ಯಲಹಂಕ, ಆ.2-ಯಲಹಂಕ ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡ, ದೊಡ್ಡಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಬಮೂಲ್‌ನ ಮಾಜಿ ಅಧ್ಯಕ್ಷ ದಿಬ್ಬೂರು ಜಯಣ್ಣ ಅವರ ಜನ್ಮದಿನವನ್ನು ಇಂದು ದಿಬ್ಬೂರು ಗ್ರಾಮದ ಸ್ವಗೃಹದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅವರ ಸಹೋದರ ಹಾಗೂ ರಾಷ್ಟ್ರೀಯ ಕಿಸಾನ್ ಸಂಘಟನೆಯ ರಾಜ್ಯಾಧ್ಯಕ್ಷ ದಿಬ್ಬೂರು ವಿಜಯಕುಮಾರ್ ಅವರ ಜನದಿನವನ್ನೂ ಆಚರಿಸಲಾಯಿತು. ವಿಶೇಷವೆಂದರೆ ದಿಬ್ಬೂರು ಜಯಣ್ಣ, ಅವರ ಪತ್ನಿ ಶೈಲಜಾ ಜಯಣ್ಣ ಹಾಗೂ ಸಹೋದರ ವಿಜಯಕುಮಾರ್ ಮೂವರ ಜನದಿನವೂ ಆಗಸ್ಟ್ 2ರಂದು ಬರುವ ಅಪರೂಪದ ಸಂಗತಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್, ಆರ್‌ಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷೆ ಡಾ. ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡ ಹಾಗೂ ವಿಶ್ವವಾಣಿ ಫೌಂಡೇಶನ್ ನಿರ್ದೇಶಕ ಅಲೋಕ್ ವಿಶ್ವನಾಥ್ ಸೇರಿದಂತೆ ಹಲವು ಬಿಜೆಪಿ
ಮುಖಂಡರು, ಕಾರ್ಯಕರ್ತರು, ಸ್ನೇಹಿತರು ಹಾಗೂ ಅಭಿಮಾನಿಗಳು ಭಾಗವಹಿಸಿ ದಿಬ್ಬೂರು ಜಯಣ್ಣ ಹಾಗೂ ವಿಜಯಕುಮಾರ್ ಅವರಿಗೆ ಶುಭಾಶಯ ಕೋರಿದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್. ವಿಶ್ವನಾಥ್, ದಿಬ್ಬೂರು ಜಯಣ್ಣ ಅವರು ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವದ ಮೂಲಕ ಪಕ್ಷದ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆಯ ಅವಕಾಶ ದೊರೆಯಲಿ ಎಂದು ಹಾರೈಸಿದರು.
ದಿಬ್ಬೂರು ವಿಜಯಕುಮಾರ್ ಮಾತನಾಡಿ, ಪ್ರತಿ ವರ್ಷ ತಮ ಸಹೋದರ ದಿಬ್ಬೂರು ಜಯಣ್ಣ ಅವರೊಂದಿಗೆ ಜನದಿನ ಆಚರಿಸಿ ಕೊಳ್ಳುವುದು ತಮ ಜೀವನದ ಭಾಗ್ಯವಾಗಿದೆ ಎಂದರು.
ಕಾರ್ಯಕರ್ತರು, ಸ್ನೇಹಿತರು ಹಾಗೂ ಹಿತೈಷಿಗಳು ಆಗಮಿಸಿ ಶುಭ ಹಾರೈಸಿರುವುದು ಕುಟುಂಬಕ್ಕೆ ಸಂತಸ ತಂದಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಎಂ.ಜಿ. ರಾಮಮೂರ್ತಿ, ಎಂ. ಮುನಿರಾಜು, ಮಂಜುನಾಥ್, ಸೋಮಶೇಖರ್ ಎಸ್.ಎನ್. ರಾಜಣ್ಣ, ಡಿ.ಜಿ. ಅಪ್ಪಯ್ಯಣ್ಣ, ಟಿ. ಮುನಿರೆಡ್ಡಿ, ಬೆಟ್ಟಹಳ್ಳಿ ಕಿರಣ್, ಎಸ್.ಜಿ. ನರಸಿಂಹಮೂರ್ತಿ, ಅಡ್ಡಿಗನಹಳ್ಳಿ ವೀರಣ್ಣ, ಎಸ್.ಜಿ. ಪ್ರಶಾಂತ್ ರೆಡ್ಡಿ, ಶಿವಾನಂದ್, ಹೇಮಂತ್ ಕುಮಾರ್, ಎನ್.ಡಿ. ಜಗದೀಶ್, ಕಾಕೋಳು ಮುನೇಶ್, ರಾಮಚಂದ್ರ ರೆಡ್ಡಿ, ವೆಂಕಟೇಶ್, ವಸಂತ್ ಅರಕೆರೆ ಸೇರಿದಂತೆ ಅನೇಕ ಮುಖಂಡರು ಮತ್ತು ಅಭಿಮಾನಿಗಳು ಇದ್ದರು.
