Thursday, February 29, 2024
Homeಬೆಂಗಳೂರುಬೆಂಗಳೂರು : ಮಗನಿಂದಲೇ ತಾಯಿ ಕೊಲೆ

ಬೆಂಗಳೂರು : ಮಗನಿಂದಲೇ ತಾಯಿ ಕೊಲೆ

ಬೆಂಗಳೂರು,ಫೆ.2- ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಜಸ್ಟ್ ಭೀಮಯ್ಯ ಲೇಔಟ್ ನಿವಾಸಿ ನೇತ್ರ(40) ಮಗನಿಂದಲೇ ಸಾವನ್ನಪ್ಪಿದ ತಾಯಿ.

ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಡಿಪ್ಲೊಮೊ ವ್ಯಾಸಂಗ ಮಾಡುತ್ತಿರುವ 17 ವರ್ಷದ ಮಗ ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಕಾಲೇಜಿಗೆ ಹೊರಡುವ ಭರದಲ್ಲಿ ತಿಂಡಿ ಮಾಡಿಕೊಡಲು ತಾಯಿ ತಡ ಮಾಡಿದ್ದಕ್ಕೆ ಕೋಪಗೊಂಡು ಅವರೊಂದಿಗೆ ಜಗಳವಾಡಿದ್ದಾನೆ.
ಆ ಸಂದರ್ಭದಲ್ಲಿ ತಂದೆ ಚಂದ್ರಪ್ಪ ಕಾರ್ಯ ನಿಮಿತ್ತ ಹೊರಗೆ ಹೋಗಿದ್ದರು.

ಬಾಲಕಿಯ ಶಿರಚ್ಛೇದ : ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಉದ್ವಿಗ್ನ ವಾತಾವರಣ

ಜಗಳದ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಮಗ ಕೈಗೆ ಸಿಕ್ಕಿದ ರಾಡ್‍ನಿಂದ ತಾಯಿ ತಲೆಗೆ ಹೊಡೆದಿದ್ದಾನೆ. ವಿಪರೀತ ರಕ್ತಸ್ರಾವವಾಗಿ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಕೆ.ಆರ್.ಪುರ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

RELATED ARTICLES

Latest News