ಬೆಂಗಳೂರು,ಜೂ.10- ಆಡಳಿತಕ್ಕೆ ಮತ್ತೆ ಮೇಜರ್ ಸರ್ಜರಿ ನೀಡಿರುವ ರಾಜ್ಯ ಸರ್ಕಾರ ಆಯಾಕಟ್ಟಿನ ಹುದ್ದೆಯಲ್ಲಿದ್ದ ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ನಂತರ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದರು.
ಇದರ ಬೆನ್ನಲ್ಲೇ ಹಲವಾರು ದಿನಗಳಿಂದ ಆಯಾಕಟ್ಟಿನಲ್ಲಿದ್ದ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
*ಡಾ.ವೆಂಕಟೇಶ್.ಎಂ.ಡಿ- ಕಾರ್ಯದರ್ಶಿ, ಯೋಜನೆ ಕಾರ್ಯಕ್ರಮ ಅನುಷ್ಠಾನ ಮತ್ತು ಸಾಂಘಿಕ ಇಲಾಖೆ
*ಡಾ.ಸೆಲ್ವ ಮಣಿ- ನಿರ್ದೇಶಕರು, ಸ್ವಚ್ಛ ಭಾರತ ಮಿಷನ್
*ಅಂಜುಮ್ ಫರ್ವೇಜ್ -ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ
*ರಾಜೇಂದ್ರಕುಮಾರ್ ಕಟಾರಿಯ -ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ
*ಮೋಹನ್‌ರಾಜ್ – ಕಾರ್ಯದರ್ಶಿ, ಸಮಾಜಕಲ್ಯಾಣ ಇಲಾಖೆ
*ಡಾ.ಶಿವಮಣಿ.ಆರ್ – ವ್ಯವಸ್ಥಾಪಕ ನಿರ್ದೇಶಕರು ಕೆಎಸ್‌ಆರ್‌ಟಿಸಿ
*ಡಾ.ಮಹೇಶ್.ಎಂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಪೂರೈಕೆ ಮತ್ತು ಜಲಮಂಡಳಿ
*ಕುಷ್ಬು .ಜಿ ಚೌಧರಿ – ಆಯುಕ್ತರು, ಕೈಗಾರಿಕಾ ಅಭಿವೃದ್ಧಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರು
