Thursday, May 9, 2024
Homeರಾಜ್ಯಕೇಂದ್ರ ಸರ್ಕಾರದ ಸಾಧನೆ ತಿಳಿಸಲು ಬಿಜೆಪಿಯಿಂದ ಗ್ರಾಮ ಚಲೋ

ಕೇಂದ್ರ ಸರ್ಕಾರದ ಸಾಧನೆ ತಿಳಿಸಲು ಬಿಜೆಪಿಯಿಂದ ಗ್ರಾಮ ಚಲೋ

ಬೆಂಗಳೂರು,ಜ.25- ಕೇಂದ್ರ ಸರ್ಕಾರದ ಸಾಧನೆಗಳನ್ನು ರಾಜ್ಯದ ಪ್ರತಿ ಮನೆಗೂ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಫೆ.8ರಿಂದ ಗ್ರಾಮ ಚಲೋ ಅಭಿಯಾನವನ್ನು ಆರಂಭಿಸಲಿದೆ. ರಾಜ್ಯದ 28 ಸಾವಿರ ಗ್ರಾಮಗಳಿಗೆ ಮತ್ತು 10 ಸಾವಿರ ನಗರ ಬೂತ್‍ಗಳ ಜೊತೆ ಕಾರ್ಯಕರ್ತರನ್ನು ನಿಯೋಜಿಸಿ 40 ಸಾವಿರ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಗಳನ್ನು ಗ್ರಾಮ ಚಲೋ ಅಭಿಯಾನದ ಮೂಲಕ ಮನೆ ಮನೆಗೆ ತಲುಪಿಸುವ ಅಭಿಯಾನವನ್ನು ಫೆ.8ರಿಂದ ಆರಂಭಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ದೇಶ ಮತ್ತು ಕರ್ನಾಟಕದಲ್ಲಿ ಗ್ರಾಮ ಚಲೋ ಎಂಬ ಅಭಿಯಾನ ಆರಂಭ ಮಾಡುತ್ತಿದ್ದೇವೆ. ಕಾರ್ಯಕರ್ತರನ್ನು ನಿಯೋಜಿಸಿ ಅವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಭೀಕರ ಅಪಘಾತ : ಮೂವರು ಮಕ್ಕಳು ಸೇರಿ ನಾಲ್ವರ ಸಾವು

ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ತಿಳಿಸುವ ಕಾರ್ಯಕ್ರಮ ಇದಾಗಿದೆ. ಗ್ರಾಮ ಚಲೋ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ ಚಾಲನೆ ನೀಡಲಿದ್ದು, ರಾಜ್ಯ ಸರ್ಕಾರ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. 28 ಕ್ಷೇತ್ರಗಳಲ್ಲಿ ಗೆಲ್ಲಲು ಇದೊಂದು ಅಡಿಪಾಯವಾಗುತ್ತದೆ ಎಂದರು. ಕರ್ನಾಟಕದ 28 ಸಾವಿರ ಕಂದಾಯ ಗ್ರಾಮಗಳು ಹಾಗೂ 19 ಸಾವಿರ ನಗರ ಬೂತ್‍ಗಳನ್ನು ಸಂಪರ್ಕಿಸಲಾಗುವುದು ಸುಮಾರು 40 ಸಾವಿರ ಕಾರ್ಯಕರ್ತರನ್ನು ಈ ಅಭಿಯಾನಕ್ಕೆ ಜೋಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಫೆ. 9, 10 ಹಾಗೂ 11ರಂದು ಮೂರು ದಿನಗಳ ಕಾಲ ಮೊದಲ ಹಂತದಲ್ಲಿ ಅಭಿಯಾನ ನಡೆಯುತ್ತದೆ. ಕಾರ್ಯಕರ್ತರು ತಾವು ನಿಯೋಜನೆಗೊಂಡ ಗ್ರಾಮವನ್ನು ಬಿಟ್ಟು ಬೇರೆ ಗ್ರಾಮಕ್ಕೆ ಹೋಗಿ 24 ಗಂಟೆ ಕಾಲ ವಾಸ್ತವ್ಯವಿದ್ದು, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಶಯಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗುತ್ತದೆ. ತಳಮಟ್ಟದಲ್ಲಿ ಪ್ರತಿಯೊಬ್ಬರನ್ನೂ ತಲುಪುವ ಜತೆಗೆ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಗ್ರಾಮ ಚಲೋ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನ ಕಾಂಗ್ರೆಸ್ಸಿಗರು ರಾಮಮಂದಿರಕ್ಕೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಮನ ಪ್ರತಿಷ್ಠಾನ ಆದ ಬಳಿಕ ರಾಮ ರಾಜ್ಯದ ಪರಿಕಲ್ಪನೆ ಆರಂಭವಾಗಿದೆ. ಸಿದ್ದರಾಮಯ್ಯರಲ್ಲಿ ಕೂಡ ಬದಲಾವಣೆ ಆರಂಭವಾಗಿದೆ.

