Friday, May 3, 2024
Homeರಾಜ್ಯದಿಢೀರನೇ ಬೆಲೆ ಏರಿಕೆ, ಮದ್ಯ ಪ್ರಿಯರ ಜೇಬಿಗೆ ಕತ್ತರಿ

ದಿಢೀರನೇ ಬೆಲೆ ಏರಿಕೆ, ಮದ್ಯ ಪ್ರಿಯರ ಜೇಬಿಗೆ ಕತ್ತರಿ

ಬೆಂಗಳೂರು, ಫೆ. 2- ದಿಢೀರನೆ ಮತ್ತೆ ಬೆಲೆ ಏರಿಸಿ ಮದ್ಯ ಪ್ರಿಯರ ಜೇಬಿಗೆ ರಾಜ್ಯ ಸರ್ಕಾರ ಕತ್ತರಿಹಾಕಿದೆ.
ಅಬಕಾರಿ ಇಲಾಖೆ ಕಳೆದ ರಾತ್ರಿ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಪ್ರಸ್ತುತ ಇದ್ದದ್ದ ಬೆಲೆಗೆ ಶೇ 10 ರಷ್ಟು ಹೆಚ್ಚಿಸಿದೆ. ಇದರಿಂದಾಗಿ, ಬಿಯರ್ ಬಾಟಲ್ ಬೆಲೆ 10 ರಿಂದ 15 ರೂಪಾಯಿ ಹೆಚ್ಚಾಗಿದೆ. ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.

ಇದರೊಂದಿಗೆ, ಕಳೆದ 7 ತಿಂಗಳ ಅವಧಿಯಲ್ಲಿ 3ನೇ ಬಾರಿಗೆ ಬಿಯರ್ ಬೆಲೆ ಏರಿಕೆಯಾದಂತಾಗಿದೆ ಆಗಿನಿಂದ ಒಟ್ಟು 40 ರೂಹೆಚ್ಚಗಿದೆ. ಸರ್ಕಾರ ಶೇ 20ರಷ್ಟು ಸುಂಕ ಹೆಚ್ಚಿಸಿದರೆ ಉತ್ಪಾದನಾ ಕಂಪನಿ ನಿರ್ವಹಣಾ ಹಾಗು ಇತರ ಕಾರಣ ನೀಡಿ ಪ್ರತಿ ಬಾಟಲ್ ಮೇಲೆ 10 ರೂ. ಏರಿಸಿತ್ತು. ಇದೀಗ ಮತ್ತೆ ಬಿಯರ್ ದರ ಹೆಚ್ಚಳ ಮಾಡಿದೆ. ಗ್ಯಾರೆಂಟಿ ಯೋಜನೆಗೆ ಹಣ ಸರಿ್ದೂಗಿಸಲು ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ಆದಾಯ ಸಂಗ್ರಹಕ್ಕೆ ಗುರಿ ನೀಡಿದೆ ಇದರಿಂದಾಗಿ ಪದೆಪದೇ ಮದ್ಯದ ದರ ಏರಿಸಲಾಗಿದೆ ಇಸರಿಂದ ವ್ಯಾಪಾರಕ್ಕೂ ಹೊಡೆತ ಬೀಳುತ್ತಿದೆ ಎಂದು ಮಾರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ಮಗನಿಂದಲೇ ತಾಯಿ ಕೊಲೆ

ಮೂಲಗಳ ಪ್ರಕಾರ 10 ತಿಂಗಳಲ್ಲಿ 27 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇನ್ನೆರಡು ತಿಂಗಳಿನಲ್ಲಿ ಗುರಿ ತಲುಪಲು 9 ಸಾವಿರ ಕೋಟಿ ಸಂಗ್ರಹವಾಗಬೇಕಿದೆ. ಬಿಯರ್ ಮಾರಾಟದಿಂದ ಸರ್ಕಾರಕ್ಕೆ ಬರುವ ಆದಾಯ ಬಹಳ ಕಡಿಮೆ. ಹೀಗಾಗಿ ದರ ಏರಿಕೆ ಮಾಡಿ ಖಜಾನೆ ತುಂಬಿಸಿಕೊಳ್ಳಲು ಚಿಂತನೆ ಮಾಡಿದೆ. ಈ ಮೂಲಕ ಮದ್ಯ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್‍ಗಳ ಮದ್ಯದ ದರವನ್ನು ಕಳೆದ ತಿಂಗಳಷ್ಟೇ ಮದ್ಯ ಮಾರಾಟ ಕಂಪನಿಗಳು ಹೆಚ್ಚಳ ಮಾಡಿದ್ದವು.

RELATED ARTICLES

Latest News