Homeರಾಜಕೀಯಭಾರತಕ್ಕೆ ತೊಂದರೆಯಾಗದಂತೆ ಮುನ್ನಡೆಸುವಂಥ ಶಕ್ತಿ ಪ್ರಧಾನಿ ಮೋದಿ ಅವರಿಗಿದೆ : ಬೊಮ್ಮಾಯಿ

ಭಾರತಕ್ಕೆ ತೊಂದರೆಯಾಗದಂತೆ ಮುನ್ನಡೆಸುವಂಥ ಶಕ್ತಿ ಪ್ರಧಾನಿ ಮೋದಿ ಅವರಿಗಿದೆ : ಬೊಮ್ಮಾಯಿ

Prime Minister Modi has the ability to lead India without any problems: Bommai

ಗದಗ,ಜೂ.10- ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಡೆಸುವಂಥ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. 2047 ರಲ್ಲಿ ಆತನಿರ್ಭರ ಭಾರತ, ವಿಕಸಿತ ಭಾರತ ಆಗಲು ಅವರ ಅವಶ್ಯಕತೆ ಬಹಳ ಇದೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಅತಿ ದೀರ್ಘಾವಧಿ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿನ್ನೆಲೆಯಲ್ಲಿ ಗದಗ ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ವಿಶೇಷ ಪೂಜೆ ಕೈಂಕರ್ಯದಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.
ಇಂದು ನಾವು ಯಾಕೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದರೆ ಜಗತ್ತು ಅತ್ಯಂತ ಸಂಕೀರ್ಣ ಕಾಲದಲ್ಲಿದೆ. ಜಾಗತಿಕ ಬಿಕ್ಕಟ್ಟಿದೆ. ಇದರಿಂದ ಭಾರತಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನಡೆಸುವಂತ ಶಕ್ತಿ ನರೇಂದ್ರಮೋದಿಯವರಿಗಿದೆ. ದೇಶದಕ್ಕೆ ಅವರ ಅವಶ್ಯಕತೆ ಬಹಳ ಇದೆ. ಹೀಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದರು.

ದೇಶದಲ್ಲಿ ಎಲ್ಲದಕ್ಕೂ ಕಾನೂನಿನಲ್ಲಿ ಅವಕಾಶ ಇದೆ. ಆರ್‌ ಎಸ್‌‍ ಎಸ್‌‍ ಇಡಿ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಸ್ಥೆ ಮತ್ತು ಜನಸೇವೆಯಲ್ಲಿ ಶ್ರೇಷ್ಟವಾದ ಕೆಲಸ ಮಾಡುತ್ತ ಬಂದಿದೆ. ಹೀಗಾಗಿ ಆಗಾಗ ಕೆಲವರು ಈ ರೀತಿಯ ಮಾತುಗಳನ್ನು ಆಡುತ್ತಾರೆ. ಆರ್‌ ಎಸ್‌‍ ಎಸ್‌‍ ಜನ ಸೇವೆಯಲ್ಲಿ ಮುಂದುವರೆಯುತ್ತದೆ. ಅದರ ಮಾರ್ಗದರ್ಶನದಲ್ಲಿ ನಮ ರಾಜಕೀಯ ತತ್ವ ಹಾಗೂ ಮೌಲ್ಯಗಳು ಬಂದಿವೆ ಎಂದು ಹೇಳಿದರು.

ಮೂರು ಸ್ಥಾನ ಗೆಲುವು:
ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ನಮ ಹೆಚ್ಚುವರಿ ಮತಗಳನ್ನು ನಮ ಮೈತ್ರಿ ಪಕ್ಷ ಜೆಡಿಎಸ್‌‍ ಹಾಗೂ ಬಿಜೆಪಿ ನಾಯಕರು ಕುಳಿತುಕೊಂಡು ಯಾವ ರೀತಿ ಯಾರಿಗೆ ಏನು ಕೊಡಬೇಕೆಂದು ತೀರ್ಮಾನ ಮಾಡುತ್ತಾರೆ. ಬಿಜೆಪಿಯ ಇಬ್ಬರು ಮತ್ತು ಮೈತ್ರಿ ಅಭ್ಯರ್ಥಿ ಕೂಡ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶಾಸಕರಾದ ಶ್ರೀ ಸಿ.ಸಿ.ಪಾಟೀಲ್‌, ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಎಸ್‌‍.ವಿ.ಸಂಕನೂರ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶ್ರೀ ರಾಜು ಕುರಡಗಿ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

RELATED ARTICLES

Latest News