ರಾಮನನ್ನು, ಹಿಂದೂಗಳನ್ನು ಬಿಟ್ಟು ಯಾರು ರಾಜಕೀಯ ಮಾಡಲು ಸಾಧ್ಯವಿಲ್ಲ. ಮಂದಿರ ಮುಖಾಂತರ ಭಾರತ ವಿಶ್ವಗುರು ಆಗಬೇಕು. ಚಿತ್ರದುರ್ಗದ ಹಿಂದುಳಿದ ಸಮಾವೇಶಕ್ಕೆ ನನಗೆ ಆಹ್ವಾನ ಕೊಟ್ಟಿಲ್ಲ. ಆಹ್ವಾನ ಕೊಟ್ಟರೆ ನಾನು ಹೋಗುತ್ತೇನೆ ಎಂದು ಹೇಳಿದರು. ಮಂಗಳೂರಿನ ಸಮಾವೇಶದಲ್ಲಿ ಮುಸ್ಲಿಂ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೇಡಿಕೆಗಳನ್ನು ಎಲ್ಲರೂ ಕೇಳುತ್ತಾರೆ. ಸರ್ಕಾರ ಯಾವ ರೀತಿ ಬಜೆಟ್ ಮಂಡಿಸುತ್ತದೆ ನೋಡೋಣ. ಕೆಜಿಹಳ್ಳಿ, ಡಿಜೆ ಹಳ್ಳಿ ಪ್ರಕರಣವನ್ನು ಇಡೀ ದೇಶ ನೋಡಿದೆ ಎಂದರು.

ಕತ್ತು ಕೊಯ್ದು ಪತ್ನಿಕೊಲೆ

ಉದ್ರಿಕ್ತ ಗುಂಪು ಹೇಗೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದೆ. ಯಾವ ರೀತಿಯಲ್ಲಿ ಧ್ವಂಸ ಮಾಡಿದರು, ದಲಿತ ಶಾಸಕನ ಮನೆ ಮೇಲೆ ದಾಳಿ ಮಾಡಿದ್ದು ಜಗಜಾಹ್ಹೀರವಾಗಿದೆ. ಸರ್ಕಾರಕ್ಕೆ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದ ಕಿಡಿಗೇಡಿಗಳು, ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು ಅಮಾಯಕರು ಎನಿಸಿದರೆ ಇದಕ್ಕಿಂತ ದುರಂತ ಯಾವುದು ಇಲ್ಲ ಎಂದು ಹೇಳಿದರು. ಬೆಂಕಿ ಹಾಕಿದವರ ಮೇಲೆ ಇನ್ನಷ್ಟು ಕ್ರಮ ಆಗಬೇಕು. ಕೋಮುವಾದದ ನೆಪ ಇಟ್ಟುಕೊಂಡು ಅಮಾಯಕರೆಂದು ಕರೆಯುವುದು ಸರಿಯಲ್ಲ ಎಂದರು.

RELATED ARTICLES

Latest News