ಬೆಂಗಳೂರು, ಜು.26- ಕೊಡಗು ಜಿಲ್ಲೆಯ ಹಾರಂಗಿ ಮತ್ತು ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯಗಳು ಭರ್ತಿಯಾಗಿದ್ದು, ಅಣೆಕಟ್ಟಿನಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗಿದೆ.
ವಾಡಿಕೆಯಂತೆ ಹಾರಂಗಿ ಜಲಾಶಯದ ನಾಲ್ಕು ಕ್ರಸ್‌್ಟಗೇಟ್‌ಗಳಿಗೆ ಪೂಜೆ ಸಲ್ಲಿಸಿ ಕಾವೇರಿ ನದಿಗೆ 4 ಸಾವಿರ ಕ್ಯೂಸೆಕ್‌್ಸ ನೀರನ್ನು ಹರಿಸಲಾಗಿದೆ. ಜಲಾಶಯದ ನೀರಿನ ಪೂರ್ಣ ಮಟ್ಟ 2,859 ಅಡಿಯಾಗಿದ್ದು, ನಿನ್ನೆ ಸಂಜೆ ವೇಳೆಗೆ 2,857.48 ಅಡಿ ಭರ್ತಿಯಾಗಿದ್ದು, 4,914 ಕ್ಯೂಸೆಕ್‌್ಸ ಒಳಹರಿವಿದ್ದು, ಕಳೆದ ವರ್ಷ ಮೇ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಜುಲೈ ಅಂತ್ಯಕ್ಕೆ ಭರ್ತಿಯಾಗಿದೆ.
ನೀರನ್ನು ಹೊರಬಿಟ್ಟಿರುವುದರಿಂದ ಹಾರಂಗಿ ಜಲಾನಯನ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ ವಹಿಸುವಂತೆ ಹಾರಂಗಿ ಪುನರ್‌ವಸತಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ. ಹಾರಂಗಿ ಮತ್ತು ಕಾವೇರಿ ನದಿಪಾತ್ರದಲ್ಲಿರುವ ನದಿಗಳ 2 ದಂಡೆಯಲ್ಲಿ ವಾಸಿಸುವ ಜನರು ಆಸ್ತಿಪಾಸ್ತಿ ಮತ್ತು ಜಾನುವಾರುಗಳ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.
ಇದೇ ರೀತಿ ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಸುಮಾರು 70 ಸಾವಿರ ಕ್ಯೂಸೆಕ್‌್ಸ ಒಳಹರಿವಿದ್ದು, ಶೇ.95 ರಷ್ಟು ಭರ್ತಿಯಾಗುವ ಹಂತದಲ್ಲಿದ್ದು, 14 ಕ್ರಸ್‌್ಟಗೇಟ್‌ಗಳ ಮೂಲಕ 46,390 ಕ್ಯೂಸೆಕ್‌್ಸ ನೀರನ್ನು ಹೊರಬಿಡಲಾಗಿದೆ. 492.25 ಮೀ. ಗರಿಷ್ಠ ಎತ್ತರವಿರುವ ಬಸವಸಾಗರ ಜಲಾಶಯದ ನೀರಿನ ಮಟ್ಟ 491.92 ಮೀ. ತಲುಪಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೂ ಕೂಡಾ ಒಳಹರಿವು ಹೆಚ್ಚಾಗಿದೆ.
