂದ್ ಜೊತೆ ಚೆಸ್ ಆಡಿದ ಸಿಎಂ

ವಿಶ್ವನಾಥ್ ಆನಂದ್ ಜೊತೆ ಚೆಸ್ ಆಡಿದ ಸಿಎಂ

ಬೆಂಗಳೂರು,ಜ.18- ಮುಖ್ಯಮಂತ್ರಿ ಸಿದ್ದರಾಮಯ್ಯ ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರೊಂದಿಗೆ ಚೆಸ್ ಆಟವಾಡುವ ಮೂಲಕ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಓಪನ್ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಸ್ಟರ್ ಆನಂದ್ ಅವರೊಂದಿಗೆ ಚೆಸ್ ಆಡಲು ಕುಳಿತುಕೊಂಡರು.

ಮಾಸ್ಟರ್ ಆನಂದ್ ಒಂದು ದಾಳವನ್ನು ನಡೆಸಿದರು.ಮುಖ್ಯಮಂತ್ರಿಯವರು ಪ್ರತಿಯಾಗಿ ಒಂದು ದಾಳವನ್ನು ನಡೆಸಿದರು. ಆನಂದ್ ಅವರು ಎರಡನೇ ದಾಳ ನಡೆಸಿದಾಗ ಮುಖ್ಯಮಂತ್ರಿಯವರಿಗೆ ಮುಂದಿನ ಆಟದ ಬಗ್ಗೆ ಗೊಂದಲವಾಯಿತು.

ಆಗ ಪಕ್ಕದಲ್ಲೇ ಇದ್ದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದ್ ರಾಜು ಅವರು ನೆರವಿಗೆ ಬಂದರು. ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಸಲಹೆ ನೀಡಿದರು. ಒಟ್ಟು ಎರಡು ದಾಳಗಳನ್ನು ಮುನ್ನಡೆಸಿ, ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಅಪ್ಪ-ಅಮ್ಮನ ಹೆಸರು ಗೊತ್ತಿಲ್ಲದವರು ಜಾತ್ಯಾತೀತ ಹೆಸರು ಹೇಳುತ್ತಾರೆ ; ಹೆಗಡೆ

ಜನವರಿ 18 ರಿಂದ ಜನವರಿ 26ರವರೆಗೂ ಈ ಪಂದ್ಯಾವಳಿ ನಡೆಯಲಿದ್ದು, ಇದರಲ್ಲಿ 18 ದೇಶದಗಳ ಎ ಗ್ರೇಡ್, ಬಿ ಗ್ರೇಡ್ ಸೇರಿ, ಟೂರ್ನಿಯಲ್ಲಿ 50 ಗ್ರ್ಯಾಂಡ್ ಮಾಸ್ಟರ್ಸ್ ಹಾಗೂ 1500 ಸ್ರ್ಪಗಳು ಭಾಗವಹಿಸಲಿದ್ದಾರೆ.

RELATED ARTICLES

Latest News