Homeರಾಜ್ಯನೆಹರು ದಾಖಲೆ ಮುರಿದ ಪ್ರಧಾನಿ ಮೋದಿ : ರಾಜ್ಯ ಬಿಜೆಪಿ ನಾಯಕರಿಂದ ವಿಶೇಷ ಪೂಜೆ

ನೆಹರು ದಾಖಲೆ ಮುರಿದ ಪ್ರಧಾನಿ ಮೋದಿ : ರಾಜ್ಯ ಬಿಜೆಪಿ ನಾಯಕರಿಂದ ವಿಶೇಷ ಪೂಜೆ

PM Modi breaks Nehru's record: State BJP leaders offer special puja

ಬೆಂಗಳೂರು,ಜೂ.10- ನರೇಂದ್ರಮೋದಿ ಅವರು ದೇಶದಲ್ಲಿ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಹೊಸ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ರಾಜ್ಯಾದ್ಯಂತ ವಿಶೇಷ ಪೂಜೆ, ಹೋಮಹವನ ನಡೆಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ವಿ.ಸೋಮಣ್ಣ, ಪ್ರತಿಪಕ್ಷದ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಅಶ್ವಥ್‌ ನಾರಾಯಣ ಸೇರಿದಂತೆ ಪಕ್ಷದ ಮುಖಂಡರು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು.
ವಿಶೇಷವಾಗಿ ಹತ್ತು ವಿಧಾನಸಭಾ ಕ್ಷೇತ್ರಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿ ಇನ್ನು ಅನೇಕ ವರ್ಷಗಳ ಕಾಲ ಮೋದಿಯವರು ದೇಶ ಸೇವೆ ಮಾಡಲಿ ಎಂದು ಪ್ರಾರ್ಥಿಸಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರು, ವಿಧಾನಸೌಧದಲ್ಲಿರುವ ಅರಳಿಕಟ್ಟೆ ಮುನೇಶ್ವರ ದೇವಸ್ಥಾನದಲ್ಲಿ ಮೋದಿಯವರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಮೋದಿಯವರ ಭಾವಚಿತ್ರವನ್ನು ದೇವರ ಮುಂದೆ ಇಟ್ಟು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇದೇ ರೀತಿ ರಾಜ್ಯದ ನಾನಾ ಕಡೆ ಸಂಸದರು, ಶಾಸಕರು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ದೀರ್ಘ ಕಾಲ ಮೋದಿಯವರು ದೇಶ ಸೇವೆ ಸಲ್ಲಿಸಲಿ ಎಂದು ಪ್ರಾರ್ಥಿಸಿದರು.

RELATED ARTICLES
spot_img

Latest News