Homeರಾಷ್ಟ್ರೀಯಮತ್ತೊಬ್ಬ ಟಿಎಂಸಿ ಶಾಸಕನ ಮೇಲೆ ಮೊಟ್ಟೆ ಎಸೆತ

ಮತ್ತೊಬ್ಬ ಟಿಎಂಸಿ ಶಾಸಕನ ಮೇಲೆ ಮೊಟ್ಟೆ ಎಸೆತ

Another TMC leader 'egged' in Bengal,

ಕೋಲ್ಕತ್ತಾ, ಜೂ.7 ತೃಣಮೂಲ ಕಾಂಗ್ರೆಸ್‌‍ (ಟಿಎಂಸಿ) ಹಿರಿಯ ಶಾಸಕ ಮದನ್‌ ಮಿತ್ರ ಅವರ ವಾಹನದ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ.ನಿನ್ನೆ ರಾತ್ರಿ ಕಮರ್ಹತಿಯ ಅರಿಯದಹ ಪ್ರದೇಶದಲ್ಲಿ ಮಿತ್ರ ಅವರ ಕಾರು ಸಾಗುತ್ತಿದ್ದಾಗ ಪ್ರತಿಭಟನಾಕಾರರು ಮೊಟ್ಟೆ ಎಸೆದ ಘಟನೆ ನಡೆದಿದೆ.

ಸ್ಥಳೀಯ ಆಟೋ ಮತ್ತು ಇ-ರಿಕ್ಷಾ ಚಾಲಕರು ವಾರ್ಡ್‌ ಸಂಖ್ಯೆ 14 ರ ಕೌನ್ಸಿಲರ್‌ ಕಚೇರಿ ಮುಂದೆ ಜಮಾಯಿಸಿ, ಕಳೆದ ಕೆಲವು ವರ್ಷಗಳಿಂದ ಬಲವಂತವಾಗಿ ವಸೂಲಿ ಮಾಡಲಾಗಿರುವ ಕಟ್‌ ಮನಿ (ಅಕ್ರಮ ಕಮಿಷನ್‌‍) ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ವಾಹನವನ್ನು ಗುರಿಯಾಗಿಸಿ ಮೊಟ್ಟೆ ಎಸೆಯಲಾಗಿದ್ದು, ಚಾಲಕನ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.

ಈ ದಾಳಿಯ ಹಿಂದೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳ ಕೈವಾಡವಿದೆ ಎಂದು ಮದನ್‌ ಮಿತ್ರ ಆರೋಪಿಸಿದ್ದಾರೆ. ಆದರೆ, ರಾಜ್ಯದಲ್ಲಿನ ರಾಜಕೀಯ ಬದಲಾವಣೆಯ ನಂತರ ಸ್ಥಳೀಯರಲ್ಲಿ ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ ಎಂದು ವರದಿಗಳು ತಿಳಿಸಿವೆ.

RELATED ARTICLES

Latest News