ಬೆಂಗಳೂರು, ಜು.26- ವೈಟ್‌ಫೀಲ್‌್ಡ ವಿಭಾಗದ ಪೊಲೀಸರು ಮೊಬೈಲ್ ಕಳವು ಪ್ರಕರಣಗಳನ್ನು ಪತ್ತೆಹಚ್ಚಿ 2.70 ಕೋಟಿ ರೂ. ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡು 1119 ಮೊಬೈಲ್‌ಗಳನ್ನು ಕೆಲವು ವಾರಸುದಾರರಿಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಹಸ್ತಾಂತರಿಸಿದರು. ನಿನ್ನೆ ವೈಟ್‌ಫೀಲ್‌್ಡನ ಕುಂದಲಹಳ್ಳಿಯಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಕೆಲವು ವಾರಸುದಾರರಿಗೆ ಮೊಬೈಲ್‌ಗಳನ್ನು ಹಿಂತಿರುಗಿಸಲಾಯಿತು.
ಕೆ.ಆರ್.ಪುರಂ ಠಾಣೆ ಪೊಲೀಸರು 50 ಲಕ್ಷ ರೂ. ಮೌಲ್ಯದ 187 ಮೊಬೈಲ್‌ಗಳನ್ನು ಮರು ಸ್ವಾಧಿನಪಡಿಸಿಕೊಂಡರೆ ಮಾರತ್ತಹಳ್ಳಿ ಪೊಲೀಸರು 45 ಲಕ್ಷ ರೂ. ಮೌಲ್ಯದ 145 ಮೊಬೈಲ್‌ಗಳು, ವೈಟ್‌ಫೀಲ್‌್ಡ 30 ಲಕ್ಷ ರೂ. ಮೌಲ್ಯದ 140, ಮಹದೇವಪುರ 25 ಲಕ್ಷ ರೂ. ಮೌಲ್ಯದ 132, ವರ್ತೂರು 30 ಲಕ್ಷ ರೂ. ಮೌಲ್ಯದ 120 , ಕಾಡುಗೋಡಿ 20 ಲಕ್ಷ ರೂ. ಮೌಲ್ಯದ 110, ಎಚ್‌ಎಎಲ್ 25 ಲಕ್ಷ ರೂ. ಮೌಲ್ಯದ 110, ಬೆಳ್ಳಂದೂರು ಠಾಣೆ ಪೊಲೀಸರು 31 ಲಕ್ಷ ರೂ. ಮೌಲ್ಯದ 103 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆವಲಹಳ್ಳಿ ಠಾಣೆ ಪೊಲೀಸರು 14 ಲಕ್ಷ ರೂ. ಮೌಲ್ಯದ 70 ಮೊಬೈಲ್‌ಗಳನ್ನು ವಶಪಡಿಸಿಕೊಂಡರೆ ಸೆನ್ ಠಾಣೆ ಪೊಲೀಸರು 42 ಸಾವಿರ ರೂ. ಮೌಲ್ಯದ 2 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ನಿರಂತರವಾಗಿ ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಪರಿಶೀಲಿಸಿ ವೈಟ್‌ಫೀಲ್‌್ಡ ವಿಭಾಗದ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಒಟ್ಟಾರೆ 1119 ಮೊಬೈಲ್‌ಗಳನ್ನು ಯಶಸ್ವಿ ಮರುಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯು ಸಾರ್ವಜನಿಕರು ಕಳೆದುಕೊಂಡ ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ನಗರ ಪೊಲೀಸರ ಬದ್ಧತೆ ಹಾಗೂ ಸಿಇಐಆರ್ ವ್ಯವಸ್ಥೆಯ ಪರಿಣಾಮಕಾರಿ ಬಳಕೆಯನ್ನು ಪ್ರತಿಬಿಂಬಿಸುತ್ತದೆ.
ಸಾರ್ವಜನಿಕರು ಮೊಬೈಲ್ ಕಳೆದುಕೊಂಡಲ್ಲಿ ತಕ್ಷಣ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ನಗರ ಪೊಲೀಸರು ಮನವಿ ಮಾಡಿದ್ದಾರೆ.
