Homeರಾಜ್ಯರಾಜ್ಯದ ಜನತೆಗೆ ದೀಪಾವಳಿ ಶಾಕ್ : ಬಸ್ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿದ 'ಗ್ಯಾರಂಟಿ'...

ರಾಜ್ಯದ ಜನತೆಗೆ ದೀಪಾವಳಿ ಶಾಕ್ : ಬಸ್ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿದ ‘ಗ್ಯಾರಂಟಿ’ ಸರ್ಕಾರ

ಬೆಂಗಳೂರು, ನ.4- ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನ ಸಾಮಾನ್ಯರಿಗೆ ಬಸ್‌‍ ಪ್ರಯಾಣ ದರ ಏರಿಕೆಯ ಹೊರೆ ಹೆಗಲೇರಿದೆ. ಕೆಎಸ್‌‍ಆರ್‌ಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳಲ್ಲಿ ಸರಾಸರಿ ಶೇ. 23ರಷ್ಟು, ಬಿಎಂಟಿಸಿಯಲ್ಲಿ ಕನಿಷ್ಠ ಶೇ.18ರಿಂದ ಗರಿಷ್ಠ ಶೇ.50 ರವೆಗೂ ಪ್ರಯಾಣ ದರ ಹೆಚ್ಚಳವಾಗಿದೆ.

6 ರೂ.ಯಿಂದ 68 ರೂ.ಗಳವರೆಗೂ ಬೇರೆ ಬೇರೆ ಮಾರ್ಗಗಳಲ್ಲಿ ಪ್ರತ್ಯೇಕ ರೀತಿಯ ಹೆಚ್ಚುವರಿ ದರವನ್ನು ನಿಗದಿ ಮಾಡಲಾಗಿದೆ.ಸಾರಿಗೆ ಸಚಿವ ಬೈರತಿ ಸುರೇಶ್‌ ಇಂದು ಸುದ್ದಿಗೋಷ್ಠಿಯಲ್ಲಿ ಪ್ರಯಾಣ ದರ ಪರಿಷ್ಕರಣೆಯನ್ನು ಪ್ರಕಟಿಸಿದರು. ಸಾರಿಗೆ ಸಂಸ್ಥೆಗಳು ಶೇ.38 ರಷ್ಟು ದರ ಏರಿಕೆಗೆ ಮನವಿ ಸಲ್ಲಿಸಿದ್ದವು.

ನಿವೃತ್ತ ಐಎಎಸ್‌‍ ಅಧಿಕಾರಿ ಅತುಲ್‌ ಕುಮಾರ್‌ ತಿವಾರಿ ನೇತೃತ್ವದ ಸಮಿತಿ ಅಧ್ಯಯನ ನಡೆಸಿ ಶೇ. 45 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಮನವಿ ಮಾಡಿತ್ತು. ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಸಂಸ್ಥೆಗಳು ಶೇಕಡಾವಾರು ಬದಲಿಗೆ, ನಿಲ್ದಾಣದ ಹಂತವಾರು ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಿವೆ ಎಂದು ತಿಳಿಸಿದರು.

ಕೆಎಸ್‌‍ಆರ್‌ಟಿಸಿ, ವಾಯುವ್ಯ, ಆಗ್ನೇಯ ಮತ್ತು ಸಾರಿಗೆ ಸಂಸ್ಥೆಗಳಲ್ಲಿ ಸರಾಸರಿ ಶೇ. 23 ರಷ್ಟು ಪ್ರಯಾಣ ದರ ಹೆಚ್ಚಳವಾಗಿದೆ. ಸಾಮಾನ್ಯ ಸಾರಿಗೆಯಲ್ಲಿ ಪ್ರಯಾಣಿಕರು ಗರಿಷ್ಠ 9 ರೂ.ಗಳ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ. ವೇಗದೂತ ಸಾರಿಗೆ ಬಸ್‌‍ಗಳಲ್ಲಿ 10 ಹಂತಗಳ ವರೆಗೆ ಪ್ರಯಾಣ ಮಾಡುತ್ತಿದ್ದು. ಕನಿಷ್ಠ 19 ರಿಂದ ಗರಿಷ್ಠ 68 ರೂ. ಗಳ ವರೆಗೂ ಪ್ರಯಾಣ ದರ ಹೆಚ್ಚಳವಾಗಿದೆ ಎಂದು ವಿವರಿಸಿದರು.

