Saturday, October 12, 2024
Homeರಾಷ್ಟ್ರೀಯ | Nationalಬಾಲಕಿಯ ಶಿರಚ್ಛೇದ : ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಉದ್ವಿಗ್ನ ವಾತಾವರಣ

ಬಾಲಕಿಯ ಶಿರಚ್ಛೇದ : ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಉದ್ವಿಗ್ನ ವಾತಾವರಣ

ಕೋಲ್ಕತ್ತಾ,ಫೆ.2- ಸಂಬಂಧಿಯೊಬ್ಬ ಬಾಲಕಿಯ(11) ಶಿರಚ್ಛೇದ ಮಾಡಿರುವ ಘಟನೆ ನಡೆದಿದೆ. ಘಟನೆ ಖಂಡಿಸಿ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ಹಿಂದೆ ಹಲವು ಬಾರಿ ಬಾಲಕಿ ಸಾರ್ವಜನಿಕವಾಗಿ ಅವಮಾನಿಸಿದ್ದರಿಂದ ನಾನು ಆಕೆಯನ್ನು ಕೊಂದಿರುವುದಾಗಿ ಆರೋಪಿ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾನೆ.

ಜನವರಿ 29ರಿಂದ ನಾಪತ್ತೆಯಾಗಿದ್ದ ಬಾಲಕಿಯ ಮುಂಡ ಮತ್ತು ರುಂಡ ಮಾಲ್ಡಾ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿವೆ. ಹುಡುಗಿಯ 27 ವರ್ಷದ ಚಿಕ್ಕಪ್ಪನನ್ನು ಸಿಸಿಟಿವಿ ಫೂಟೇಜ್ ಮೂಲಕ ಪತ್ತೆಹಚ್ಚಲಾಗಿದೆ. ಹುಡುಗಿ ಕಾಣೆಯಾಗುವ ಮೊದಲು ಆತ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದ.

ಆರೋಪಿ ಮೊದಲಿಗೆ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದ. ಆದರೆ ನಂತರ ಆಕೆಯನ್ನು ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿ 12 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

BREAKING : ನಟಿ ಪೂನಂ ಪಾಂಡೆ ಇನ್ನಿಲ್ಲ..!

ಆರೋಪಿ ಬಾಲಕಿಯ ಶಿರಚ್ಛೇದ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯನ್ನು ಖಂಡಿಸಿ ಭಾರೀ ಪ್ರತಿಭಟನೆ ವ್ಯಕ್ತವಾಗಿದ್ದು, ಅಮಾನುಷವಾಗಿ ಕೊಲೆ ಮಾಡಿರುವ ಬಾಲಕಿಯ ಚಿಕ್ಕಪ್ಪನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಘಟನೆಯನ್ನು ಖಂಡಿಸಿ ಬಿಜೆಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕೂಡ ಪ್ರತಿಭಟನಾ ರ್ಯಾಲಿಗಳು ಮತ್ತು ಮೌನ ಮೆರವಣಿಗೆ ನಡೆಸಿದ್ದವು.

RELATED ARTICLES

Latest News