Saturday, November 23, 2024
Homeರಾಷ್ಟ್ರೀಯ | Nationalಭಾರತೀಯ ವಿದ್ಯಾರ್ಥಿಗಳಿಗೆ ಫ್ರಾನ್ಸ್ ನೆರವು : ಮ್ಯಾಕ್ರನ್

ಭಾರತೀಯ ವಿದ್ಯಾರ್ಥಿಗಳಿಗೆ ಫ್ರಾನ್ಸ್ ನೆರವು : ಮ್ಯಾಕ್ರನ್

ನವದೆಹಲಿ,ಜ.26- ಭಾರತೀಯ ವಿದ್ಯಾರ್ಥಿಗಳು ಫ್ರಾನ್ಸ್‍ನಲ್ಲಿ ವಿದ್ಯಾಭ್ಯಾಸ ಮಾಡಲು ಎಲ್ಲ ರೀತಿಯ ಅಗತ್ಯಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಪ್ರಕಟಿಸಿದ್ದಾರೆ. ಈ ವರ್ಷದ ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಫ್ರಾನ್ಸ್‍ನಲ್ಲಿ ಓದುವುದನ್ನು ಖಚಿತಪಡಿಸಿಕೊಳ್ಳುವ ಕ್ರಮಗಳನ್ನು ಪ್ರಕಟಿಸಿದರು.

2030 ರ ವೇಳೆಗೆ 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಫ್ರಾನ್ಸ್ ಹೊಂದಿದೆ ಎಂದು ಅವರು ಹೇಳಿದರು. 2030 ರಲ್ಲಿ ಫ್ರಾನ್ಸ್‍ನಲ್ಲಿ 30,000 ಭಾರತೀಯ ವಿದ್ಯಾರ್ಥಿಗಳು. ಇದು ಬಹಳ ಮಹತ್ವಾಕಾಂಕ್ಷೆಯ ಗುರಿಯಾಗಿದೆ, ಆದರೆ ಅದನ್ನು ಮಾಡಲು ನಾನು ನಿರ್ಧರಿಸಿದ್ದೇನೆ ಎಂದು ಮ್ಯಾಕ್ರನ್ ಎಕ್ಸ್ ಮಾಡಿದ್ದಾರೆ. ಫ್ರಾನ್ಸ್ ಭಾರತೀಯ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ ಮ್ಯಾಕ್ರನ್, ಫ್ರೆಂಚ್ ಮಾತನಾಡದ ವಿದ್ಯಾರ್ಥಿಗಳಿಗೆ ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಅಂತರರಾಷ್ಟ್ರೀಯ ತರಗತಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಇಂಡಿಯಾ ಒಕ್ಕೂಟದ ಏಕತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರಾಹುಲ್

ನಾವು ಫ್ರೆಂಚ್ ಕಲಿಯಲು ಹೊಸ ಕೇಂದ್ರಗಳೊಂದಿಗೆ ಅಲೈಯನ್ಸ್ ಫ್ರಾಂಚೈಸ್‍ಗಳ ನೆಟ್‍ವರ್ಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಾವು ಅಂತರರಾಷ್ಟ್ರೀಯ ತರಗತಿಗಳನ್ನು ರಚಿಸುತ್ತಿದ್ದೇವೆ, ಇದು ಫ್ರೆಂಚ್ ಮಾತನಾಡದ ವಿದ್ಯಾರ್ಥಿಗಳಿಗೆ ನಮ್ಮ ವಿಶ್ವವಿದ್ಯಾಲಯಗಳಿಗೆ ಸೇರಲು ಅನುವು ಮಾಡಿಕೊಡುತ್ತದೆ ಎಂದು ಮ್ಯಾಕ್ರನ್ ಹೇಳಿದರು.

ಕೊನೆಯದಾಗಿ ಆದರೆ, ಫ್ರಾನ್ಸ್‍ನಲ್ಲಿ ಅಧ್ಯಯನ ಮಾಡಿದ ಯಾವುದೇ ಮಾಜಿ ಭಾರತೀಯ ವಿದ್ಯಾರ್ಥಿಗಳಿಗೆ ನಾವು ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತೇವೆ ಎಂದು ಫ್ರೆಂಚ್ ಅಧ್ಯಕ್ಷರು ತಿಳಿಸಿದ್ದಾರೆ.

RELATED ARTICLES

Latest News