ರಾಮೇಶ್ವರಂ , ಜ 21- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ದಕ್ಷಿಣ ತುದಿಯಾದ ಅರಿಚಲಮುನೈಗೆ ಭೇಟಿ ನೀಡಿ ಸಮುದ್ರ ತೀರದಲ್ಲಿ ಪುಷ್ಪ ನಮನ ಸಲ್ಲಿಸಿದರು. ಪ್ರಧಾನಿ ಅಲ್ಲಿ ಪ್ರಾಣಾಯಾಮ (ಉಸಿರಾಟದ ವ್ಯಾಯಾಮ) ಕೂಡ ಮಾಡಿದರು. ಸಮುದ್ರದ ನೀರನ್ನು ಬಳಸಿ ಪ್ರಾರ್ಥನೆಯನ್ನೂ ಸಲ್ಲಿಸಿದರು. ರಾತ್ರಿ ರಾಮೇಶ್ವರಂನಲ್ಲಿ ತಂಗಿದ್ದ ಮೋದಿ ಅವರು ರಾಮಸೇತು ನಿರ್ಮಿಸಿದ ಸ್ಥಳ ಎನ್ನಲಾದ ಅರಿಚಲಮುನೈಗೆ ತೆರಳಿದರು.
ಧರ್ಮದ ವಿಚಾರಗಳು ಪ್ರಚಾರದ ಸರಕುಗಳಲ್ಲ : ಡಿಕೆಶಿ ತಿರುಗೇಟು
ರಾಮಸೇತುವನ್ನು ಆಡಮ್ ಸೇತುವೆ ಎಂದೂ ಕರೆಯುತ್ತಾರೆ ಇದನ್ನು ರಾವಣನ ವಿರುದ್ಧ ಯುದ್ಧ ಮಾಡಲು ಲಂಕಾಕ್ಕೆ ಪ್ರಯಾಣಿಸಲು ವಾನರ ಸೇನೆಯ ಸಹಾಯದಿಂದ ಶ್ರೀರಾಮನು ನಿರ್ಮಿಸಿದನೆಂದು ಹೇಳಲಾಗುತ್ತದೆ.
ಕಡಲತೀರದಲ್ಲಿ ಪುಷ್ಪಾರ್ಚನೆ ಮಾಡಿ ನಂತರ ರಾಷ್ಟ್ರೀಯ ಲಾಂಛನದೊಂದಿಗೆ ಅಲ್ಲಿ ನಿರ್ಮಿಸಲಾದ ಸ್ತಂಭಕ್ಕೆ ಪುಷ್ಪ ನಮನ ಸಲ್ಲಿಸಿದರು.ನಿನ್ನೆ ಅವರು ಶ್ರೀರಂಗಂ ಮತ್ತು ರಾಮೇಶ್ವರಂನಲ್ಲಿರುವ ಶ್ರೀರಂಗನಾಥಸ್ವಾಮಿ ಮತ್ತು ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರು.