ನವದೆಹಲಿ,ಫೆ.2- ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷದ ಮೈತ್ರಿ ಸ್ಥಿತಿ ಭಾರೀ ಹದಗೆಡುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‍ಕುಮಾರ್ ಪಕ್ಷ ಬದಲಿಸಿದ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈತ್ರಿಕೂಟದಲ್ಲಿ ಮುಂದುವರಿಯುವ ಬಗ್ಗೆ ಅನುಮಾನ ಮೂಡಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ ಇಂಡಿಯಾ ಮೈತ್ರಿಯಿಂದ ಬೇರ್ಪಡಬಹುದು ಎಂಬ ಸುದ್ದಿ ಇದೆ. ಈ ಬಗ್ಗೆ ಎಡಪಕ್ಷಗಳು ಹೊಸ ಹಕ್ಕು ಮಂಡಿಸಿವೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಬಂಗಾಳವನ್ನು ತಲುಪಿದೆ ಎಂಬುವುದು ಉಲ್ಲೇಖನೀಯ. ನಿನ್ನೆ ಎಡಪಂಥೀಯ ಕಾರ್ಯಕರ್ತರು ಮತ್ತು ಬೆಂಬಲಿಗರ ದೊಡ್ಡ ಗುಂಪು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸೇರಿದೆ.
ಇದೇ ಸಂದರ್ಭದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಪಕ್ಷದ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಮತ್ತು ಇತರ ನಾಯಕರು ರಘುನಾಥಗಂಜ್‍ನಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಆರ್‍ಎಸ್‍ಎಸ್-ಬಿಜೆಪಿ ಮತ್ತು ಅನ್ಯಾಯದ ವಿರುದ್ಧದ ಹೋರಾಟದ ಭಾಗವಾಗಲು ಎಡಪಕ್ಷಗಳು ಕಾಂಗ್ರೆಸ್ ಯಾತ್ರೆಗೆ ಸೇರ್ಪಡೆಗೊಂಡಿವೆ. ನಾವು ಆರ್‍ಎಸ್‍ಎಸ್-ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಸಲೀಂ ಹೇಳಿದ್ದಾರೆ.
BREAKING : ನಟಿ ಪೂನಂ ಪಾಂಡೆ ಇನ್ನಿಲ್ಲ..!
ಆರೆಎಸ್‍ಎಸ್-ಬಿಜೆಪಿಗೆ ಪೈಪೋಟಿ ನೀಡಲು ರಾಹುಲ್ ಗಾಂಧಿ ಕೂಡ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಹೊರಟಿದ್ದಾರೆ. ನಾವು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಡುತ್ತಿದ್ದೇವೆ. ಈ ಯಾತ್ರೆಗೆ ನಮ್ಮ ಒಗ್ಗಟ್ಟು ಪ್ರದರ್ಶಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಸಲೀಂ ಅವರು ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಸಭೆ ನಡೆಸಿದರು.
ಟಿಎಂಸಿ ಇಂಡಿಯಾ ಮೈತ್ರಿಯಿಂದ ಬೇರ್ಪಡಲು ಉತ್ಸುಕತೆ ತೋರುತ್ತಿದೆ. ಮೊದಲಿನಿಂದಲೂ ಅನೇಕ ಜನರು ಈ ಮೈತ್ರಿಗೆ ಸೇರಿದ್ದಾರೆ. ಆದರೆ ಬಿಜೆಪಿ ವಿರುದ್ಧದ ಹೋರಾಟದ ಭಾಗವಾಗಿ ಯಾರು ಉಳಿಯುತ್ತಾರೆ ಮತ್ತು ಯಾರು ದೂರವಾಗುತ್ತಾರೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಮಮತಾ ಬ್ಯಾನರ್ಜಿ ಈಗ ಅದರಿಂದ ದೂರವಿರಲು ಬಯಸಿದ್ದಾರೆ ಮತ್ತು ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಸಲೀಂ ತಿಳಿಸಿದ್ದಾರೆ.