Homeರಾಷ್ಟ್ರೀಯಜಮ್ಮು-ಕಾಶ್ಮೀರದ ಸರ್ಕಾರಿ ಶಾಲಾ ಪಠ್ಯದಲ್ಲಿ ಪ್ರತ್ಯೇಕತಾವಾದಿಗಳು ಹಾಗೂ ಉಗ್ರರ ವೈಭವೀಕರಣ : ವಿವಾದ ಸೃಷ್ಟಿ

ಜಮ್ಮು-ಕಾಶ್ಮೀರದ ಸರ್ಕಾರಿ ಶಾಲಾ ಪಠ್ಯದಲ್ಲಿ ಪ್ರತ್ಯೇಕತಾವಾದಿಗಳು ಹಾಗೂ ಉಗ್ರರ ವೈಭವೀಕರಣ : ವಿವಾದ ಸೃಷ್ಟಿ

J&K Admin Blacklists Authors of Two Books For ‘Glorifying’ Separatist Leaders

ಶ್ರೀನಗರ,ಜು.5- ಜಮ್ಮು-ಕಾಶ್ಮೀರದ ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ವಿತರಿಸಲಾಗಿರುವ ಪುಸ್ತಕವೊಂದರಲ್ಲಿ ಪ್ರತ್ಯೇಕತಾವಾದಿ ನಾಯಕರು ಹಾಗೂ ಶಿಕ್ಷೆಗೊಳಗಾದ ಉಗ್ರರನ್ನು ಮಹಾನ್‌ ವ್ಯಕ್ತಿಗಳು ಮತ್ತು ದಂತಕಥೆಗಳು ಎಂದು ವೈಭವೀಕರಿಸಿರುವ ಪ್ರಕರಣ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.ಪರ್ಸನಾಲಿಟೀಸ್‌‍ ಅಂಡ್‌ ಲೆಜೆಂಡ್‌್ಸ ಆಫ್‌ ಜೆ ಆ್ಯಂಡ್‌ ಕೆ ಹೆಸರಿನ ಈ ಪುಸ್ತಕವನ್ನು ಹಿಲಾಲ್‌ ಅಹದ್‌ ಮತ್ತು ಸಂತೋಷ್‌ ಮೀನಾ ಅವರು ಸಂಪಾದಿಸಿದ್ದಾರೆ. ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಣ ಅಭಿಯಾನದಡಿ ಅನುಮೋದನೆ ಪಡೆದ ಈ ಪುಸ್ತಕವನ್ನು, ಜಮು ಮತ್ತು ಕಾಶೀರ ಆಡಳಿತವು 2025-26ನೇ ಶೈಕ್ಷಣಿಕ ವರ್ಷಕ್ಕಾಗಿ ಖರೀದಿಸಿ, ಕೇಂದ್ರಾಡಳಿತ ಪ್ರದೇಶದಾದ್ಯಂತ ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ವಿತರಿಸಿದೆ ಎಂದು ಜಮು ಮತ್ತು ಕಾಶೀರ ಪೀಪಲ್ಸ್ ಫೋರಂ ಸದಸ್ಯ ದೀಪಕ್‌ ಕಪೂರ್‌ ಆರೋಪಿಸಿದ್ದಾರೆ.

ಈ ಪುಸ್ತಕದಲ್ಲಿ ಭಾರತದ ಭದ್ರತೆಗೆ ಸವಾಲೊಡ್ಡಿದ್ದ ಪ್ರತ್ಯೇಕತಾವಾದಿಗಳು ಮತ್ತು ಉಗ್ರರಾದ ಮಕ್ಬೂಲ್‌ ಭಟ್‌, ಸೈಯದ್‌ ಅಲಿ ಶಾ ಗೀಲಾನಿ, ಮಸರತ್‌ ಆಲಂ ಮತ್ತು ಹಯತ್‌ ನಾಯಕ ಮಿರ್ವೈಜ್‌ ಉಮರ್‌ ಫಾರೂಕ್‌ ಅವರಂತಹ ವ್ಯಕ್ತಿಗಳನ್ನು ಮಹಾನ್‌ ನಾಯಕರು ಎಂದು ಬಿಂಬಿಸಲಾಗಿದೆ.

ವಿಶೇಷವಾಗಿ ಮಕ್ಬೂಲ್‌ ಭಟ್‌ ಕುರಿತು ಪ್ರತ್ಯೇಕ ಅಧ್ಯಾಯವನ್ನೇ ರಚಿಸಿ, ಆತನನ್ನು ಕ್ರಾಂತಿಕಾರಿ ಹಾಗೂ ಶಹೀದ್‌-ಎ-ಆಜಮ್‌ ಎಂದು ವೈಭವೀಕರಿಸಲಾಗಿದೆ. ಸುಪ್ರೀಂಕೋರ್ಟ್‌ನ ಆದೇಶದಂತೆ, ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಬಳಿಕ 1984ರ ಫೆಬ್ರವರಿ 11ರಂದು ತಿಹಾರ್‌ ಜೈಲಿನಲ್ಲಿ ಮಕ್ಬೂಲ್‌ ಭಟ್‌ಗೆ ವಿಧಿಸಲಾದ ಮರಣದಂಡನೆಯ ಐತಿಹಾಸಿಕ ಸತ್ಯವನ್ನು ಈ ಪುಸ್ತಕದಲ್ಲಿ ಸಂಪೂರ್ಣವಾಗಿ ತಿರುಚಲಾಗಿದೆ ಎಂದು ದೂದಲಾಗಿದೆ.

ಬಿಜೆಪಿಯಿಂದ ತೀವ್ರ ಆಕ್ರೋಶ
ಈ ಘಟನೆಯನ್ನು ಖಂಡಿಸಿರುವ ಜಮು-ಕಾಶೀರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಸುನಿಲ್‌ ಶರ್ಮಾ, ಇದು ಎಳೆಯ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಅಕಾಡೆಮಿಕ್‌ ಜಿಹಾದ್‌(ಶೈಕ್ಷಣಿಕ ಜಿಹಾದ್‌) ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ಅವರು ತಕ್ಷಣವೇ ತಮ ಶಿಕ್ಷಣ ಸಚಿವೆ ಸಕೀನಾ ಇಟೂ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು.

ಜತೆಗೆ, ಈ ವಿವಾದಾತಕ ಪುಸ್ತಕವನ್ನು ಶಿಫಾರಸು ಮಾಡಿ ಶಾಲೆಗಳಿಗೆ ಸರಬರಾಜು ಮಾಡಿದ ಪ್ರತಿಯೊಬ್ಬರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಅವರನ್ನು ತಕ್ಷಣವೇ ಬಂಧಿಸಬೇಕು, ಎಂದು ಅವರು ಆಗ್ರಹಿಸಿದ್ದಾರೆ.

ಈ ಪ್ರಕರಣವು ಶೈಕ್ಷಣಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಪಠ್ಯಪುಸ್ತಕಗಳ ಆಯ್ಕೆ ಹಾಗೂ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರವು ಈ ಪುಸ್ತಕದ ಹಂಚಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸುತ್ತದೆಯೇ ಎಂಬುದು ಈಗ ಸಾರ್ವಜನಿಕರಲ್ಲಿ ಮೂಡಿರುವ ಪ್ರಮುಖ ಪ್ರಶ್ನೆಯಾಗಿದೆ.

RELATED ARTICLES
spot_img

Latest News