ಬೆಂಗಳೂರು, ಜೂ. 28- ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಿಸಲು ಪ್ರತಿಯೊಬ್ಬರೂ ಸಂಕಲ್ಪ ಬದ್ಧರಾಗಿ ತೊಡಗಿಸಿಕೊಳ್ಳಬೇಕು ಎಂದು ಉಪ ರಾಷ್ಟಪತಿ ಸಿ.ಪಿ. ರಾಧಾಕೃಷ್ಣನ್ ಕರೆ ನೀಡಿದ್ದಾರೆ.
ರಾಜೀವ್ ಗಾಂಧಿ ವಿಜ್ಞಾನ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ನಶಾ ಮುಕ್ತ ಭಾರತ ಅಭಿಯಾನ ಮತ್ತು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವಸ್ತುಗಳು ಒಬ್ಬ ವ್ಯಕ್ತಿಯ ಜೀವನವನ್ನಷ್ಟೇ ನಾಶ ಮಾಡುವುದಿಲ್ಲ, ಬದಲಾಗಿ ದೇಶದ ಉತ್ಪಾದನಾ ಸಾಮಾರ್ಥ್ಯವನ್ನು ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕುಗ್ಗಿಸುತ್ತದೆ. ಇದರಿಂದ ಸಮಾಜ, ಕುಟುಂಬ ಮತ್ತು ದೇಶಕ್ಕೆ ಭಾರೀ ನಷ್ಟವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯನ್ನು ಆತನ ಆತಸಾಕ್ಷಿ ನಿಯಂತ್ರಿಸಬೇಕು. ಮಾದಕ ವಸ್ತು ಸೇರಿದಂತೆ ಬಾಹ್ಯವಾದ ಯಾವುದೇ ವಿಷಯಗಳು ನಿಯಂತ್ರಿಸಬಾರದು ಎಂದು ಸಲಹೆ ನೀಡಿದರು. ಮಾದಕ ವ್ಯಸನಿಗಳಾಗದೇ ಇರುವುದು ಇಂದಿನ ಅಗತ್ಯವಾಗಿದೆ. ಶಾಲಾ, ಕಾಲೇಜುಗಳ ತರಗತಿಗಳಿಂದಲೇ ಜಾಗೃತಿ ಆರಂಭವಾಗಬೇಕು. ನಮ ಮನೆ, ಶಾಲೆ-ಕಾಲೇಜು ಆವರಣ, ನಗರ, ಜಿಲ್ಲೆ, ರಾಜ್ಯ ತನೂಲಕ ಭಾರತ ನಶಾ ಮುಕ್ತಗೊಳ್ಳಬೇಕು. ಇದರೊಂದಿಗೆ ವಿಶ್ವವನ್ನೇ ಮಾದಕ ವ್ಯಸನ ಮುಕ್ತಗೊಳಿಸುವ ಗುರಿಯೊಂದಿಗೆ ಸಾಕ್ಷ್ಯಾಧಾರಿತ ಪರಿಹಾರ ದೊರಕಿಸಲು ಪ್ರತಿಯೊಬ್ಬರೂ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.
ದೆಹಲಿಯಲ್ಲಿ ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ಪ್ರಗತಿಯಾಗಿದೆ. ಮೂರು ವಿಶ್ವವಿದ್ಯಾಲಯಗಳು ಮಾದಕ ವ್ಯಸನದಿಂದ ಮುಕ್ತಗೊಂಡಿವೆ. ಕರ್ನಾಟಕವನ್ನು ವ್ಯಸನ ಮುಕ್ತಗೊಳಿಸುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಅದಕ್ಕನುಗುಣವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಮೊದಲು ಪ್ರತಿಯೊಬ್ಬರೂ ವ್ಯಕ್ತಿಗತವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ನಂತರ ನೆರಹೊರೆಯಲ್ಲೂ ಜಾಗೃತಿ ಮೂಡಿಸಬೇಕು. ಮಾದಕ ವಸ್ತುವಿನ ಹಾವಳಿ ವಿರುದ್ಧವಾಗಿ ಭೌಗೋಳಿಕತೆ, ಲಿಂಗತಾರತಮ್ಯ, ವಯಸ್ಸಿನ ಭೇದ ಹಾಗೂ ಸಾಮಾಜಿಕ ಸ್ಥಾನಮಾನದ ಹೊರತಾಗಿಯೂ ಸಂಕಲ್ಪ ತೊಡಬೇಕಿದೆ. ಸಂಘಟಾನಾತಕ ಪ್ರಯತ್ನದಿಂದ ಮಾತ್ರ ವ್ಯಸನ ಮುಕ್ತ ಭಾರತ ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು.
ರಾಜೀವ್ ಗಾಂಧಿ ವಿಶ್ವವಿದ್ಯಾಲಯ ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಇಲ್ಲಿ ವ್ಯಾಸಂಗ ಮಾಡಿದ ವೈದ್ಯಕೀಯ ಪದವೀಧರರು ವಿಶ್ವಾದಾದ್ಯಂತ ಸೇವೆ ಸಲ್ಲಿಸುತ್ತಿರುವುದು ಹೆಮೆಯ ವಿಚಾರ ಎಂದರು.
ಬೆಂಗಳೂರಿನ ಹವಾಮಾನವನ್ನು ದೇವರೇ ನಿಯಂತ್ರಿಸುತ್ತಾರೆ. ಇಲ್ಲಿ ಜನ ವಾಸಕ್ಕೆ ಯೋಗ್ಯವಾದ ಪರಿಸರ ಇದೆ ಎಂದು ಉಪ ರಾಷ್ಟ್ರಪತಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಾದಕ ದ್ರವ್ಯನಿಯಂತ್ರಣ ಸಂಸ್ಥೆಯ ಪ್ರಾದೇಶಿಕ ಆಯುಕ್ತ ಸಚಿನ್ ಗೋರ್ಪಡೆ, ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣಗಳ ಬಗ್ಗೆ ಉಪನ್ಯಾಸ ನೀಡಿದರು. ಇದೇ ವೇಳೆ ಉಪ ರಾಷ್ಟ್ರಪತಿಯವರು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಮಾದಕವಸ್ತು ತಡೆ ಕುರಿತಂತೆ ಇದೇ ವೇಳೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
