Thursday, February 29, 2024
Homeಕ್ರೀಡಾ ಸುದ್ದಿಸಚಿನ್ ದಾಖಲೆ ಮುರಿದ ಜೋ ರೂಟ್

ಸಚಿನ್ ದಾಖಲೆ ಮುರಿದ ಜೋ ರೂಟ್

ಹೈದ್ರಾಬಾದ್, ಜ.25- ಟೀಮ್ ಇಂಡಿಯಾ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‍ನ ಮಾಜಿ ನಾಯಕ ಜೋ ರೂಟ್ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು , ಇಂಗ್ಲೆಂಡ್ ಆಗೂ ಭಾರತ ನಡುವಿನ ಟೆಸ್ಟ್ ಸರಣಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಹೈದರಾಬಾದ್‍ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಜೋರೂಟ್ ಬ್ಯಾಝ್‍ಬಾಲ್ ಕ್ರಿಕೆಟ್‍ಗೆ ಜೋತು ಬೀಳದೆ ತಮ್ಮ ನೈಜ ಆಟ ಪ್ರದರ್ಶಿಸಿ 60 ಎಸೆತಗಳಲ್ಲಿ 29 ರನ್ ಗಳಿಸಿ ರವೀಂದ್ರ ಜಡೇಜಾ ಬೌಲಿಂಗ್‍ನಲ್ಲಿ ಜಸ್ಪ್ರೀತ್ ಬುಮ್ರಾ ಪಡೆದ ಕ್ಯಾಚ್‍ಗೆ ವಿಕೆಟ್ ಒಪ್ಪಿಸಿದರು.

ಕಾರ್ಯಕರ್ತರ ಅಪೇಕ್ಷೆಯಂತೆ ಶೆಟ್ಟರ್ ಬಿಜೆಪಿ ಸೇರ್ಪಡೆ : ಯಡಿಯೂರಪ್ಪ

ಪಂದ್ಯದ 21ನೇ ಓವರ್‍ನಲ್ಲಿ ಜೋರೂಟ್ 10 ರನ್ ಗಳಿಸುತ್ತಿದ್ದಂತೆ ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ನಡುವಿನ ಟೆಸ್ಟ್ ಸರಣಿಯ ಗರಿಷ್ಠ ಸ್ಕೋರರ್ ಆಗಿ ಹೊಸ ಮೈಲುಗಲ್ಲು ಸ್ಥಾಪಿಸಿದರು. ಜೋ ರೂಟ್ ಈಗ 26 ಇನಿಂಗ್ಸ್‍ನಿಂದ 2554 ರನ್ ಗಳಿಸಿ ಟಾಪ್ 1 ಸ್ಥಾನವನ್ನು ಅಲಂಕರಿಸಿದ್ದರೆ, ಸಚಿನ್ ತೆಂಡೂಲ್ಕರ್ (2535 ರನ್), ಸುನೀಲ್ ಗವಾಸ್ಕರ್ (2348 ರನ್), ಸರ್ ಅಲಿಸ್ಟೈರ್ ಕುಕ್ (2431 ರನ್) ಹಾಗೂ ವಿರಾಟ್ ಕೊಹ್ಲಿ (1991 ರನ್) ನಂತರದ ಸ್ಥಾನದಲ್ಲಿ ನಿಂತಿದ್ದಾರೆ. ವಿರಾಟ್‍ಕೊಹ್ಲಿಗೂ 2000 ರನ್‍ಗಳಿಸುವ ಅವಕಾಶ ವಿತ್ತಾದರೂ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.

RELATED ARTICLES

Latest News