ಹೈದ್ರಾಬಾದ್, ಜ.25- ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಅಂಗಳದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 147 ವರ್ಷದ ತಮ್ಮದೇ ತಂಡದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ನಾಯಕ ಬೆನ್‍ಸ್ಟೋಕ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಕೊಳ್ಳುವ ತೀರ್ಮಾನ ಕೈಗೊಂಡರೂ, ಪ್ಲೇಯಿಂಗ್ 11ನಲ್ಲಿ ಜಾಕ್ ಲೀಚ್, ಶೋಯಿಬ್ ಬಷೀರ್, ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ ಟಾಮ್ ಹಾಟ್ರ್ಲಿ ಮೂವರು ಸ್ಪಿನ್ನರ್‍ಗಳಿಗೆ ಸ್ಥಾನ ಕಲ್ಪಿಸಿದ್ದರೆ, ವೇಗದ ಬೌಲರ್ ರೂಪದಲ್ಲಿ ಮಾರ್ಕ್ ವುಡ್‍ಗೆ ಮಾತ್ರ ಸ್ಥಾನ ಕಲ್ಪಿಸಿದ್ದಾರೆ.
1877ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲೂ ಕೂಡ ಇಂಗ್ಲೆಂಡ್ ತಂಡವು ಕೇವಲ ಒಬ್ಬ ನುರಿತ ವೇಗಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಕಲ್ಪಿಸಿತ್ತು. 2015 ರಿಂದ ಟೆಸ್ಟ್ ಕ್ರಿಕೆಟ್‍ನಲ್ಲಿ ಇಂಗ್ಲೆಂಡ್ ತಂಡದ ವೇಗದ ಸಾರಥ್ಯ ವಹಿಸಿದ್ದ ಅನುಭವಿ ವೇಗಿ ಜೇಮ್ಸ್ ಅಂಡರ್ಸನ್ ಅವರನ್ನು ತಂಡದಿಂದ ಹೊರಗಿಟ್ಟು ಮಾರ್ಕ್‍ವುಡ್‍ಗೆ ಸ್ಥಾನ ಕಲ್ಪಿಸುವ ಮೂಲಕ ಅಚ್ಚರಿ ಮೂಡಿಸಿದೆ.
ಕ್ಷಿಪ್ರ ಬೆಳವಣಿಗೆಯಲ್ಲಿ ಮತ್ತೆ ಬಿಜೆಪಿಗೆ ವಾಪಸ್ಸಾದ ಜಗದೀಶ್ ಶೆಟ್ಟರ್
1902ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‍ನ ಸ್ಪಿನ್ನರ್‍ಗಳಾದ ಬರೂಂಡ್ ಮತ್ತು ಕೊಲಿನ್‍ಬೈಥ್ ಅವರು ಆರಂಭಿಕ ಬೌಲರ್‍ಗಳ ರೂಪದಲ್ಲಿ ಅಖಾಡಕ್ಕಿಳಿದಿದ್ದರೂ, ಮಾರ್ಕ್‍ವುಡ್ ಆರಂಭಿಕ ಸ್ಪೆಲ್ ಮಾಡುವ ಅವಕಾಶ ಇಲ್ಲದಿರುವುದರಿಂದ 122 ವರ್ಷಗಳ ನಂತರ ಸ್ಪಿನ್ನರ್‍ಗಳೇ ಇಂಗ್ಲೆಂಡ್ ತಂಡದ ಮುಂಚೂಣಿ ಬೌಲರ್‍ಗಳಾಗಲಿದ್ದಾರೆ.