Homeಇದೀಗ ಬಂದ ಸುದ್ದಿBREAKING : ಬೆಂಗಳೂರಲ್ಲಿ ರಾಶಿ ರಾಶಿ ಜಿಲೆಟಿನ್‌ ಕಡ್ಡಿಗಳಿದ್ದ ಬಾಕ್ಸ್‌ಗಳು ಪತ್ತೆ..!!

BREAKING : ಬೆಂಗಳೂರಲ್ಲಿ ರಾಶಿ ರಾಶಿ ಜಿಲೆಟಿನ್‌ ಕಡ್ಡಿಗಳಿದ್ದ ಬಾಕ್ಸ್‌ಗಳು ಪತ್ತೆ..!!

Boxes containing a large quantity of gelatin sticks were found in Bengaluru.

ಬೆಂಗಳೂರು,ಜೂ.9-ನಗರದಲ್ಲಿ ಬೃಹತ್‌ ಪ್ರಮಾಣದ 50 ಡಿನೋನೇಟರ್‌ ಕಡ್ಡಿಗಳು ಹಾಗೂ 225 ಜಿಲೆಟಿನ್‌ ಕಡ್ಡಿಗಳಿದ್ದ ಬಾಕ್ಸ್ ಗಳು ಪತ್ತೆಯಾಗಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ಆವಲಹಳ್ಳಿಯ ಕಾಡ ಅಗ್ರಹಾರ ಬಳಿ ಅನುಮಾನಾಸ್ಪದವಾಗಿ ಬಾಕ್ಸ್ ಗಳು ಇವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆವಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಬಾಕ್‌್ಸಗಳನ್ನು ತೆರೆದು ನೋಡಿದಾಗ ಅದರಲ್ಲಿ ಸ್ಫೋಟಕ ವಸ್ತುಗಳಾದ ಜಿಲೆಟಿನ್‌ ಕಡ್ಡಿಗಳು ಹಾಗೂ ಡಿನೋನೇಟರ್‌ ಕಡ್ಡಿಗಳು ಪತ್ತೆಯಾಗಿವೆ.

ಈ ಜಿಲೆಟಿನ್‌ ಕಡ್ಡಿಗಳು ವೆಂಕಟರಾಮ ರೆಡ್ಡಿ ಎಂಬಾತನಿಗೆ ಸೇರಿದ್ದು ಎಂಬುವುದು ಗೊತ್ತಾಗಿದೆ. ಬಂಡೆ ಒಡೆಯಲು ಈ ಜಿಲೆಟಿನ್‌ ಕಡ್ಡಿಗಳನ್ನು ಸಂಗ್ರಹಿಸಿಟ್ಟಿದ್ದಾಗಿ ಆತ ಹೇಳಿದ್ದಾನೆ.ಪೊಲೀಸರು ವೆಂಕಟರಾಮರೆಡ್ಡಿ ಮತ್ತು ಆತನ ಕೆಲಸಗಾರರನ್ನು ವಶಕ್ಕೆ ಪಡೆಯಲಾಗಿದೆ. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಯಾವುದೇ ದಾಖಲಾತಿ ಇಲ್ಲದೆ ಈ ಜಿಲೆಟಿನ್‌ ಕಡ್ಡಿಗಳನ್ನು ಸಂಗ್ರಹಿಸಿ ಇಟ್ಟಿರುವುದು ಗೊತ್ತಾಗಿದೆ.

ಠಾಣೆಗೆ ಇದುವರೆಗೆ ಲೈಸ್ಸೆ್‌ ಹಾಜರು ಪಡಿಸಿಲ್ಲ. ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಈ ಸ್ಫೋಟಕಗಳನ್ನು ಕೇವಲ ಬಂಡೆ ಒಡೆಯಲು ಸಂಗ್ರಹಿಸಿಡಲಾಗಿತ್ತೇ ಅಥವಾ ಬೇರೆ ಯಾವ ಕಾರಣಕ್ಕೆ ಸಂಗ್ರಹಿಸಿಟ್ಟಿದ್ದರು ಎಂಬ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

RELATED ARTICLES

Latest News