Friday, November 22, 2024
Homeರಾಷ್ಟ್ರೀಯ | Nationalರಾಜಕೀಯ ಪಕ್ಷ ಸ್ಥಾಪಿಸಿದ ವಿಜಯ್ ನಿರ್ಧಾರ ಸ್ವಾಗತಿಸಿದ ಪುದುಚೇರಿ ಸಿಎಂ ರಂಗಸಾಮಿ

ರಾಜಕೀಯ ಪಕ್ಷ ಸ್ಥಾಪಿಸಿದ ವಿಜಯ್ ನಿರ್ಧಾರ ಸ್ವಾಗತಿಸಿದ ಪುದುಚೇರಿ ಸಿಎಂ ರಂಗಸಾಮಿ

ಪುದುಚೇರಿ, ಫೆ 5 (ಪಿಟಿಐ) ತಮಿಳುನಾಡಿನಲ್ಲಿ ತಮಿಳಿಗ ವೆಟ್ರಿ ಕಳಗಂ ಪಕ್ಷ ಸ್ಥಾಪಿಸಿರುವ ಖ್ಯಾತ ಚಿತ್ರ ನಟ ವಿಜಯ್ ಅವರ ನಿರ್ಧಾರವನ್ನು ಪುದಚೇರಿ ಮುಖ್ಯಮಂತ್ರಿ ಎನ್ ರಂಗಸಾಮಿ ಅವರು ಶ್ಲಾಘಿಸಿದ್ದಾರೆ. ಅಖಿಲ ಭಾರತ ಎನ್‍ಆರ್‍ಸಿ ಪಕ್ಷದ ಸಂಸ್ಥಾಪಕರಾದ ರಂಗಸಾಮಿ ಅವರು ವಿಜಯ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಮತ್ತು ಅವರ ರಾಜಕೀಯ ಪ್ರವೇಶದ ಬಗ್ಗೆ ಅವರ ಇಚ್ಛೆಯನ್ನು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯ್ ತಮ್ಮ ಮುಂಬರುವ ಚಿತ್ರ ಗೋಟ್ ಚಿತ್ರೀಕರಣಕ್ಕಾಗಿ ಶನಿವಾರದಿಂದ ಪುದುಚೇರಿಯಲ್ಲಿ ಬೀಡುಬಿಟ್ಟಿದ್ದಾರೆ. ಪುದುಚೇರಿಯಲ್ಲಿ ಸರ್ಕಾರಿ ಸ್ವಾಮ್ಯದ ಆದರೆ ಈಗ ನಿಷ್ಕ್ರಿಯಗೊಂಡಿರುವ ಆಂಗ್ಲೋ-ಫ್ರೆಂಚ್ ಟೆಕ್ಸ್‍ಟೈಲ್ ರೋಡಿಯರ್ ಮಿಲ್‍ನ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಶೂಟಿಂಗ್ ನಡೆಯುತ್ತಿದ್ದು ಅವರನ್ನು ನೋಡಲು ಅಭಿಮಾನಿಗಳ ಮಹಾಪೂರವೇ ಹರಿದುಬರುತ್ತಿದೆ.

10 ವರ್ಷಗಳಲ್ಲಿ ಏಕೆ ಮೋದಿ ಗ್ಯಾರಂಟಿ ನೀಡಿರಲಿಲ್ಲ..? : ಸಿಎಂ ಸಿದ್ದರಾಮಯ್ಯ

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪುದುಚೇರಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೇಂದ್ರಾಡಳಿತ ಪ್ರದೇಶವು ಸಂಸತ್ತಿನ ಕೆಳಮನೆಯಲ್ಲಿ ಏಕೈಕ ಸ್ಥಾನವನ್ನು ಹೊಂದಿದೆ. ಇಲ್ಲಿ ಎಐಎನ್‍ಆರ್‍ಸಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅಂಗವಾಗಿರುವ ಬಿಜೆಪಿ ಚುನಾವಣೆಯಲ್ಲಿ ಸ್ರ್ಪಸಲು ಉದ್ದೇಶಿಸಿರುವುದರಿಂದ ಚುನಾವಣಾ ಸಂಬಂತ ಕೆಲಸವನ್ನು ಪ್ರಾರಂಭಿಸಿದೆ.

ಬಿಜೆಪಿಯ ಪುದುಚೇರಿ ಘಟಕದ ನಿಯೋಗವು ಇತ್ತೀಚೆಗೆ ರಂಗಸಾಮಿ ಅವರ ನಿವಾಸದಲ್ಲಿ ಪಕ್ಷದ ಚುನಾವಣಾ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಅವರೊಂದಿಗೆ ಔಪಚಾರಿಕ ಚರ್ಚೆ ನಡೆಸಿತು.

RELATED ARTICLES

Latest News