Homeಆರೋಗ್ಯ / ಜೀವನಶೈಲಿನೀರು, ಕೃಷಿ ಮತ್ತು ಪೌಷ್ಟಿಕತೆಯಲ್ಲಿ ಸುಸ್ಥಿರ ಕ್ರಮಗಳಿಗೆ ಪೆಪ್ಸಿಕೊ ಒತ್ತು

ನೀರು, ಕೃಷಿ ಮತ್ತು ಪೌಷ್ಟಿಕತೆಯಲ್ಲಿ ಸುಸ್ಥಿರ ಕ್ರಮಗಳಿಗೆ ಪೆಪ್ಸಿಕೊ ಒತ್ತು

ಬೆಂಗಳೂರು: ಪೆಪ್ಸಿಕೊ ತನ್ನ 2025ರ ಪರಿಸರ, ಸಾಮಾಜಿಕ ಮತ್ತು ಆಡಳಿತ ಕಾರ್ಯಕ್ಷಮತಾ ವರದಿಯನ್ನು ಬಿಡುಗಡೆ ಮಾಡಿದ್ದು, ಜಲ ಸಂರಕ್ಷಣೆ, ಪುನರುಜ್ಜೀವನ ಕೃಷಿ, ಮರುಬಳಕೆ ಆಧಾರಿತ ಪ್ಯಾಕೇಜಿಂಗ್ ಮತ್ತು ಆರೋಗ್ಯಕರ ಆಹಾರ ಆಯ್ಕೆಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಪ್ರಕಟಿಸಿದೆ. ಜಾಗತಿಕ ಮಟ್ಟದಲ್ಲಿ ಕಂಪನಿಯು 60ಕ್ಕೂ ಹೆಚ್ಚು ದೇಶಗಳಲ್ಲಿ 47 ಲಕ್ಷ ಎಕರೆ ಪ್ರದೇಶದಲ್ಲಿ ಪುನರುಜ್ಜೀವನ ಮತ್ತು ಸಂರಕ್ಷಣಾತ್ಮಕ ಕೃಷಿ ಪದ್ಧತಿಗಳನ್ನು ವಿಸ್ತರಿಸಿದೆ. ನೀರಿನ ಕೊರತೆಯ ಅಪಾಯ ಹೆಚ್ಚಿರುವ ತನ್ನ ಘಟಕಗಳಲ್ಲಿ ಬಳಸಿದ ನೀರಿನ ಶೇ 100ರಷ್ಟು ಮರುಪೂರಣ ಮಾಡಿದ್ದು, ಪ್ರಾಥಮಿಕ ಪ್ಯಾಕೇಜಿಂಗ್‌ನಲ್ಲಿ ಹೊಸ ಪ್ಲಾಸ್ಟಿಕ್ ಬಳಕೆಯನ್ನು ಶೇ 6ರಷ್ಟು ಕಡಿಮೆ ಮಾಡಿದೆ.

ಭಾರತದಲ್ಲಿ ಪೆಪ್ಸಿಕೊ 14 ರಾಜ್ಯಗಳ ಸುಮಾರು 36,000 ರೈತರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಚಿಪ್ಸ್ ತಯಾರಿಕೆಗೆ ಅಗತ್ಯವಿರುವ ಆಲೂಗಡ್ಡೆಯನ್ನು ಸಂಪೂರ್ಣವಾಗಿ ದೇಶೀಯವಾಗಿ ಖರೀದಿಸುತ್ತಿದೆ. ‘ಮಿಟ್ಟಿ ದೀದಿ’ ಯೋಜನೆಯ ಮೂಲಕ ಮಣ್ಣಿನ ಆರೋಗ್ಯ ಮಾಹಿತಿ ನೀಡಲಾಗುತ್ತಿದ್ದು, ‘ಲೇಸ್ ಸ್ಮಾರ್ಟ್ ಫಾರ್ಮ್ಸ್’ ಯೋಜನೆಯು 18,000ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಒಳಗೊಂಡು 7,000ಕ್ಕೂ ಹೆಚ್ಚು ರೈತರಿಗೆ ನೆರವಾಗುತ್ತಿದೆ. ಪ್ರಮುಖ ಆಲೂಗಡ್ಡೆ ಬೆಳೆಯುವ ಪ್ರದೇಶಗಳಲ್ಲಿ ಸೂಕ್ಷ್ಮ ನೀರಾವರಿ ಬಳಕೆ ಶೇ 100ಕ್ಕೆ ತಲುಪಿದೆ.

