Homeರಾಷ್ಟ್ರೀಯಗುರುಗ್ರಾಮ : ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಹಾರಿ ಯುವತಿ ಆತಹತ್ಯೆ

ಗುರುಗ್ರಾಮ : ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಹಾರಿ ಯುವತಿ ಆತಹತ್ಯೆ

Delhi woman dies by suicide at Gurugram’s MG Road metro station

ಗುರುಗ್ರಾಮ, ಜೂನ್‌ 7- ಇಲ್ಲಿನ ಎಂಜಿ ರೋಡ್‌ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬರು ಮೆಟ್ರೋ ರೈಲಿನ ಮುಂದೆ ಹಾರಿ ಮೃತಪಟ್ಟಿರುವ ಘಟನೆ ನಡೆದಿದೆ
ಮೃತ ಯುವತಿಯನ್ನು ವರ್ಷಾ(22)ಎಂದು ಗುರುತಿಸಲಾಗಿದೆ.

ಆಕೆ ಅಯಾನಗರ ನಿವಾಸಿಯಾಗಿದ್ದು, ಗುರುಗ್ರಾಮದ ಎಂಜಿ ರೋಡ್‌ ಮೆಟ್ರೋ ನಿಲ್ದಾಣದ ಸಮೀಪದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಸುಮಾರು 9.30 ಗಂಟೆಗೆ ದೆಹಲಿಯತ್ತ ತೆರಳುತ್ತಿದ್ದ ಮೆಟ್ರೋ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ವರ್ಷಾ ಹಳಿಗೆ ಇಳಿದು ರೈಲಿನ ಮುಂದೆ ಬಂದಿದ್ದಾರೆ.
ಘಟನೆಯ ನಂತರ ಆ ಮಾರ್ಗದಲ್ಲಿ ಮೆಟ್ರೋ ಸೇವೆ ಸುಮಾರು ಅರ್ಧ ಗಂಟೆ ಕಾಲ ವ್ಯತ್ಯಯಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರ ಪ್ರಕಾರ, ಘಟನೆಗೆ ಕಾರಣವಾದ ನಿಖರ ಸಂದರ್ಭಗಳು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ತನಿಖೆ ಮುಂದುವರಿದಿದೆ.ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಮೃತೆಯ ಕುಟುಂಬ ಸದಸ್ಯರಿಗೆ ತೋರಿಸಿದ್ದಾರೆ. ಆದರೆ ಕುಟುಂಬದವರು ಇದನ್ನು ಆತ್ಮಹತ್ಯೆಯಲ್ಲ,

ಅಪಘಾತವೆಂದು ಪರಿಗಣಿಸಿದ್ದು, ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಕುಟುಂಬ ಸದಸ್ಯರು ಇದನ್ನು ಅಪಘಾತವೆಂದು ಪರಿಗಣಿಸಿದ್ದು, ಯಾವುದೇ ದೂರು ದಾಖಲಿಸಿಲ್ಲ ಎಂದು ಗುರುಗ್ರಾಮ ಪೊಲೀಸ್‌‍ ವಕ್ತಾರರು ತಿಳಿಸಿದ್ದಾರೆ.

RELATED ARTICLES

Latest News