Homeರಾಜ್ಯಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ವಿಷ ಸೇವಿಸಿ ಸಾವಿಗೆ ಶರಣು

ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ವಿಷ ಸೇವಿಸಿ ಸಾವಿಗೆ ಶರಣು

ನೆಲಮಂಗಲ,ಜು.13- ಪ್ರೆತಿಸಿ ಮದುವೆಯಾಗಿದ್ದ ನವವಿವಾಹಿತೆ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬಸವನಹಳ್ಳಿಯಲ್ಲಿ ನಡೆದಿದೆ. ಗೌರಿಬಿದನೂರಿನ ಬೀರಮನಹಳ್ಳಿ ನಿವಾಸಿ ತನುಜಾ (31) ಆತಹತ್ಯೆ ಮಾಡಿಕೊಂಡ ನವವಿವಾಹಿತೆ. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ತನುಜಾ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಲಕಾರಿ ಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕೆಲಸದ ಅವಧಿಯಲ್ಲಿ ಚಿಗುರಿದ್ದ ಪ್ರೆತಿ: ತನುಜಾ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಯಲಹಂಕದ ಮಾಯಸಂದ್ರ ನಿವಾಸಿ ರವೀಂದ್ರ ಎಂಬಾತನ ಪರಿಚಯವಾಗಿತ್ತು. ಈ ಪರಿಚಯ ದಿನಕಳೆದಂತೆ ಪ್ರೆತಿಗೆ ತಿರುಗಿತ್ತು. ಪರಸ್ಪರ ಪ್ರೆತಿಸುತ್ತಿದ್ದ ಇವರಿಬ್ಬರೂ ಮನೆಯವರಿಗೆ ತಿಳಿಸದೇ ಆರು ತಿಂಗಳ ಹಿಂದೆಯಷ್ಟೇ ಧರ್ಮಸ್ಥಳದಲ್ಲಿ ಸರಳವಾಗಿ ಮದುವೆಯಾಗಿದ್ದರು.

ಪಿಜಿ ಹಾಗೂ ಬಾಡಿಗೆ ಮನೆಯಲ್ಲಿ ವಾಸ್ತವ್ಯ:
ಮದುವೆಯ ನಂತರ ಸ್ವಲ್ಪ ಸಮಯ ಕಳೆಯಲಿ, ಆಮೇಲೆ ಮನೆಯಲ್ಲಿ ವಿಷಯ ತಿಳಿಸುತ್ತೇನೆ ಎಂದು ರವೀಂದ್ರ ಹೇಳಿ ತನುಜಾ ಅವರನ್ನು ಮೊದಲು ಪಿಜಿಯಲ್ಲಿ ಇರಿಸಿದ್ದನು. ತದನಂತರ ಯಲಹಂಕದ ಸಿಂಗಾಪುರದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ಇಬ್ಬರೂ ವಾಸವಿದ್ದರು ಎನ್ನಲಾಗಿದೆ.

ಫೋನ್ ನಲ್ಲಿ ಗಲಾಟೆ, ಸಂದೇಶ ಕಳುಹಿಸಿ ಆತಹತ್ಯೆ:
ನಿನ್ನೆ ತನುಜಾ ಅವರು ರವೀಂದ್ರನಿಗೆ ಫೋನ್ ಮಾಡಿ ತಕ್ಷಣ ಮನೆಗೆ ಬರುವಂತೆ ಕರೆದಿದ್ದರು. ಆದರೆ ರವೀಂದ್ರ ಈಗ ಬರಲು ಸಾಧ್ಯವಿಲ್ಲ, ಬೆಳಿಗ್ಗೆ ಬರುತ್ತೇನೆ ಎಂದು ಹೇಳಿದ್ದನು. ಇದರಿಂದ ತೀವ್ರ ಬೇಸರ ಹಾಗೂ ಜಿಗುಪ್ಸೆಗೊಂಡ ತನುಜಾ ಮೊಬೈಲ್‌ ಫೋನ್ ಸ್ವಿಚ್‌ ಆ್‌‍ ಮಾಡಿಕೊಂಡಿದ್ದರು. ತದನಂತರ ರಾತ್ರಿ 10 ಗಂಟೆಯ ಸುಮಾರಿಗೆ ರವೀಂದ್ರನಿಗೆ ನಾನು ವಿಷ ಕುಡಿದಿದ್ದು, ಬಸವನಹಳ್ಳಿಯಲ್ಲಿ ಕುಳಿತಿದ್ದೇನೆ ಎಂದು ಮೊಬೈಲ್‌ ಸಂದೇಶ (ಮೆಸೇಜ್‌‍) ಕಳುಹಿಸಿದ್ದರು .

ಆಸ್ಪತ್ರೆಗೆ ತಲುಪುವಷ್ಟರಲ್ಲೇ ಸಾವು: ಪತ್ನಿಯ ಸಂದೇಶ ನೋಡಿ ಗಾಬರಿಗೊಂಡ ರವೀಂದ್ರ ತಕ್ಷಣವೇ ಬಸವನಹಳ್ಳಿಗೆ ಧಾವಿಸಿ, ತನುಜಾ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಷ್ಟರಲ್ಲಾಗಲೇ ತನುಜಾ ಮೃತಪಟ್ಟಿರು ವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟೌನ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News