Homeಜಿಲ್ಲಾ ಸುದ್ದಿಗಳುAI ಬಳಸಿ ಅಶ್ಲೀಲ ಫೋಟೋ ತೋರಿಸಿ ಬ್ಲಾಕ್‌ ಮೇಲ್‌ ಮಾಡಿದ ಕಿಡಿಗೇಡಿಗಳು, ಗೃಹಿಣಿ ಆತ್ಮಹತ್ಯೆಗೆ ಯತ್ನ

AI ಬಳಸಿ ಅಶ್ಲೀಲ ಫೋಟೋ ತೋರಿಸಿ ಬ್ಲಾಕ್‌ ಮೇಲ್‌ ಮಾಡಿದ ಕಿಡಿಗೇಡಿಗಳು, ಗೃಹಿಣಿ ಆತ್ಮಹತ್ಯೆಗೆ ಯತ್ನ

Miscreants used AI to blackmail a housewife with obscene photos, attempted suicide

ಚಿಕ್ಕಮಗಳೂರು,ಜೂ.25-ಎ ಐ ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಗಹಿಣಿಯೊಬ್ಬರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಅವರ ಮೊಬೈಲ್‌ಗೆ ಕಳುಹಿಸಿ, 30 ಲಕ್ಷ ಹಣ ನೀಡುವಂತೆ ಕಿಡಿಗೇಡಿಗಳು ಬ್ಲಾಕ್‌ಮೇಲ್‌ ಮಾಡಿದ್ದರಿಂದ ಮನನೊಂದ ಗಹಿಣಿ ಆತಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಒಂದು ವೇಳೆ ಹಣ ನೀಡದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಗಹಿಣಿ ಹಣ ನೀಡಲು ನಿರಾಕರಿಸಿದಾಗ, ವಿಕತ ಮನಸ್ಸಿನ ಕಿರಾತಕರು ಇನ್ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆಯನ್ನು ತೆರೆದು ಆ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಗಹಿಣಿಯ ಫೋಟೋ ಹಾಕಿ ಅತ್ಯಂತ ಅವಹೇಳನಕಾರಿ ಸಂದೇಶವನ್ನು ಬರೆದು ಅವರ ಮಾನಹಾನಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ಅಶ್ಲೀಲ ಫೋಟೋಗಳನ್ನು ನೋಡಿ ತೀವ್ರ ಮಾನಸಿಕ ಆಘಾತಕ್ಕೊಳಗಾದ ಗಹಿಣಿ ಆತಹತ್ಯೆಗೆ ಯತ್ನಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಇಡೀ ಕೃತ್ಯದ ಹಿಂದೆ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ಅಕ್ಷಯ್‌ ಮತ್ತು ಸಾಹುಲ್‌ ಹಮೀದ್‌ ಎಂಬ ಇಬ್ಬರು ಯುವಕರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಈ ಇಬ್ಬರು ಆರೋಪಿಗಳು ಈ ಹಿಂದೆ ಕೂಡ ಇದೇ ರೀತಿ ಬೇರೆ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಘಟನೆಯಿಂದ ಆಕ್ರೋಶಗೊಂಡ ಗಹಿಣಿಯ ಪತಿ, ಆರೋಪಿಗಳ ಮೊಬೈಲ್‌ ಸಂಖ್ಯೆ ಸಮೇತ ಲಕ್ಕವಳ್ಳಿ ಪೊಲೀಸ್‌‍ ಠಾಣೆಗೆ ಅಧಿಕತ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಫೋಟೋ ವೈರಲ್‌ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಕುಟುಂಬ ಒತ್ತಾಯಿಸಿದೆ. ಸದ್ಯ ಲಕ್ಕವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಇಬ್ಬರು ಕಿಡಿಗೇಡಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

RELATED ARTICLES

Latest News