Friday, November 22, 2024
Homeರಾಜ್ಯವರ್ಕ್ ಫ್ರಂ ಹೋಮ್ ಉದ್ಯೋಗದ ಆಮಿಷ : 158.94 ಕೋಟಿ ರೂ. ವಂಚನೆ

ವರ್ಕ್ ಫ್ರಂ ಹೋಮ್ ಉದ್ಯೋಗದ ಆಮಿಷ : 158.94 ಕೋಟಿ ರೂ. ವಂಚನೆ

ಬೆಂಗಳೂರು,ಜ.30- ಸಾರ್ವಜನಿಕರಿಗೆ ವಾಟ್ಸಪ್ ಮತ್ತು ಟೆಲಿಗ್ರಾಮ್ ಆ್ಯಪ್‍ಗಳ ಮುಖಾಂತರ ವರ್ಕ್ ಫ್ರಂ ಹೋಮ್ ಕೆಲಸ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣವನ್ನು ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ 11 ಮಂದಿ ಅಂತರಾಜ್ಯ ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 18ರಂದು ಬಿ.ಇ.ಎಲ್ ಲೇಔಟ್‍ನ ವಿದ್ಯಾರಣ್ಯಪುರದ ನಿವಾಸಿಯೊಬ್ಬರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿ, ಯಾರೋ ಅಪರಿಚಿತ ವ್ಯಕ್ತಿಗಳು ತಮ್ಮ ವಾಟ್ಸ್‍ಆಫ್ ನಂಬರ್‍ಗೆ ಚಾಟ್ ಮಾಡಿದ್ದು, ಚಾಟ್‍ನಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ನೀಡುತ್ತೇವೆಂದು ಮತ್ತು ದಿನಕ್ಕೆ 500 ರೂ.ಗಳಿಂದ 10,000 ರೂ. ಹಣವನ್ನು ಗಳಿಸಬಹುದು ಎಂದು ನಂಬಿಸಿ, ಅಮಿಷವೊಡ್ಡಿದ್ದಾರೆ

ಅವರ ಅಕೌಂಟ್‍ನಿಂದ ಹಂತ ಹಂತವಾಗಿ ಒಟ್ಟು 18.75 ಲಕ್ಷ ಹಣವನ್ನು ವಿವಿಧ 12 ಬ್ಯಾಂಕ್ ಖಾತೆಗಳಿಗೆ ಆನ್‍ಲೈನ್ ಮುಖಾಂತರ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು, ವಿವಿಧ ಬ್ಯಾಂಕ್‍ಗಳ ಅಕೌಂಟ್‍ಗಳಿಗೆ ಹಣವು ವರ್ಗಾವಣೆಯಾಗಿರುವ ಖಾತೆಗಳ ಖಾತೆದಾರರ ವಿವರಗಳನ್ನು ಸಂಪೂರ್ಣವಾಗಿ ಪಡೆದುಕೊಂಡು, ನಂತರ ತನಿಖೆ ಮುಂದುವರೆಸಿದ್ದರು.

ಬಲವಂತವಾಗಿ ಹನುಮ ಧ್ವಜ ಇಳಿಸಿದ್ದೇ ಕೆರಗೋಡು ಗ್ರಾಮಸ್ಥರ ಆಕ್ರೋಶದ ಜ್ವಾಲೆಗೆ ಕಾರಣ

ಈ ಜಾಲದಲ್ಲಿ ತೊಡಗಿಸಿಕೊಂಡಿದ್ದ ಒಟ್ಟು 11 ಮಂದಿ ಆರೋಪಿಗಳ ಪೈಕಿ ಬೆಂಗಳೂರು ನಗರದ ಇಬ್ಬರನ್ನು, ಹೈದ್ರಾಬಾದ್‍ನ ಮೂವರು ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿರುವ ನಾಲ್ಕು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

ಭಾರತದಾದ್ಯಂತ ವಿವಿಧ 28 ರಾಜ್ಯಗಳಿಂದ ಒಟ್ಟು 2,143 ಪ್ರಕರಣಗಳು ಎನ್.ಸಿ.ಆರ್.ಪಿ ಪೋರ್ಟಲ್‍ನಲ್ಲಿ ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿನ ವಿವಿಧ ಜಿಲ್ಲೆಗಳಿಂದ ಒಟ್ಟು 265 ಪ್ರಕರಣಗಳು ದಾಖಲಾಗಿದ್ದು, ನಗರದಲ್ಲಿ ವಿವಿಧ 14 ಪೊಲೀಸ್ ಠಾಣೆಗಳಿಂದ ಒಟ್ಟು 135 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಒಟ್ಟು 2,143 ಪ್ರಕರಣಗಳಲ್ಲಿ ವಂಚಿಸಿದ್ದ ಹಣದ ಒಟ್ಟು ಮೌಲ್ಯ 158.94 ಕೋಟಿ ರೂ.ಗಳು ಎಂಬುದನ್ನು ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾರ್ವಜನಿಕರಿಂದ ವಂಚಿಸಿದ್ದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗಳ ಪೈಕಿ ಈಗಾಗಲೇ 30 ಬ್ಯಾಂಕ್ ಖಾತೆಗಳನ್ನು 62.83 ಲಕ್ಷ ರೂ. ಫ್ರೀಜ್ ಮಾಡಲಾಗಿದೆ. ವಂಚಕರಿಂದ ಕೃತ್ಯಕ್ಕೆ ಬಳಸಿದ್ದ ವಿವಿಧ ಕಂಪನಿಯ 11 ಮೊಬೈಲ್, 2 ಲ್ಯಾಪ್‍ಟಾಪ್‍ಗಳು, 15 ಸಿಮ್ ಕಾರ್ಡ್‍ಗಳು ಮತ್ತು 3 ಬ್ಯಾಂಕ್ ಚೆಕ್ ಬುಕ್‍ಗಳು ಹಾಗೂ ಇತರೇ ದಾಖಲಾತಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.