ಬೆಂಗಳೂರಿನ ಸಾಮಾನ್ಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಬಿಎಂಟಿಸಿಯಲ್ಲಿ ಕನಿಷ್ಠ ಶೇ. 33 ರಿಂದ ಗರಿಷ್ಠ ಶೇ. 50ರ ವರೆಗೂ ಬಸ್‌‍ ಪ್ರಯಾಣ ದರ ಹೆಚ್ಚಳವಾಗಿದೆ. 6 ರೂ.ಗಳಿಂದ 12 ರೂ.ಗಳವರೆಗೂ ಕೆಲವು ಮಾರ್ಗಗಳಲ್ಲಿ ಹಣ ನೀಡಬೇಕಾಗಿದೆ.2 ಕಿ.ಮೀ.ನ ಪ್ರಯಾಣಕ್ಕೆ 4 ರೂ.ನಷ್ಟು, 4 ಕಿ.ಮೀ.ಪ್ರಯಾಣಕ್ಕೆ 6 ರೂ. ಹೆಚ್ಚವರಿ ಹಣ ನೀಡಬೇಕೆಂದು ಸಚಿವರು ವಿವರಿಸಿದ್ದಾರೆ.

ಹವಾನಿಯಂತ್ರಿತ ವಜ್ರ ಬಸ್‌‍ಗಳ ಸೇವೆಯಲ್ಲಿ 6 ಕಿ.ಮೀ ಪ್ರಯಾಣಕ್ಕೆ 5 ರೂ., 6ರಿಂದ 18ಕಿ.ಮೀ.ವರೆಗಿನ ಪ್ರಯಾಣ ದರಕ್ಕೆ 10 ರೂ., ದೂರ ಪ್ರಯಾಣಕ್ಕೆ ಗರಿಷ್ಠ 15 ರೂ. ದರ ಹೆಚ್ಚಳವಾಗಿದೆ. ಶೇಕಡವಾರು 16 ರಿಂದ 37ರವರೆಗೂ ದರ ಹೆಚ್ಚಳವಾಗಿದೆ. ಸಾಮಾನ್ಯ ಜನರಿಗಿಂತಲೂ ಹವಾನಿತಂತ್ರಿತ ಬಸ್‌‍ಗಳಲ್ಲಿ ಪ್ರಯಾಣಿಸುವ ಶ್ರೀಮಂತರಿಗೆ ದರ ಏರಿಕೆಯ ಬಿಸಿ ಕಡಿಮೆಯಾಗಿದೆ. ರಾಜಹಂಸ, ಕ್ಲಬ್‌ಕ್ಲಾಸ್‌‍ ಸೇರಿದಂತೆ ಸ್ಲೀಪರ್‌ ಕೋಚ್‌ಗಳಲ್ಲಿ ಮಾರುಕಟ್ಟೆಯ ಬೇಡಿಕೆ ಆಧರಿಸಿ ಪ್ರಯಾಣ ದರ ನಿಗದಿ ಮಾಡಿರುವುದಾಗಿ ಸಚಿವರು ವಿವರಿಸಿದರು.

ಬಸ್‌‍ ಪ್ರಯಾಣ ದರ ಹೆಚ್ಚಳವನ್ನು ನಾನಾ ರೀತಿಯಲ್ಲಿ ಸಮರ್ಥಿಸಿಕೊಂಡ ಸಚಿವರು ರಾಜ್ಯ ಸರ್ಕಾರದ ಶಕ್ತಿ ಯೋಜನೆಗೂ ಬಸ್‌‍ ದರ ಯೋಜನೆಗೂ ಯಾವುದೇ ಸಂಬಂಧ ಇಲ್ಲ ಎಂದು ಒತ್ತಿ ಹೇಳಿದರು.ದರ ಹೆಚ್ಚಳದಿಂದ ಸಾರಿಗೆ ಸಂಸ್ಥೆಗಳು ಲಾಭದಲ್ಲಿ ಇರಲು ಸಾಧ್ಯವಿಲ್ಲ. ಬದಲಾಗಿ 9 ಸಾವಿರ ಕೋಟಿ ರೂ. ಭಾರೀ ನಷ್ಟದ ಪ್ರಮಾಣದಲ್ಲಿ ಕೊಂಚ ಕಡಿಮೆಯಾಗಬಹುದು ಎಂದು ಹೇಳಿದರು.