ನೀರಿನ ಸಂರಕ್ಷಣೆಯ ಭಾಗವಾಗಿ ಪುಣೆ ಘಟಕದಲ್ಲಿ ನೀರಿನ ಬಳಕೆಯನ್ನು ಶೇ 90ಕ್ಕೂ ಹೆಚ್ಚು ಕಡಿಮೆ ಮಾಡಲಾಗಿದೆ. 2010ರಿಂದ ಜಾಗತಿಕವಾಗಿ 2,300 ಕೋಟಿ ಲೀಟರ್ ನೀರನ್ನು ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಮರುಪೂರಣ ಮಾಡಿದ್ದು, ಸುಮಾರು 9.7 ಕೋಟಿ ಜನರಿಗೆ ಸುರಕ್ಷಿತ ನೀರಿನ ಲಭ್ಯತೆಗೆ ನೆರವಾಗಿದೆ. ಮರುಬಳಕೆ ಆಧಾರಿತ ಪ್ಯಾಕೇಜಿಂಗ್‌ಗೆ ಒತ್ತು ನೀಡಿರುವ ಕಂಪನಿ, ಆಯ್ದ ಪಾನೀಯಗಳಲ್ಲಿ ಶೇ 100 ಮರುಬಳಕೆ ಪಿಇಟಿ ಬಾಟಲಿಗಳನ್ನು ಬಳಸುತ್ತಿದೆ. ಪೆಪ್ಸಿಕೊ ಇಂಡಿಯಾದ ಇಂಧನ ಬಳಕೆಯಲ್ಲಿ ಜೈವಿಕ ಇಂಧನದ ಪಾಲು ಶೇ 97ರಷ್ಟಿದೆ.

ಸ್ವಚ್ಛ ಸಾರಿಗೆಗಾಗಿ ಕೋಸಿ–ಪಟೌಡಿ ವಿದ್ಯುತ್ ವಾಹನ ಹಸಿರು ಮಾರ್ಗದಲ್ಲಿ 13 ವಿದ್ಯುತ್ ಟ್ರಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ವರ್ಷಕ್ಕೆ ಸುಮಾರು 6 ಲಕ್ಷ ಕಿಲೋಮೀಟರ್ ಸಂಚಾರ ನಡೆಸುತ್ತಿವೆ. ದೇಶದಾದ್ಯಂತ 800ಕ್ಕೂ ಹೆಚ್ಚು ವಾಹನಗಳನ್ನು ಪರಿವರ್ತಿಸಲಾಗಿದೆ. ಭಾರತದಲ್ಲಿ ಪೆಪ್ಸಿಕೊದ ಪಾನೀಯ ಶ್ರೇಣಿಯ ಶೇ 50ಕ್ಕೂ ಹೆಚ್ಚು ಈಗ ಕಡಿಮೆ ಅಥವಾ ಶೂನ್ಯ ಸಕ್ಕರೆ ಉತ್ಪನ್ನಗಳಾಗಿವೆ. ಶೇ 40 ಕಡಿಮೆ ಕೊಬ್ಬು ಹೊಂದಿರುವ ರೆಡ್ ರಾಕ್ ಡೆಲಿ ಉತ್ಪನ್ನಗಳು ಮತ್ತು ಸಿರಿಧಾನ್ಯ ಆಧಾರಿತ ಕುರ್‌ಕುರೆ ಜೋಳ ಪಫ್ಸ್‌ಗಳ ಮೂಲಕ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

RELATED ARTICLES
spot_img

Latest News