30 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು,ಜ.30- ಜೀವನೋಪಾಯಕ್ಕಾಗಿ ಕೆಲಸ ನೀಡಿದ್ದ ಮನೆ ಮಾಲೀಕರ ಮನೆಯಲ್ಲೇ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಕೆಲಸದಾಕೆಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆಯಿಂದ 30 ಲಕ್ಷ ರೂ. ಬೆಲೆಬಾಳುವ 523 ಗ್ರಾಂ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆದುಕೊಂಡಿ ರುತ್ತಾರೆ. ಮಾಲೀಕರು ವಿದೇಶಕ್ಕೆ ತೆರಳಿದ್ದಾಗ ಮಾಲೀಕರ ಇಬ್ಬರು ಮಕ್ಕಳು ಹಾಗೂ ಕೆಲಸದಾಕೆ ಮನೆಯಲ್ಲಿದ್ದರು. ಆ ವೇಳೆ ಕಳ್ಳತನ ಮಾಡಲೆಂದೇ ಆಕೆ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕೇಬಲ್‍ಗಳನ್ನು ಕಟ್ ಮಾಡಿರುತ್ತಾಳೆ.

ಜ.25ರ ಮಧ್ಯರಾತ್ರಿ ಕೆಲಸದಾಕೆ ನಾಟಕವಾಡಿ ಯಾರೋ ಅಪರಿಚಿತರು ಮನೆಯ ರೂಂನಿಂದ ಚಿನ್ನದ ಒಡವೆಗಳನ್ನು ಒಂದು ಬ್ಯಾಗ್‍ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ತಾನು ಎಚ್ಚರಗೊಂಡು ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ನನಗೆ ಹೊಡೆದು ಹೋದರೆಂದು ಮಾಲೀಕರ ಮಕ್ಕಳಿಗೆ ತಿಳಿಸಿ ನಂಬಿಸಿದ್ದಳು.
ಮಾರನೆಯ ದಿನ ಮನೆಯ ಮಾಲೀಕರ ಮಗನು ಮನೆಯ ಕೆಲಸದಾಕೆಯು ತಿಳಿಸಿದಂತೆ, ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೆಲಸದಾಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಜ.25ರಂದು ರೂಮ್‍ನ ಬೀಗವನ್ನು ತೆರೆದು ಕಬೋರ್ಡ್‍ನ ಬೀಗವನ್ನು ಹೊಡೆದು, ಕಬೋರ್ಡ್ ಮತ್ತು ಲಾಕರ್‍ನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ತಾನೇ ಕಳ್ಳತನ ಮಾಡಿರುವುದಾಗಿ ತನಿಖಾಧಿಕಾರಿಗಳ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾಳೆ. ಆಕೆಯ ಹೇಳಕೆ ಮೇರೆಗೆ ಸುುಮಾರು 30 ಲಕ್ಷ ರೂ. ಬೆಲೆಬಾಳುವ 523 ಗ್ರಾಂ ಚಿನ್ನದ ವಿವಿಧ ಮಾದರಿಯ ವಡವೆಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

BIG NEWS : ನಿಷೇಧಿತ ಪಿಎಫ್‍ಐನ 15 ಮಂದಿಗೆ ಮರಣದಂಡನೆ


ಕಬೋರ್ಡ್‍ನಲ್ಲಿಟ್ಟಿದ್ದ ಚಿನ್ನ ಕದ್ದಿದ್ದ ಕಳ್ಳನ ಸೆರೆ
ಬೆಂಗಳೂರು, ಜ.30- ಮನೆಗೆ ನುಗ್ಗಿ ಕಬೋರ್ಡ್‍ನಲ್ಲಿಟ್ಟಿದ್ದ 494 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ವ್ಯಕ್ತಿಯನ್ನು ವಿಜಯನಗರ ಠಾಣೆ ಪೊಲೀಸರು ಬಂಸಿದ್ದಾರೆ. ಠಾಣಾ ವ್ಯಾಪ್ತಿಯ ರೆಮ್ಕೋ ಲೇಔಟ್‍ನಲ್ಲಿ ಮನೆಯ ಮುಂಬಾಗಿಲು ತೆಗೆದಿದ್ದಾಗ ಅಪರಿಚಿತ ವ್ಯಕ್ತಿ ಏಕಾಏಕಿ ಮನೆಗೆ ನುಗ್ಗಿ ಕಬೋರ್ಡ್‍ನಲ್ಲಿಟ್ಟಿದ್ದ ಆಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ.

ಈ ಸಂಬಂಧ ಮನೆಯ ಮಾಲೀಕರು ವಿಜಯನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆಯ ಸುತ್ತಮುತ್ತ ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಕಳ್ಳನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 25.50 ಲಕ್ಷ ಮೌಲ್ಯದ 430.5 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಇನ್ಸ್‍ಪೆಕ್ಟರ್ ಹೇಮಂತ್‍ಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News