ಕೆಎಸ್‌ಆರ್‌ಟಿಸಿಯಿಂದ ಹೆಚ್ಚಳವಾದ ಸಾಮಾನ್ಯ ಪ್ರಯಾಣ ದರ

ಬೆಂಗಳೂರಿನಿಂದಪ್ರಸ್ತುತ ದರ (₹)ಪರಿಷ್ಕೃತ ದರ (₹)ಹೆಚ್ಚಳ (₹)ಶೇಕಡಾವಾರು (%)
ನೆಲಮಂಗಲ3544925.71
ಹೊಸಕೋಟೆ3544925.71
ದೊಡ್ಡಬಳ್ಳಾಪುರ3847925.71
ಆನೇಕಲ್38471123.68
ಮಾಗಡಿ46571123.91
ಮಾಲೂರು46571123.91

ವೇಗಧೂತ ಸಾರಿಗೆ ಬಸ್‌ಗಳ ದರ ಹೆಚ್ಚಳ

ಸ್ಥಳಪ್ರಸ್ತುತ ದರ (₹)ಪರಿಷ್ಕೃತ ದರ (₹)ಹೆಚ್ಚಳ (₹)ಶೇಕಡಾವಾರು (%)
ಕೋಲಾರ811001923.46
ತುಮಕೂರು811001923.46
ಮಂಡ್ಯ1101362623.64
ಮೈಸೂರು1601973723.13
ಹಾಸನ2192705123.29
ಚಿಕ್ಕಮಗಳೂರು2953636823.05

ಬಿಎಂಟಿಸಿ ಸಾಮಾನ್ಯ ಸಾರಿಗೆ

ಎಲ್ಲಿಂದ – ಎಲ್ಲಿಗೆಪ್ರಸ್ತುತ ದರ (₹)ಪರಿಷ್ಕೃತ ದರ (₹)ಹೆಚ್ಚಳ (₹)ಶೇಕಡಾವಾರು (%)
ಮೆಜೆಸ್ಟಿಕ್ – ಶಿವಾಜಿನಗರ1218650
ಮೆಜೆಸ್ಟಿಕ್ – ಯಶವಂತಪುರ1825738.89
ಮೆಜೆಸ್ಟಿಕ್ – ಬನಶಂಕರಿ23351252.17
ಮೆಜೆಸ್ಟಿಕ್ – ಅತ್ತಿಬೆಲೆ30421240
ಮೆಜೆಸ್ಟಿಕ್ – ವಿಜಯನಗರ1825738.89
ಮೆಜೆಸ್ಟಿಕ್ – ಕಾಡುಗೋಡು30401033.33
ಮಾರುಕಟ್ಟೆ – ನೆಲಮಂಗಲ30401033.33
ಮಾರುಕಟ್ಟೆ – ಹೊಸಕೋಟೆ30401033.33

ಹವಾನಿಯಂತ್ರಿತ ವಾಯು-ವಜ್ರ ಬಸ್‌ಗಳ ದರ ಹೆಚ್ಚಳ

ಎಲ್ಲಿಂದ – ಎಲ್ಲಿಗೆಪ್ರಸ್ತುತ ದರ (₹)ಪರಿಷ್ಕೃತ ದರ (₹)ಹೆಚ್ಚಳ (₹)ಶೇಕಡಾವಾರು (%)
ಸಿಲ್ಕ್ ಬೋರ್ಡ್ – ಹೆಬ್ಬಾಳ55651018.18
ಬನಶಂಕರಿ – ಐಟಿಪಿಎಲ್50601020
ಕೆ.ಆರ್. ಪುರಂ – ಸಿಲ್ಕ್ ಬೋರ್ಡ್40551537.50
ಸಿಲ್ಕ್ ಬೋರ್ಡ್ – ಕಾಡುಗೋಡಿ50601020
ಮೆಜೆಸ್ಟಿಕ್ – ಅತ್ತಿಬೆಲೆ60701016.67
RELATED ARTICLES

Latest News