Friday, December 13, 2024
Homeರಾಷ್ಟ್ರೀಯ | Nationalನಷ್ಟಕ್ಕೆ ಸಮನಾದ ಹಣವನ್ನು ಠೇವಣಿ ಇಟ್ಟ ನಂತರವೇ ಜಾಮೀನು : ಕಾನೂನು ಆಯೋಗ ಶಿಫಾರಸು

ನಷ್ಟಕ್ಕೆ ಸಮನಾದ ಹಣವನ್ನು ಠೇವಣಿ ಇಟ್ಟ ನಂತರವೇ ಜಾಮೀನು : ಕಾನೂನು ಆಯೋಗ ಶಿಫಾರಸು

ನವದೆಹಲಿ, ಫೆ.2 (ಪಿಟಿಐ) – ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವ ವ್ಯಕ್ತಿಗಳು ಅವರಿಂದ ಉಂಟಾದ ನಷ್ಟಕ್ಕೆ ಸಮನಾದ ಹಣವನ್ನು ಠೇವಣಿ ಮಾಡಿದ ನಂತರವೇ ಜಾಮೀನು ಮಂಜೂರು ಮಾಡುವಂತೆ ಕಾನೂನು ಆಯೋಗ ಶಿಫಾರಸು ಮಾಡುವ ಸಾಧ್ಯತೆ ಇದೆ. ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯಿದೆಯಲ್ಲಿ ಬದಲಾವಣೆಗೆ ಶಿಫಾರಸು ಮಾಡಿರುವ ಕಾನೂನು ಸಮಿತಿಯು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವಲ್ಲಿ ತೊಡಗಿರುವವರಿಗೆ ಕಠಿಣ ಜಾಮೀನು ನಿಬಂಧನೆಗಳನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವಲ್ಲಿ ತೊಡಗಿರುವ ಜನರು ನಾಶಪಡಿಸಿದ ಆಸ್ತಿಯ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಪಾವತಿಸಿದರೆ, ಅದು ಇತರರನ್ನು ಅಂತಹ ಕ್ರಮಗಳಿಗೆ ಆಶ್ರಯಿಸದಂತೆ ತಡೆಯುತ್ತದೆ ಎಂಬ ಭಾವನೆ ಇತ್ತು.

ವಾಹನ ತಪಾಸಣೆ ವೇಳೆ ಸಿಕ್ತು 5.12 ಕೋಟಿ ರೂ.ನಗದು..!

2015ರಲ್ಲಿ ಸರ್ಕಾರ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿದ್ದರೂ ಮಸೂದೆ ತರಲು ಸಾಧ್ಯವಾಗಿರಲಿಲ್ಲ. ಸುಪ್ರೀಂ ಕೋರ್ಟ್‍ನ ಕೆಲವು ನಿರ್ದೇಶನಗಳು ಮತ್ತು ಕೆಲವು ಹೈಕೋರ್ಟ್‍ಗಳ ತೀರ್ಪುಗಳ ಹಿನ್ನೆಲೆಯಲ್ಲಿ ಆಯೋಗವು ಈ ವಿಷಯದ ಕುರಿತು ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಕಾನೂನು ಸಮಿತಿಯು ಕ್ರಿಮಿನಲ್ ಮಾನನಷ್ಟ ಕಾನೂನಿಗೆ ಸಂಬಂಧಿಸಿದ ವರದಿಯನ್ನು ಸಿದ್ಧಪಡಿಸುತ್ತಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಶಿಫಾರಸು ಮಾಡುವುದಿಲ್ಲ ಎಂದು ತಿಳಿದುಬಂದಿದೆ.

RELATED ARTICLES

Latest News