ಪಿಲಿಭಿತ್,ಫೆ.11- ತನಗೆ ಕಿರುಕುಳ ನೀಡುತ್ತಿದ್ದ ಪತ್ನಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಿಲಿಭಿತ್‍ನಲ್ಲಿ ನಡೆದಿದೆ. ಎಸ್‍ಪಿ ನಿವಾಸದ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪ್ರದೀಪ್ ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ ಪ್ರದೀಪ್ ಮೇಲೆ ಕೌಟುಂಬಿಕ ದೌರ್ಜನ್ಯದ ಬಗ್ಗೆ ಪತ್ನಿ ದೂರು ನೀಡಿದ್ದಾಳೆ ಎಂದು ವ್ಯಕ್ತಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆದರೆ, ಪತ್ನಿಯ ಕಿರುಕುಳದ ಬಗ್ಗೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದೆ ಪ್ರದೀಪ್ ಮತ್ತು ಇಶಾ ವಿವಾಹವಾಗಿದ್ದು, ಪ್ರದೀಪ್ ಅವರಿಂದ 5 ಲಕ್ಷಕ್ಕೆ ಬೇಡಿಕೆಯಿಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚರಣ್‍ಸಿಂಗ್ ಭಾರತರತ್ನ ಲಭಿಸಿರುವುದು ದೇಶದ 90 ಕೋಟಿ ರೈತರಿಗೆ ಸಂದ ಗೌರವ : ಚೌಧರಿ
ನಿನ್ನೆ ದೀಪ್ ಪತ್ನಿ ವಿರುದ್ಧ ದೂರು ನೀಡಲು ಎಸ್‍ಪಿ ಕಚೇರಿಗೆ ಹೋದರೂ ಅಧಿಕಾರಿ ಹಾಜರಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಪ್ರದೀಪ್ ಎಸ್ಪಿ ನಿವಾಸಕ್ಕೆ ತೆರಳಿ ವಿಷ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ) ಅತುಲ್ ಶರ್ಮಾ ಅವರು, ಸುಂಗಹಿರ್‍ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರದೀಪ್ ವಿಷ ಸೇವಿಸಿದ್ದಾರೆ. ಅವರನ್ನು ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.