ಭೋಪಾಲï, ಜ 28 (ಪಿಟಿಐ) ಗಣರಾಜ್ಯೋತ್ಸವದಂದು ಮಧ್ಯಪ್ರದೇಶದ ರಾಜ್‍ಗಢ ಜಿಲ್ಲೆಯ ಗ್ರಾಮವೊಂದರಲ್ಲಿ ಸರಪಂಚ್‍ಗೆ ಜಾತಿಯ ಕಾರಣ ನೀಡಿ ರಾಷ್ಟ್ರಧ್ವಜಾರೋಹಣ ಮಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪಂಚಾಯತ್ ಇಲಾಖೆ ನೌಕರನ ಸೇವೆಯನ್ನು ವಜಾಗೊಳಿಸಿದ್ದಾರೆ.
ರಾಜ್‍ಗಢ್ ಜಿಲ್ಲೆಯ ಬಿಯೋರಾ ತಹಸಿಲ್ ವ್ಯಾಪ್ತಿಯ ತರೇನಾ ಗ್ರಾಮ ಪಂಚಾಯತ್‍ನಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು ಸರಪಂಚ್ ದಲಿತ ಎಂಬ ಕಾರಣಕ್ಕಾಗಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲೆ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಕ್ಷಯ್ ತೆಮ್ರಾವಾಲ್ ಅವರು ತರೇನಾ ಗ್ರಾಮ ಪಂಚಾಯಿತಿಯ ಉದ್ಯೋಗ ಸಹಾಯಕ ಲಖನ್ ಸಿಂಗ್ ಸೋಂಯಾ ಅವರು ಗಣರಾಜ್ಯೋತ್ಸವದಂದು ಗ್ರಾಮದ ಸರಪಂಚ್ ಬದಲಿಗೆ ಇನ್ನೊಬ್ಬ ವ್ಯಕ್ತಿಯಿಂದ ಧ್ವಜಾರೋಹಣ ಮಾಡಿಸಿದ್ದರು ಎಂದು ತಿಳಿಸಿದ್ದಾರೆ.
ಅವೈಜ್ಞಾನಿಕ ಕಾಂತರಾಜ್ ವರದಿ ಒಪ್ಪಲು ಸಾಧ್ಯವಿಲ್ಲ : ಆರ್.ಅಶೋಕ್
ಉದ್ಯೋಗ ಸಹಾಯಕ ಸೋಂಯಾ ಅವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಎಂದು ತೆಮ್ರಾವಾಲ್ ಹೇಳಿದ್ದಾರೆ. ಘಟನೆಯ ನಂತರ, ಸರಪಂಚ್ ಮಾನ್ ಸಿಂಗ್ ವರ್ಮಾ ಅವರು ಜನವರಿ 26 ರಂದು ತಮ್ಮ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ಯೋಗ ಸಹಾಯಕ ಲಖನ್ ಸಿಂಗ್ ಅವರು ಇನ್ನೊಬ್ಬ ವ್ಯಕ್ತಿಯಿಂದ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ವರ್ಮಾ ಆಗಿರುವುದರಿಂದ ಇದು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.ನಂತರ ಸರಪಂಚ್ ಬೈಯೋರಾ ಜನಪದ ಪಂಚಾಯತ್ ಸಿಇಒ ಈಶ್ವರ್ ವರ್ಮಾ ಅವರಿಗೆ ದೂರು ನೀಡಿದ್ದಾರೆ.
ಸರಪಂಚ್ ಬದಲಿಗೆ ಧ್ವಜಾರೋಹಣ ಮಾಡಿದ ನೌಕರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಪರಿಶಿಷ್ಟ ಜಾತಿಯಲ್ಲಿ ಹುಟ್ಟುವುದು ಅಪರಾಧವೇ ಎಂದು ಪ್ರಶ್ನಿಸಿದ್ದರು.
ಕೆರಗೋಡಿನಲ್ಲಿ ಭಗ್ವದ್‍ಧ್ವಜ ಹಾರಿಸಿದ್ದು ತಪ್ಪು : ಸಿಎಂ ಸಿದ್ದರಾಮಯ್ಯ
ಪಂಚಾಯತ್ ಭವನದಲ್ಲಿ ಧ್ವಜಾರೋಹಣ ಮಾಡುವ ಹಕ್ಕು ಸರಪಂಚ್‍ಗೆ ಇಲ್ಲವೇ? ಅಂತಹ ತಪ್ಪಿತಸ್ಥ ರೋಜಗರ್ ಸಹಾಯಕ ಲಖನ್ ಸಿಂಗ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಾನು ಮುಖ್ಯಮಂತ್ರಿಗಳನ್ನು ಕೋರುತ್ತೇನೆ ಎಂದು ಸಿಂಗ್ ಶನಿವಾರ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದರು.