Homeಇದೀಗ ಬಂದ ಸುದ್ದಿಕರ್ನಾಟಕ : ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಇಳಿಕೆ

ಕರ್ನಾಟಕ : ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಇಳಿಕೆ

ಬೆಂಗಳೂರು,ಜೂ.20- ರಾಜ್ಯದ ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಇಳಿಕೆಯಾಗಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಏಪ್ರಿಲ್‌ ತಿಂಗಳಿಗಿಂತ ಮೇ ತಿಂಗಳಿನಲ್ಲಿ ಒಂದೂವರೆ ಸಾವಿರ ಕೋಟಿ ರೂ.ಗೂ ಹೆಚ್ಚು ವಾಣಿಜ್ಯ ತೆರಿಗೆಗಳ ಸಂಗ್ರಹ ಕಡಿಮೆಯಾಗಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯ ಮಾಹಿತಿ ಪ್ರಕಾರ, ಮೇ ತಿಂಗಳಿನಲ್ಲಿ ಒಟ್ಟು 9,902.58 ಕೋಟಿ ರೂ. ಸಂಗ್ರಹವಾಗಿದೆ. ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ 1526.4 ಕೋಟಿಯಷ್ಟು ವಾಣಿಜ್ಯ ತೆರಿಗೆಗಳ ಸಂಗ್ರಹ ಕಡಿಮೆಯಾಗಿದೆ.

ಏಪ್ರಿಲ್‌ ತಿಂಗಳಿನಲ್ಲಿ 11,428.98 ಕೋಟಿ ರೂ.ನಷ್ಟು ಸಂಗ್ರಹವಾಗಿತ್ತು. ಮೇ ತಿಂಗಳಿನಲ್ಲಿ 7,228.77 ಕೋಟಿ ರೂ. ಸರಕು ಸೇವಾ ತೆರಿಗೆ, 2537.39 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 136.42 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಎರಡು ತಿಂಗಳಲ್ಲಿ 4,800.11 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ, 16,176.69 ಕೋಟಿ ರೂ. ಸರಕು ಸೇವಾ ತೆರಿಗೆ ಹಾಗೂ 354.96 ಕೋಟಿ ರೂ. ವೃತ್ತಿ ತೆರಿಗೆ ಸೇರಿದಂತೆ ಒಟ್ಟು 21,331.56 ಕೋಟಿ ರೂ. ಸಂಗ್ರಹವಾಗಿದೆ.

2025 -26ನೇ ಸಾಲಿನಲ್ಲಿ ಒಟ್ಟು 1,10,813.30 ಕೋಟಿ ರೂ.ನಷ್ಟು ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿತ್ತು. ಇದು 2024-25ನೇ ಸಾಲಿಗಿಂತ ಹೆಚ್ಚಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕಳೆದ ಆರ್ಥಿಕ ಸಾಲಿಗಿಂತಲೂ ಹೆಚ್ಚಿನ ವಾಣಿಜ್ಯ ತೆರಿಗೆಗಳ ಸಂಗ್ರಹವಾಗುವ ನಿರೀಕ್ಷೆಯಿದೆ.

RELATED ARTICLES

Latest News