Homeರಾಜ್ಯಚಿಕ್ಕಮಗಳೂರು : ಕುಡಿದು ಕಿರಿಕ್ ಮಾಡುತ್ತಿದ್ದ ತಂದೆಯನ್ನು ಕೊಂದ ಮಗ

ಚಿಕ್ಕಮಗಳೂರು : ಕುಡಿದು ಕಿರಿಕ್ ಮಾಡುತ್ತಿದ್ದ ತಂದೆಯನ್ನು ಕೊಂದ ಮಗ

Chikkamagaluru: Son kills father

ಚಿಕ್ಕಮಗಳೂರು,ಜೂ.16-ಮದ್ಯ ಸೇವಿಸಿ ಬಂದು ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದ ತಂದೆಯ ಕಿರುಕುಳಕ್ಕೆ ಬೇಸತ್ತು, ಸ್ವಂತ ಮಗನೇ ತಂದೆಯನ್ನು ಮಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹನುಮನಹಳ್ಳಿಯಲ್ಲಿ ನಡೆದಿದೆ .

ಹನುಮನಹಳ್ಳಿ ಗ್ರಾಮದ ನಿವಾಸಿ ಕೆಂಚೇಗೌಡ (55 ) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಮಗ ಆರೋಪಿ ಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಕೆಂಚೇಗೌಡ ಎಂಬುವವರು ತೀವ್ರವಾಗಿ ಕುಡಿತಕ್ಕೆ ದಾಸರಾಗಿದ್ದರು. ಇತ್ತೀಚೆಗೆ ಅವರ ವರ್ತನೆ ಮಿತಿಮೀರಿ ಪತ್ನಿಯ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಿದ್ದರು. ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಮಗ ಚಿಕಿತ್ಸೆ ಕೊಡಿಸುವಂತಹ ಗಂಭೀರ ಪರಿಸ್ಥಿತಿ ಎದುರಾಗಿತ್ತು.

ಮನೆಯಲ್ಲಿ ಪ್ರತಿನಿತ್ಯ ತಂದೆ ನಡೆಸುತ್ತಿದ್ದ ದೌರ್ಜನ್ಯ ಹಾಗೂ ಅಮ ಅನುಭವಿಸುತ್ತಿದ್ದ ನರಕಯಾತನೆಯನ್ನು ಕಂಡು ಎರಡನೇ ಮಗ ಕುಮಾರ್‌ ತೀವ್ರವಾಗಿ ನೊಂದಿದ್ದನು.
ತಂದೆಯ ಕಿರುಕುಳಕ್ಕೆ ಶಾಶ್ವತ ಮುಕ್ತಿ ಹಾಡಲು ನಿರ್ಧರಿಸಿದ ಕುಮಾರ್‌, ಐದು ದಿನಗಳ ಹಿಂದೆ ಮನೆಯಲ್ಲಿದ್ದ ಮಣೆಯಿಂದ ತಂದೆಯ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾಗಿ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಗಂಭೀರವಾಗಿ ಗಾಯಗೊಂಡ ಕೆಂಚೇಗೌಡರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.ಕೊಲೆ ಮಾಡಿದ ನಂತರ ಕಾನೂನಿನಿಂದ ತಪ್ಪಿಸಿಕೊಳ್ಳಲು ಚಾಲಾಕಿ ಪುತ್ರ ಕುಮಾರ್‌ ಬೈಕ್‌ ನಿಂದ ಬಿದ್ದು ಗಾಯಗೊಂಡು ತಂದೆ ಮೃತಪಟ್ಟಿದ್ದಾರೆ ಎಂದು ನಾಟಕವಾಡಿದ್ದನು.

ಆರಂಭದಲ್ಲಿ ಕುಟುಂಬಸ್ಥರು ಸಹ ಗೊಂದಲಕ್ಕೀಡಾಗಿ ಗ್ರಾಮಾಂತರ ಪೊಲೀಸ್‌‍ ಠಾಣೆಗೆ ಬಂದು ಇದೊಂದು ಆಕಸಿಕ ಅಪಘಾತ ಎಂದು ದೂರು ನೀಡಿದ್ದರು.ದೂರು ದಾಖಲಾದ ಬೆನ್ನಲ್ಲೇ ತನಿಖೆ ಆರಂಭಿಸಿದ ಪೊಲೀಸರು ಶವಾಗಾರಕ್ಕೆ ತೆರಳಿ ಮೃತದೇಹವನ್ನು ಪರಿಶೀಲಿಸಿದಾಗ ದೊಡ್ಡ ತಿರುವು ಸಿಕ್ಕಿತು.

ಮೃತರ ತಲೆ ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಗಾಯಗಳಿರುವುದನ್ನು ಕಂಡು, ಇದು ಅಪಘಾತವಲ್ಲ ಬದಲಿಗೆ ಹಲ್ಲೆ ಇರಬಹುದೆಂದು ಪೊಲೀಸರು ಶಂಕಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.

ಸಂದೇಹದ ಆಧಾರದ ಮೇಲೆ ಮಗ ಕುಮಾರ್‌ನನ್ನು ಪೊಲೀಸರು ತಮದೇ ಶೈಲಿಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಆತನ ಮುಖವಾಡ ಕಳಚಿ ಬಿದ್ದಿದೆ. ತಾನೇ ತಂದೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡ ಆತನ ಕಳ್ಳಾಟ ಬಯಲಾಗಿದೆ. ಸದ್ಯ ಪೊಲೀಸರು ಈ ಪ್ರಕರಣವನ್ನು ಕೊಲೆ ಕೇಸ್‌‍ ಆಗಿ ಮಾರ್ಪಡಿಸಿದ್ದು, ಆರೋಪಿ ಕುಮಾರನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಒಟ್ಟಾರೆ ಕುಡಿತದ ಮಹಾಪಿಡುಗಿನಿಂದಾಗಿ ಮನೆಯ ಯಜಮಾನ ಸಶಾನ ಸೇರಿದ್ದರೆ, ಹೆತ್ತ ತಾಯಿಯ ರಕ್ಷಣೆಗೆ ನಿಲ್ಲಬೇಕಾಗಿದ್ದ ಮಗ ಕಂಬಿ ಎಣಿಸುವಂತಾಗಿದೆ. ತಂದೆಯ ದೌರ್ಜನ್ಯದಿಂದಾಗಿ ಆಸ್ಪತ್ರೆ ಸೇರಿದ್ದ ದುರ್ದೈವಿ ಹೆತ್ತಮ, ಈಗ ಗಂಡನೂ ಇಲ್ಲದೆ, ಮಗನೂ ಇಲ್ಲದೆ ಒಂಟಿಯಾಗಿ ಕಣ್ಣೀರು ಹಾಕುತ್ತಾ ಅನಾಥಳಾಗಿದ್ದು ಇಡೀ ಕುಟುಂಬವನ್ನೇ ಈ ಮದ್ಯದ ವ್ಯಸನ ಬಲಿಪಡೆದುಕೊಂಡಿರುವುದು ದುರಂತವೇ ಸರಿ.

RELATED ARTICLES

Latest News