ನವದೆಹಲಿ,ಜ.28- ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಅಟ್ಟಹಾಸ ಮುಂದುವರೆದಿದೆ ಸರಕು ಸಾಗಣೆ ಹಡಗಿನ ಮೇಲೆ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ಧವನ್ನು ವಿರೋಧಿಸಿ ಯೆಮನ್ ದೇಶದ ಹೌತಿ ಉಗ್ರರು ಕೆಂಪು ಸಮುದ್ರದ ಮಾರ್ಗವಾಗಿ ಸಂಚರಿಸುವ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಅರಬ್ಬಿ ಸಮುದ್ರದಿಂದ ಏಡನ್ ಕೊಲ್ಲಿ-ಕೆಂಪು ಸಮುದ್ರ-ಸುಯೆಜ್ ಕಾಲುವೆ ಮೂಲಕ ಮೆಡಿಟರೇನಿಯನ್ ಸಮುದ್ರ ತಲುಪಿ ಅಲ್ಲಿಂದ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ಸಂಪರ್ಕ ಸಾಸುವ ಹಡಗುಗಳು ಹಾಗೂ ಅದೇ ಮಾರ್ಗವಾಗಿ ವಾಪಸ್ ಬರುವ ಸರಕು ಸಾಗಣೆ ಹಡಗುಗಳನ್ನೇ ಗುರಿಯಾಗಿಸಿ ಹೌತಿ ಉಗ್ರರು ಕ್ಷಿಪಣಿ ಹಾಗೂ ಡ್ರೋಣ್ ದಾಳಿ ನಡೆಸುತ್ತಿದ್ದಾರೆ.
ಇದೀಗ ಈ ಉಗ್ರರು ಮರ್ಲಿನ್ ಲೌಂಡಾ ಎಂಬ ಹೆಸರಿನ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ದಾಳಿಯಿಂದಾಗಿ ಹಡಗಿನಲ್ಲಿ ಬೆಂಕಿ ಹೊತ್ತಿ ಉರಿದಿದೆ. ದಾಳಿಯ ನಂತರ ಹಡಗಿನಿಂದ ಬಂದ ತುರ್ತು ಕರೆಗೆ ತ್ವರಿತವಾಗಿ ಸ್ಪಂದಿಸಿದ ಭಾರತೀಯ ನೌಕಾಪಡೆಯು, ಬೆಂಕಿ ನಂದಿಸಿ 22 ಭಾರತೀಯ ಸಿಬ್ಬಂದಿಯನ್ನು ರಕ್ಷಣೆ ಮಾಡಿದೆ.
ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‍ಕುಮಾರ್ ರಾಜೀನಾಮೆ
ಶುಕ್ರವಾರ ರಾತ್ರಿ ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ನೌಕೆ ಒಗಿ ಮಾರ್ಲಿನ್ ಲುವಾಂಡಾ ಹಡಗಿನಿಂದ ಕರೆ ಬಂದ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ತನ್ನ ಕ್ಷಿಪಣಿ ವಿಧ್ವಂಸಕ ಐಎನ್‍ಎಸ್ ವಿಶಾಖಪಟ್ಟಣಂ ಅನ್ನು ದಾಳಿಗೊಳಗಾದ ನೌಕೆಗೆ ಸಹಾಯ ಮಾಡಲು ನಿಯೋಜಿಸಿತು. ಎಂವಿ ಮಾರ್ಲಿನ್ ಲುವಾಂಡಾ ಅವರ ಸಿಬ್ಬಂದಿಯೊಂದಿಗೆ ಆರು ಗಂಟೆಗಳ ಕಾಲ ಬೆಂಕಿ ನಂದಿಸುವ ಮೂಲಕ ನೌಕಾಪಡೆಯ ಅಗ್ನಿಶಾಮಕ ತಂಡವು ಯಶಸ್ವಿಯಾಗಿ ಬೆಂಕಿಯನ್ನು ಹತೋಟಿಗೆ ತಂದಿತು ಎಂದು ನೌಕಾಪಡೆ ವಕ್ತಾರ ಕಮಾಂರ್ಡ ವಿವೇಕ್ ಮಧ್ವಲ್ ಮಾಹಿತಿ ನೀಡಿದ್ದಾರೆ.
ಹೌತಿ ಉಗ್ರರು ಕಳೆದ ನವೆಂಬರ್‍ನಿಂದ ಕೆಂಪು ಸಮುದ್ರ ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲ್‍ನ ಮಿಲಿಟರಿ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಎಂವಿ ಮಾರ್ಲಿನ್ ಲುವಾಂಡಾದ ಸಂಕಷ್ಟದ ಕರೆಗೆ ಪ್ರತಿಕ್ರಿಯಿಸಿದ ಐಎನ್‍ಎಸ್ ವಿಶಾಖಪಟ್ಟಣಂ ನೆರವು ನೀಡಲು ಮುಂದಾಯಿತು. ಯುಎಸ್ ಮತ್ತು ಫ್ರೆಂಚ್ ಯುದ್ಧನೌಕೆ ಕೂಡ ಸಂಕಷ್ಟದ ಕರೆಗೆ ಸ್ಪಂದಿಸಿವೆ ಎಂದು ಮಧ್ವಲ್ ತಿಳಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಹರ್ಮೋಹನ್ ಧವನ್ ನಿಧನ
ಐಎನ್‍ಎಸ್ ವಿಶಾಖಪಟ್ಟಣಂನಿಂದ 10 ಭಾರತೀಯ ನೌಕಾ ಸಿಬ್ಬಂದಿಯನ್ನು ಒಳಗೊಂಡ ಅಗ್ನಿಶಾಮಕ ತಂಡವು ವಿಶೇಷ ಅಗ್ನಿಶಾಮಕ ಸಾಧನಗಳೊಂದಿಗೆ ನಿನ್ನೆ ಬೆಳಿಗ್ಗೆ ಎಂವಿ ಮಾರ್ಲಿನ್ ಲುವಾಂಡಾ ತಲುಪಿದೆ ಎಂದು ಹೇಳಿದ ಅವರು, ಮಾರ್ಲಿನ್ ಲುವಾಂಡಾದ ಸಿಬ್ಬಂದಿಯೊಂದಿಗೆ ಆರು ಗಂಟೆಗಳ ಕಾಲ ಬೆಂಕಿಯನ್ನು ನಂದಿಸುವ ಕಾರ್ಯ ಕೈಗೊಳ್ಳಲಾಯಿತು. ಭಾರತೀಯ ನೌಕಾಪಡೆಯ ಅಗ್ನಿಶಾಮಕ ತಂಡವು ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿತು ಎಂದು ಹೇಳಿದ್ದಾರೆ.